ಸ್ಕ್ವಿಡ್ ಗೇಮ್‘ ವೆಬ್ ಸರಣಿಯಿಂದ ಸ್ಪೂರ್ತಿ ಪಡೆದು ಬರಲಿದೆ ರಿಯಾಲಿಟಿ ಶೋ ….
ಭಾರತ ಸೇರಿದಂತೆ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿರುವ ದಕ್ಷಿಣ ಕೊರಿಯಾದ ವೆಬ್ ಸಿರೀಸ್ ‘ಸ್ಕ್ವಿಡ್ ಗೇಮ್’ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ‘ಸ್ಕ್ವಿಡ್ ಗೇಮ್’ ವೆಬ್ ಸರಣಿ ನಿಂದ ಸ್ಫೂರ್ತಿ ಪಡೆದು ರಿಯಾಲಿಟಿ ಶೋ ಒಂದು ನೆಟ್‌ಫ್ಲಿಕ್ಸ್ ಆರಂಭವಾಗಲಿದೆ.
ಅಂದಹಾಗೆ… ವೆಬ್ ಸರಣಿಯ ಗೇಮ್ ನಲ್ಲಿ ಸೋತವರನ್ನ ಕೊಲ್ಲಲಾಗುತ್ತಿತ್ತು. ಆದರೆ ಇಲ್ಲಿ ಚಿಂತೆ ಬೇಡ ಇದು ಕೇವಲ ರಿಯಾಲಿಟಿ ಶೋ ಅಷ್ಟೆ…. ಸ್ಪರ್ದಿಗಳು ವೆಬ್ ಸೀರೀಸ್‌ನಂತೆ ತಮ್ಮ ಪ್ರಾಣವನ್ನೇ ಪಣಕ್ಕಿಡಬೇಕಾಗಿಲ್ಲ.
ಈ ರಿಯಾಲಿಟಿ ಶೋ ಬಹುತೇಕ ‘ಸ್ಕ್ವಿಡ್ ಗೇಮ್’ ನಂತೆ ಇರಲಿದೆ. ಶೋನಲ್ಲಿ ಭಾವವಹಿಸಿ ವಿಜೇತರಾದವರಿಗೆ $ 4.56 ಮಿಲಿಯನ್ ಅಂದರೆ ಸುಮಾರು 36 ಕೋಟಿ ರೂಪಾಯಿಗಳು ಬಹುಮಾನವಾಗಿ ಸಿಗಲಿದೆ. ಇದು ಯಾವುದೇ ರಿಯಾಲಿಟಿ ಶೋನ ಇತಿಹಾಸದಲ್ಲಿ ಅತಿ ದೊಡ್ಡ ನಗದು ಬಹುಮಾನವಾಗಿರಲಿದೆ.
ಈ ರಿಯಾಲಿಟಿ ಶೋನಲ್ಲಿ ಜಗತ್ತಿನಾದ್ಯಂತ 456 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ‘ಸ್ಕ್ವಿಡ್ ಗೇಮ್: ದಿ ಚಾಲೆಂಜ್’ ಎಂದು ನೆಟ್‌ಫ್ಲಿಕ್ಸ್ ಹೆಸರಿಟ್ಟಿದೆ.
ಈ ರಿಯಾಲಿಟಿ ಶೋನಲ್ಲಿ, ಸ್ಪರ್ಧಿಗಳು ಮೂಲ ವೆಬ್ ಸೀರಿಸ್ ನಿಂದ ಸ್ಫೂರ್ತಿ ಪಡೆದ ಅನೇಕ ಆಟಗಳ ಮೂಲಕ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಮಾತ್ರವಲ್ಲದೆ, ಅನೇಕ ಹೊಸ ಆಟಗಳೂ ಇರುತ್ತವೆ. ಈ ಶೋನಲ್ಲಿ ಆಟಗಾರರ ತಂತ್ರಗಳು, ಮೈತ್ರಿಗಳು ಮತ್ತು ಕ್ಯಾರಕ್ಟರ್ ಅನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ” ಎಂದು ನೆಟ್‍ಫ್ಲಿಕ್ಸ್ ಪ್ರಕಟಣೆ ತಿಳಿಸಿದೆ.