ಬೆಳಗಾವಿಯಲ್ಲಿ ದ್ವೇಷದ ಕಿಚ್ಚು | ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ Sangolli Rayanna saaksha tv
ಬೆಳಗಾವಿ : ಕುಂದಾನಗರಿಯಲ್ಲಿ ದ್ವೇಷದ ಕಿಚ್ಚು ತೀವ್ರಗೊಂಡಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಲಾಗಿದೆ.
ನಿನ್ನೆ ತಡರಾತ್ರಿ ಬೆಳಗಾವಿ ಅನಗೋಳದ ಕನಕದಾಸ ಕಾಲೋನಿಯಲ್ಲಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ವಿಕೃತಿ ಮಾಡಿದ್ದಾರೆ.
ಇತ್ತ ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಅವಮಾನ ಮಾಡಿದ ಆರೋಪದಡಿ ಬೆಳಗಾವಿ ಧರ್ಮವೀರ ಸಂಭಾಜೀ ವೃತ್ತದಲ್ಲಿ ನಿನ್ನೆ ರಾತ್ರಿ ಸಾವಿರಕ್ಕೂ ಹೆಚ್ಚು ಜನ ಸೇರಿ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ ಅಪರಿಚಿತ ವಾಹನದ ಗಾಜುಗಳು ಪುಡಿ ಪುಡಿ ಮಾಡಿದ್ದಾರೆ. ಬೆಳಗಾವಿ ಮಾರುಕಟ್ಟೆ ಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಅಲ್ಲದೇ ಅಧಿವೇಶನ ಕರ್ತವ್ಯಕ್ಕೆ ಬಂದಿರುವ ಸರ್ಕಾರಿ ವಾಹನಗಳು, ಗಲ್ಲಿಗಳಲ್ಲಿ, ಹೋಟೆಲ್ ಮುಂದೆ ನಿಲ್ಲಿಸಿದ ವಾಹನಗಳಿಗೆ ಹಾನಿ ಮಾಡಿದ್ದಾರೆ.
ಇನ್ನು ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರಿಂದ ಲಾಠಿ ಚಾರ್ಜ್ ನಡೆಸಲಾಗಿದೆ. ಸದ್ಯ ಬೆಳಗಾವಿಯಲ್ಲಿ ಬೂದಿಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ.