ಭಾರತದ ಬದ್ಧ ವೈರಿ ರಾಷ್ಟ್ರ ಪಾಕ್ ನ ಇಂಟ್ರೆಸ್ಟಿಂಗ್ ವಿಚಾರಗಳು ನಿಮಗೆ ಗೊತ್ತಾ..!
ಭಾರತದ ಬದ್ಧ ವೈರಿ ರಾಷ್ಟ್ರ ಅಂದ ತಕ್ಷಣ ನೆನಪಾಗೋ ದೇಶ ಅಂದ್ರೆ ಅದು ಬೇರೆ ಯಾವುದೂ ಅಲ್ಲ ಒಮದು ಕಾಲದಲ್ಲಿ ಭಾರತದ ಭಾಗವಾಗಿದ್ದ ಪಾಕಿಸ್ತಾನ. ಈ ಪಾಕಿಸ್ತಾನ ಅಂದ ತಕ್ಷಣ ತಲೆಯಲ್ಲಿ ಕಾಶ್ಮೀರ , ಇಮ್ರಾನ್ ಖಾನ್ , ಕ್ರಿಕೆಟ್ , ಮುಖ್ಯವಾಗಿ ಉಗ್ರಗಾಮಿ ರಾಷ್ಟ್ರ ಎಂಬ ವಿಚಾರಗಳು ತಲೆಗೆ ಬರುತ್ತೆ ಹವದಾ ಇಲ್ವಾ… ಪಾಕ್ ಅಲ್ಲಿನ ಸಂಸ್ಕøತಿ, ಉಡುಗೆ ತೊಡಗೆ, ಬಾಷೆಯೂ ಭಾರತದ ಸಂಸ್ಕøತಿಗೆ ಸ್ವಲ್ಪ ಹೋಲಿಕೆಯಾಗುತ್ತದೆ. ಈ ದೇಶದ ಬಗ್ಗೆ ಬಹುತೇಕ ಬಾರತಿಯರಿಗೆ ಕೋಪ ಇರೋದು ಸಹಜ.
ಆದ್ರೆ ಪ್ರತಿ ನಾಣ್ಯಕ್ಕೆ 2 ಮುಖಗಳಿರೋ ಹಾಗೆ ಪ್ರತಿ ವ್ಯಕ್ತಿ, ವಿಚಾರ, ದೇಶಗಳಲ್ಲೂ ಕೆಟ್ಟವರು ಒಳ್ಳೆಯವರು, ಇದ್ದೇ ಇರುತ್ತೆ. ಭಾರತದ ರೀತಿಯಲ್ಲೇ ಪಾಕ್ತಿಸ್ತಾನದಲ್ಲೂ ಒಳ್ಳೆಯ ಜನರಿದ್ದಾರೆ. ಆದ್ರೆ ಅಲ್ಲಿನ ಪಾಲಿಟಿಕ್ಸ್, ರಾಜಕಾರಣಿಗಳು, ಅಲ್ಲಿನ ಮೀಡಿಯಾ ತಪ್ಪು ಸಂದೇಶಗಳ ಮೂಲಕ ಜನರನ್ನ ದಾರಿಗೆ ತಪ್ಪಿಸುತ್ತಾಯಿದೆ. ಇದರಿಂದಾಗಿ ಪಾಕಿಸ್ತಾನದ ಹೆಸರು ಇಡೀ ವಿಶ್ವಾದ್ಯಂತ ಹಾಳಾಗಿದೆ. ಇನ್ನೂ ಪಾಕಿಸ್ತಾನದಲ್ಲಿ ಸರ್ಕಾರವೇ ಉಗ್ರರ ಪೋಷನೆ ಮಾಡೋದು ಗೊತ್ತಿಲ್ಲದ ಸಂಗತಿಯೇನಲ್ಲ.
ಆದ್ರೆ ನಾವಿವತ್ತು ನಮ್ಮ ನೆರೆಯ ರಾಷ್ಟ್ರದ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್, ವಿಸೇಷತೆಗಳು, ಪ್ರವಾಸಿ ತಾಣಗಳು, ಸಂಸ್ಕøತಿ ಇವುಗಳ ಬಗ್ಗೆ ಇವತ್ತು ತಿಳಿಯೋಣ.
ಮೊದಲಿಗೆ ಎಲ್ರಿಗೂ ಗೊತ್ತಿರುವ ಹಾಗೆ ಭಾರತ ಹಾಗೂ ಪಾಕಿಸ್ತಾನಕ್ಕೆ ಸ್ವತಂತ್ರ್ಯ ಸಿಕ್ಕಿದ್ದು, ಒಂದೇ ಸಮಯಕ್ಕೆ ಆದ್ರೂ ಸ್ವಾತಂತ್ರ್ಯ ದಿನಾಚರಣೆಯ ದಿನಾಂಕ ಬೇರೆ ಬೇರೆ ಇದೆ. ಎಸ್ ಭಾರತ ಆಗಸ್ಟ್ 15ಕ್ಕೆ ಸ್ವತಂತ್ರ್ಯ ದಿನಾಚರಣೆ ಆಚರಿಸಿದ್ರೆ, ಪಾಕಿಸ್ತಾನ ಆಗಸ್ಟ್ 14 ರಂದು ಆಚರಣೆ ಮಾಡುತ್ತೆ.
ಪಾಕಿಸ್ತಾನ ಬೆಟ್ಟಗುಡ್ಡ ಪ್ರದೇಶಗಳು ರೋಮಾಂಚನಕಾರಿ ಅನುಭೂತಿ ನೀಡಿದ್ರೆ, ಇಲ್ಲಿನ ಆಹಾರಗಳು ಲೈಫ್ ಲಾಂಗ್ ನೆನಪಲ್ಲಿ ಇರುತ್ತೆ.
ಪಾಕಿಸ್ತಾನ – ಇರಾನ್, ಅಫ್ಘಾನಿಸ್ತಾನ್, ಚೈನಾ, ಭಾರತದ ಜೊತೆ ತನ್ನ ಗಡಿಯನ್ನ ಹಂಚಿಕೊಂಡಿದೆ.
ಪಾಕಿಸ್ತಾನದ ದಕ್ಷಿಣ ಬಾಗದಲ್ಲಿ ಅರೇಬಿಯನ್ ಮಹಾಸಾಗರವಿದೆ.
ಈ ದೇಶದ ಒಟ್ಟು ಜನಸಂಖ್ಯೆ ಸುಮಾರು 23 ಕೋಟಿ – ವಿಶ್ವದ 5 ನೇ ದೊಡ್ಡ ಜನಸಂಖ್ಯಾ ರಾಷ್ಟ್ರವೂ ಹೌದು
ಪಾಕಿಸ್ತಾನ್ – ಪಾಕ್ ಅಂದ್ರೆ ಪವಿತ್ರ ಸ್ಥಾನ ಅಂದ್ರೆ ಸ್ಥಳ : ಹೀಗೆ 2 ಶಬ್ಧಗಳ ಜೋಡಣೆಯಿಂದ ಹುಟ್ಟಿರುವ ಹೆಸರು ಪಾಕಿಸ್ತಾನ್. – ಲ್ಯಾಂಡ್ ಆಫ್ ಪ್ಯೂರಿಟಿ.
ಪಾಕಿಸ್ತಾನಕ್ಕೂ ಫುಟ್ ಬಾಲ್ ಆಟಕ್ಕೂ ಎಲ್ಲಿಂದ ಎಲ್ಲಿಗೂ ಸಂಬಂಧವಿಲ್ಲ. ಆದ್ರೆ ನಿಮಗೆ ಆಶ್ಚರ್ಯ ಆಗಬಹುದು ಪಾಕಿಸ್ತಾನ ಇಡೀ ವಿಶ್ವಕ್ಕೆ ಹೆಚ್ಚು ಫುಟ್ ಬಾಲ್ ಗಳನ್ನ ಸಪ್ಲೈ ಮಾಡುವ ಟಾಪ್ ರಾಷ್ಟ್ರ.
ಪಾಕ್ ನಲ್ಲಿ ಅನುಮತಿ ಇಲ್ಲದೇ ಮತ್ತೊಬ್ಬರ ಪೋನ್ ಮುಟ್ಟುವುದು ಕಾನುನು ಬಾಹಿರ , ಶಿಕ್ಷಾರ್ಹ ಅಪರಾಧ. ಒಂದುವೇಳೆ ಈ ಎಈತಿ ಮಾಡಿ ಸಿಕ್ಕಿಬಿದ್ರೆ 6 ತಿಂಗಳು ಜೈಲು ಗ್ಯಾರಂಟಿ. ಪಾಕಿಸ್ತಾನ ತನ್ನ ನಾಗರಿಕರಿಗೆ ಇಸ್ರೇಲ್ ದೇಶಕ್ಕೆ ಹೋಗುವುದಕ್ಕೆ ವೀಸಾ ಕೊಡೋದಿಲ್ಲ. ಹೀಗೆ ಯಾಕೆ..ಅಸಲಿಗೆ ಪಾಕಿಸ್ತಾನ ಇಸ್ರೇಲ್ ದೇಶವನ್ನ ದೇಶ ಅಂತಲೇ ಒಪ್ಪಿಕೊಂಡಿಲ್ಲ.
ಪಾಕಿಸ್ತಾನದಲ್ಲಿ ವಿದ್ಯಾಭ್ಯಾಸ ಮಾಡಿದ್ರೆ, ಒಮದುವೇಳೆ ಅಲ್ಲಿ ಶಿಕ್ಷಣಕ್ಕೆ 2 ಲಕ್ಷಕ್ಕಿಂತ ಅಧಿಕ ಹಣ ಖರ್ಚು ತಗುಲತ್ತೆ ಅಂದ್ರೆ ಅಂತವರು ಸರ್ಕಾರಕ್ಕೆ ತಮ್ಮ ಶಿಕ್ಷಣಕ್ಕೆ ವ್ಯಯಿಸುವ ಹಣದ 5 % ಟ್ಯಾಕ್ಸ್ ಕಟ್ಟುವ ನಿಯಮವಿದೆ. ಆದ್ರೆ ಪಾಕಿಸ್ತಾನದಲ್ಲಿ ಉರ್ದು ಮಾತನಾಡೋರು ಇರೋದು ಕೇವಲ 8% ಜನರು ಮಾತ್ರ ಉರ್ದು ಮಾತನಾಡ್ತಾರೆ. ಎಸ್ ಇಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಅಂದ್ರೆ ಅದು ಪಂಜಾಬಿ. ಪಾಕಿಸ್ತಾನದ ಅರ್ಧಕ್ಕಿಂತ ಹೆಚ್ಚು ಜನರು ಪಂಜಾಬಿ ಬಾಷೆಯನ್ನೇ ಮಾತನಾಡ್ತಾರೆ.
ಪಾಕಿಸ್ತಾನದ ಆರ್ಥಿಕ ಸ್ಥಿತಿ ಮೊದಲಿನಿಂದಲೂ ಸಂಕಷ್ಟದಲ್ಲಿ ಇತ್ತು. ಈಗ ಪಾತಾಳಕ್ಕೆ ಕುಸಿದಿದೆ. ಇದರ ಪರಿಣಾಮ ಟಮೋಟೋ ಬೆಲೆ ಕೆಜಿಗೆ 300 ರೂಪಾಯಿ , ಮೊಟ್ಟೆಗೆ 50 ರುಪಾಯಿ ಹಾಕಿ ಜನರಿಂದ ಹಣ ಲೂಟಿ ಮಾಡಿ ಬೊಕ್ಕಸ ತುಂಬಿಸೋ ಪ್ರಯತ್ನ ಮಾಡ್ತಿದೆ. ಅಲ್ಲಿನ ಸರ್ಕಾರ. ಮಾಡೇ ಮಾಡುತ್ತೆ ಉಗ್ರರನ್ನೂ ಪೋಷನೆ ಮಾಡೋದಕ್ಕೂ ಸರ್ಕಆರಕ್ಕೆ ಹಣ ಬೇಕಲ್ವಾ. ವೆಲ್ ಈ ದೆಶದ ಹಳ್ಳಿಗಳಲ್ಲಿ 80 % ಕ್ಕಿಂತಲೂ ಅಧಿಕ ಬಡವರಿದ್ದಾರೆ. ಪಾಕಿಸ್ತಾನದಲ್ಲಿ ಇವತ್ತಿಗೂ ಕೂಡ ಎಷ್ಟೋ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಿದೆ. ಅಷ್ಟೇ ಅಲ್ಲ 50% ಅಧಿಕ ಜನರ ವರಮಾನ ದಿನಕ್ಕೆ 100 ರೂಪಾಯಿಗಿಂತಲೂ ಕಡಿಮೆಯಿದೆ. ವಿಶ್ವದ ಬಡ ರಾಷ್ಟ್ರಗಳಲ್ಲಿ ಪಾಕಿಸ್ತಾನವನ್ನ ಗುರುತಿಸಲಾಗುತ್ತೆ.
ಇನ್ನೂ ಆಶ್ಚರ್ಯಕರ ವಿಚಾರ ಅಂದ್ರೆ ಪಾಕಿಸ್ತಾನ ಸ್ವತಂತ್ರಗೊಂಡಾಗ ಒಟ್ಟು ದೇಶದ ಜನಸಂಖ್ಯೆ 3 ಕೋಟಿ ಇತ್ತು. ಈಗ 23 ಕೋಟಿ ಸನಿಹಕ್ಕೆ ತಲುಪಿದೆ.
ಇಡೀ ವಿಸ್ವದಲ್ಲಿ ಅತ್ಯಂತ ಸುಂದರ ಟ್ರಕ್ ಗಳು ಪಾಕಿಸ್ತಾನದಲ್ಲಿವೆ ಅಂದ್ರೆ ಆಶ್ಚರ್ಯ ಆಗುತ್ತೆ ಆದ್ರೂ ಅತ್ಯ. ಅಲ್ಲಿನ ಜನ ಈ ರೀತಿ ಯೋಚನೆ ಮಾತಡಾರೆ. ಅಲ್ಲಿನ ಜನರು ಟ್ರಕ್ ಗಳನ್ನ ಮಧುಮಗಳ ರೀತಿಯಲ್ಲಿ ಅಲಂಕಾರ ಮಾಡೋದನ್ನ ಇಷ್ಟ ಪಡ್ತಾರೆ.
ಶಿಕ್ಷಣದ ವಿಚಾರದಲ್ಲಿ ಬಾರತಕ್ಕಿಂತಲೂ ತುಂಬ ಹಿಂದೆ ಬಿದ್ದಿದೆ ಪಾಕಿಸ್ತಾನ – ಈ ದೆಶದಲ್ಲಿ ಶಿಕ್ಷಣದ ಪ್ರಮಾಣ ಕೇವಲ 60% ಮಾತ್ರ.
ಪಾಕಿಸ್ತಾನದಲ್ಲಿ ಯಾವುದೇ ಕ್ವಾಲಿಪಿಕೆಶನ್, ವಿದ್ಯಾರ್ಹತೆ ಇಲ್ಲದೇ ಇದ್ರು ರಾಷ್ಟ್ರಪತಿಯಾಗುವ ಅವಕಾಶವಿದೆ. ಈ ವಿಚಾರದಲ್ಲಿ ಪಾಕಿಸ್ತಾನ ಇಡೀ ವಿಶ್ವವನ್ನೇ ಹಿಂದಿಟ್ಟಿದೆ.
ಪಾಕಿಸ್ತಾನದಲ್ಲಿ ರಂಜಾನ್ ಸಮಯದಲ್ಲಿ ಮನೆಯಿಂದ ಹೊರಗಡೆ ಏನನ್ನೂ ತಿನ್ನುವುದಕ್ಕೆ ಅವಕಾಶವಿಲ್ಲ. ಅಲ್ಲದೇ ಇದು ಇಲ್ಲೀಗಲ್ ಕೂಡ ಹೌದು. ಅಷ್ಟೇ ಅಲ್ಲ ಮುಸ್ಲಿಮೇತರರು ಕೂಡ ಈ ನಿಯವiವನ್ನ ಪಾಲಿಸುವುದು ಕಡ್ಡಾಯ.
ಪಾಕಿಸ್ತಾನವನ್ನ ಹೊಗಳಬೇಕಾದ ವಿಚಾರವೂ ಇದೆ. ಅದು ಅವರ ಪರಿಸರ ಪ್ರೇಮ. ಎಸ್ ಒಂದು ದಿನದಲ್ಲಿ ಅತಿ ಹೆಚ್ಚು ಗಿಡಗಳನ್ನ ನೆಡುವ ದಾಖಲೆ ಪಾಕಿಸ್ತಾನದ್ದು. ಇಲ್ಲಿ ಒಂದು ದಿನಕ್ಕೆ ಸುಮಾರು 7,50000 ಗಿಡಗಳನ್ನ ನೆಡಲಾಗುತ್ತೆ.
ಪಾಕಿಸ್ತಾನದ ಆಹಾರವನ್ನ ವಿಶ್ವದ ಸ್ವಾದಿಷ್ಟ ಪಕ್ವಾನಗಳ ಲಿಸ್ಟ್ ಗೆ ಸೇರಿಸಲಾಗಿದೆ. ಅಷ್ಟೇ ಅಲ್ಲ ನಾನ್ ವೆಜ್ ಆಹಾರದ ವಿಚಾರದಲ್ಲಿ ಪಾಕಿಸ್ತಾನ ಇಡೀ ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತಲೂ
ಟಾಪ್ ಅಲ್ಲಿದೆ ಎಂದೇ ಹೇಳಲಾಗುತ್ತೆ.
ಇಲ್ಲಿನ ಚಿತ್ರೋದ್ಯಮವನ್ನ ಲಾಲೀವುಡ್ ಎಂದು ಕರೆಯಲಾಗುತ್ತೆ- ಆದ್ರೆ ಈ ಸಿನೆಮಾ ಇಂಡಸ್ಟ್ರಿ ಅಷ್ಟು ಪಾಪ್ಯುಲರ್ ಆಗಿಲ್ಲ. ಆದ್ರೆ ಪಾಕಿಸ್ತಾನದಲ್ಲಿ ಬಾಲಿವುಡ್ ನ ಸಿನಿಮಾ ಇಂಡಸ್ಟ್ರಿಯನ್ನ ಇಷ್ಟ ಪಡುವ ಜನರು 75 % ಗಿಂತಲೂ ಅಧಿಕವಾಗಿದ್ದಾರೆ. ಅಲ್ದೇ ಈ ದೇಶದಲ್ಲಿ ಸಲ್ಮಾನ್ ಖಾನ್ ನ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ.
ವಿಶ್ವದ 8ನೇ ಅದ್ಭುತ ಇರೋದು ಪಾಜಕಿಸ್ತಾನದಲ್ಲೇ. ಅಂದ್ರೆ ಚೀನಾ ಮತ್ತು ಪಾಕಿಸ್ತಾನ ನಡುವಿನ ಕಾರಾಕೋರಮ್ ಹೈವೇಯನ್ನ ಇಡೀ ವಿಶ್ವದ 8ನೇ ಅದ್ಭುತ ಎಂದೇ ಹೇಳಲಾಗುತ್ತೆ. ಈ ಹೈವೇ ಪರ್ವತಗಳ ಮಧ್ಯದಿಂದ ಹಾದು ಹೋಗುವ ಹೈವೇ 15397 ಫೀಟ್ ಎತ್ತರ ಇದ್ದು, 23 ಕಿಲೋಮೀಟರ್ ಉದ್ದವಿದೆ.
ವಿಶ್ವದ ಬೃಹತ್ ಮಾನವ ನಿರ್ಮಿತ ಅರಣ್ಯ ಚಂಗಾ ಮಂಗಾ ಫಾರೆಸ್ಟ್ ಇರೋದು ಇದೇ ಪಾಕಿಸ್ತಾನದಲ್ಲಿ. ಈ ಅರಣ್ಯ ಒಟ್ಟು 12 ಸಾವಿರ ಎಕರೆಯ ಪ್ರದೇಶದಲ್ಲಿ ಆವೃತವಾಗಿದೆ.
ಪಾಕಿಸ್ತಾನ – ಈ ದೇಶಕ್ಕೆ ಪ್ರವಾಸಿಗರ ಸಂಖ್ಯೆ ತುಂಬಾನೆ ಕಡಿಮೆ – ಇನ್ ಫ್ಯಾಕ್ಟ್ ಪಾಕಿಸ್ತಾನಕ್ಕೆ ಒಂದು ವರ್ಷಕ್ಕೆ ಲಕ್ಷಕ್ಕಿಂತಲೂ ಕಡಿಮೆ ಜನರು ಪ್ರವಾಸಕ್ಕೆ ಹೋಗ್ತಾರೆ.
ಆದ್ರೆ ಪಾಕಿಸ್ತಾನದಲ್ಲಿ ಸುಂದರ , ರೋಮಾಂಚನಕಾರಿ ಪ್ರವಾಸಿ ತಾಣಗಳಿವೆ.
ಗಿಲ್ ಗಿಟ್ – ಬೆಟ್ಟುಗುಡ್ಡಗಳು ಪ್ರಕೃತಿಯ ಬೇರೆಯದ್ದೇ ರೋಮಾಂಚನಕಾರಿ ದೃಶ್ಯವನ್ನ ಇಲ್ಲಿ ನೋಡಬಹುದು.
ಮುಲ್ತಾನ್ – ಪಾಕಿಸ್ತಾನದ ಪಂಜಾಬ್ ಪ್ರದೇಶದಲ್ಲಿ ಪ್ರಸಿದ್ಧ ಪ್ರಹ್ಲಾದಪುರಿ ಮಂದಿರವಿದೆ.
ಹುಂಜಾ ನದಿ -ಎತ್ತರದ ಪರ್ವತದ ತಪ್ಪಲಲ್ಲಿ ಹರಿಯುವ ಈ ನದಿ ಅತ್ಯಂತ ಆಕರ್ಶಕವಾಗಿದ್ದು, ಪ್ರವಾಸಿಗರನ್ನ ಪುಳಕಿತಗೊಳಿಸುತ್ತೆ.
ಬಾಕಿ ಪಾಕಿಸ್ತಾನ ಚೈನಾ ಬಿಟ್ರೆ ಮತ್ಯಾವ ರಾಷ್ಟ್ರಗಳ ಜೊತೆಗೂ ಅಷ್ಟು ಒಳ್ಳೆಯ ಸಂಬಂಧವಿಟ್ಟುಕೊಂಡಿಲ್ಲ.
ಶತ್ರುಗಳ ಶತ್ರು ಮಿತ್ರ ಅನ್ನೋ ಹಾಗೆ ಭಾರತದ 2 ವೈರಿ ರಾಷ್ಟ್ರಗಳ ಸ್ನೇಹ ಆಶ್ಚರ್ಯವೇನಲ್ಲ. ಚೀನಾ ಪಾಕಿಸ್ತಾನ ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇರುತ್ತವೆ. ಕಾಲು ಕರೆದುಕೊಂಡು ಜಗಳಕ್ಕೆ ಬರುತ್ತಲೇ ಇರುತ್ವೆ. ಇದೇನು ಹೊಸ ವಿಚಾರವೇನಲ್ಲ. ನರಿ ಚೀನಾ ಸ್ವಾರ್ಥ, ಕಾಶ್ಮೀರದ ಹಂಬಲದಲ್ಲಿ ಪಾಕಿಸ್ತಾನ ಹುಚ್ಚು ಹಿಡಿದಂತೆ ಕೆಲವೊಮ್ಮೆ ವರ್ತಿಸಿ ವಿಶ್ವಾದ್ಯಂತ ಮುಖಬಂಗಕ್ಕೆ ಒಳಗಾಗ್ತಲೇ ಇರುತ್ತವೆ.
ಇನ್ನೂ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಮುಂಚೆಯಿಂದಲೂ ಹದಗೆಟ್ಟಿರುವ ಕಾರಣ ಪಾಕ್ ನಿಂದ ಬಾರತಕ್ಕಾಗ್ಲೀ ಭಾರತಕ್ಕಾಗ್ಲೀ ಬರುವವರ ಸಂಖ್ಯೆ ತುಂಬಾನೆ ಕಡಿಮೆ. ಇಲ್ಲಿನ ಕರೆನ್ಸಿ ಪಾಕಿಸ್ತಾನಿ ರೂಪಾಯಿ – ಇದರ ಮೌಲ್ಯ ಭಾರತದ ರೂಪಾಯಿ ಮೌಲ್ಯಕ್ಕಿಂತಲೂ ಕಡಿಮೆಯಿದೆ. ಇನ್ನೂ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಸುಂದರವಾದ ಹುಡುಗಿಯರು ಪಾಕಿಸ್ತಾನದವರು ಅನ್ನೋದು ಅಲ್ಲಿನ ಜನರ ನಂಬಿಕೆಯಾಗಿದೆ.