ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಗೆ ಅವಮಾನ Chris Gayle saakshatv
ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ ಕ್ರಿಸ್ ಗೇಲ್ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಮಾಡಿರುವ ಕಿತಾಪತಿ ಅಷ್ಟಿಷ್ಟಲ್ಲ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಸಾಧಾರಣ ಮಟ್ಟದ ಪ್ರದರ್ಶನ ನೀಡಿರುವ ಕ್ರಿಸ್ ಗೇಲ್ ಚುಟುಕು ಕ್ರಿಕೆಟ್ ನಲ್ಲಿ ಮಾಡಿರುವ ಸಾಧನೆ ನಃ ಭೂತೋ ನಃ ಭವಿಷ್ಯತಿ.
ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ತಂಡದ ಆಟಗಾರನಾಗಿದ್ರೂ ಸದ್ದು ಮಾಡಿದ್ದು ಟಿ-ಟ್ವೆಂಟಿ ಲೀಗ್ ಟೂರ್ನಿಗಳಲ್ಲಿ. ಸುಮಾರು 20ಕ್ಕೂ ಹೆಚ್ಚು ಫ್ರಾಂಚೈಸಿಗಳ ಪರ ಆಡಿರುವ ಕ್ರಿಸ್ ಗೇಲ್ ಟಿ-ಟ್ವಿಂಟಿ ಕ್ರಿಕೆಟ್ ನ ರಣಬೇಟೆಗಾರನಂತೆ ಅಬ್ಬರಿಸಿ ಬೊಬ್ಬಿರಿದಿದ್ದಾರೆ.
ಹೌದು..! ಕ್ರಿಸ್ ಗೇಲ್ ಕ್ರಿಸ್ ನಲ್ಲಿದ್ರೆ ಬೌಲರ್‍ಗಳ ಎದೆಬಡಿತ ಜೋರಾಗುತ್ತೆ. ಗೇಲ್ ಬ್ಯಾಟ್ ಹಿಡಿದು ಘರ್ಜಿಸಲು ನಿಂತರೇ ಅವರನ್ನು ತಡೆಯುವುದು ತುಂಬಾನೇ ಕಷ್ಟ ಕಷ್ಟ. ಮೈದಾನದಲ್ಲಿ ಗೇಸ್ ಅಕ್ಷರಶಃ ರನ್ ಸುನಾಮಿಯನ್ನು ಸೃಷ್ಠಿಸುತ್ತಾರೆ. ಬ್ಯಾಟ್ ಇರೋದೇ ಹೊಡೆಯೋಕೆ. ಚೆಂಡು ಇರೋದು ದಂಡಿಸೋಕೆ ಅನ್ನೋ ಮಂತ್ರಪಠಿಸಿಕೊಂಡು ಕ್ರಿಸ್ ಗೇಲ್ ಬ್ಯಾಟಿಂಗ್ ಮಾಡುತ್ತಾರೆ. ಹೀಗಾಗಿಯೇ ಅವರನ್ನ ಯುಸಿವರ್ಸಲ್ ಬಾಸ್ ಎಂದು ಕರೆದು ಕೊಂಡಾಡುತ್ತಾರೆ.
ಆದ್ರೆ ಇದೀಗ ವೆಸ್ಟ್ ಇಂಡೀಸ್ ನ ಕ್ರಿಕೆಟ್ ಬೋರ್ಡ್ ಕ್ರಿಸ್ ಗೇಲ್ ಗೆ ಅವಮಾನ ಮಾಡಿದೆ. ತವರು ನೆಲದಲ್ಲಿ ಟಿ20ಗೆ ವಿದಾಯ ಹೇಳುವ ಆಸೆಯನ್ನು ಕ್ರಿಕೆಟ್ ಮಂಡಳಿ ನಿರ್ಲಕ್ಷಿಸಿದೆ. ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ತಂಡದಲ್ಲಿ ಕ್ರಿಸ್ ಗೆ ಸ್ಥಾನ ನೀಡದೆ ಅವಮಾನ ಮಾಡಿದೆ.
ಕ್ರಿಸ್ ಗೇಲ್ ತನ್ನ ತವರು ನೆಲದಲ್ಲಿ ಕೊನೆಯ ಪಂದ್ಯವಾಡಿ ಟಿ 20 ಕ್ರಿಕೆಟ್ ಗೆ ಗುಡ್ ಬೈ ಹೇಳೋದಾಗಿ ತಿಳಿಸಿದ್ದರು. ಆದ್ರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಗೇಸ್ ಮನವಿಗೆ ಸೊಪ್ಪಾಕಿಲ್ಲ.
ಇನ್ನು ಗೇಲ್ ಟಿ 20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ, ಗೇಲ್ ಒಟ್ಟು 452 ಪಂದ್ಯಗಳಲ್ಲಿ 145.4 ಸ್ಟ್ರೈಕ್ ರೇಟ್‌ನೊಂದಿಗೆ 14,321 ರನ್ ಗಳಿಸಿದ್ದಾರೆ. ಇದರಲ್ಲಿ 87 ಅರ್ಧ ಶತಕ ಮತ್ತು 22 ಶತಕಗಳಿವೆ. 27 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. 175 ರನ್ ಟಿ 20 ಕ್ರಿಕೆಟ್ ನಲ್ಲಿ ಗೇಲ್ ರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.









