ನೌಕಾಪಡೆಗೆ ಐಎನ್ ಎಸ್ ವಿಶಾಖಪಟ್ಟಣಂ ಸೇರ್ಪಡೆ
ಮುಂಬೈ : ಭಾರತೀಯ ನೌಕಾ ಪಡೆಗೆ ದೇಶದ ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ಧ್ವಂಸ ಸಾಮಥ್ರ್ಯದ ಸಮರ ನೌಕೆ – ಐಎನ್ ಎಸ್ ವಿಶಾಖಪಟ್ಟಣಂ ಸೇರ್ಪಡೆಗೊಂಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಸಮರ ನೌಕೆಯನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಈ ಅತ್ಯಾಧುನಿಕ ಯುದ್ಧ ನೌಕೆಯನ್ನು ನೌಕಾಪಡೆಗೆ ಸೇರ್ಪಡೆ ಮಾಡಿರುವುದು ಕೇವಲ ನೌಕಾಪಡೆಗಷ್ಟೇ ಅಲ್ಲ, ಇಡೀ ರಕ್ಷಣಾ ಕ್ಷೇತ್ರಕ್ಕೆ ಒಂದು ಹೆಮ್ಮೆಯ ವಿಚಾರವಾಗಿದೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಪ್ರಗತಿಯು ಇಡೀ ವಿಶ್ವದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಗುರುತರ ಜವಾಬ್ದಾರಿ ನಮ್ಮ ಭಾರತೀಯ ನೌಕಾಪಡೆಯ ಮೇಲಿದೆ ಎಂದರು.
ನಮ್ಮ ರಕ್ಷಣಾ ಕ್ಷೇತ್ರವನ್ನು ಅತ್ಯಾಧುನಿಕಗೊಳಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ವಿಶ್ವದಲ್ಲಿ 2023ರ ವೇಳೆಗೆ ರಕ್ಷಣಾ ಕ್ಷೇತ್ರದಲ್ಲಿ 2.1 ಟ್ರಿಲಿಯನ್ ಯುಎಸ್ ಡಾಲರ್ ನಷ್ಟು ಹೂಡಿಕೆ ಮಾಡಲಾಗುತ್ತದೆ.
ಅದೇರೀತಿ ಮುಂದಿನ 5 ರಿಂದ 10 ವರ್ಷಗಳಲ್ಲಿ ಈ ಹೂಡಿಕೆ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ರಕ್ಷಣಾ ಸಚಿವರು ತಿಳಿಸಿದರು.
ಐಎನ್ ಎಸ್ ವಿಶಾಖಪಟ್ಟಣಂ ಬಗ್ಗೆ ಮಾಹಿತಿ
ಈ ಯುದ್ಧ ನೌಕೆಯನ್ನು ಬೈನ ಮಡಗಾಂವ್ ಡಾಕ್ ಲಿಮಿಟೆಡ್ ಸಂಸ್ಥೆಯು ಸಿದ್ಧಪಡಿಸಿದೆ. ಇದು ಭಾರತೀಯ ನೌಕಾಪಡೆ ಇದುವರೆಗಿನ ಅತಿ ಶಕ್ತಿಯುತ ಸಮರ ನೌಕೆ ಆಗಿದೆ. ಈ ನೌಕೆಗೆ ಕ್ಷಿಪಣಿಗಳ ಉಡ್ಡಯನ ಮತ್ತು ಧ್ವಂಸ ಮಾಡಬಲ್ಲ ಸಾಮಥ್ರ್ಯವಿದೆ. ಅಲ್ಲದೆ ಈ ನೌಕೆಯಲ್ಲಿ ಆಧುನಿಕ ಯುದ್ಧ ಕೌಶಲ್ಯಗಳು ಲಭ್ಯವಿದೆ. ನೌಕೆಯೂ 2 ಸಾವಿರದ 400 ಕಿಲೋ ಮೀಟರ್ ದೂರ ಚಲಿಸುವ ಸಾಮಥ್ರ್ಯ ಹೊಂದಿದೆ. ಗಂಟೆಗೆ 55 ಕಿಲೋ ಮೀಟರ್ ವೇಗದಲ್ಲಿ ಕ್ರಮಿಸಲಿದೆ.