ದೇಹದ ಅತಿ ಉದ್ದವಾದ ಅಂಗ ಯಾವುದು..??
ಚರ್ಮವು ದೇಹದ ಅತಿದೊಡ್ಡ ಅಂಗವಾಗಿದೆ.
ಅತಿ ಉದ್ದವಾದ ಇಂಗ್ಲಿಷ್ ಪದದ ಒಟ್ಟಾರೆ ಲೆಟರ್ ಗಳ ಸಂಖ್ಯೆ
ಅತಿ ಉದ್ದವಾದ ಇಂಗ್ಲಿಷ್ ಪದವು 189,819 ಅಕ್ಷರಗಳನ್ನ ಒಳಗೊಂಡಿದೆ. ಈ ಹೆಸರನ್ನು ಹೇಳಲು ತುಂಬಾ ಕಷ್ಟ ಹಾಗೂ ಇದನ್ನ ಹೇಳಿ ಮುಗಿಸಲು ಸುಮಾರು ಮೂರು ಗಂಟೆಗಳು ಬೇಕು. ಆದ್ರೆ ಇದನ್ನ ಟಿಟಿನ್ ( ಪ್ರೋಟಿನ್) ಎಂದು ಅಡ್ಡ ಹೆಸರಿಂದ ಕರೆಯಲಾಗುತ್ತೆ.
ಆಸ್ಟ್ರೇಲಿಯಾ ಚಂದ್ರನಿಗಿಂತ ವಿಶಾಲವಾಗಿದೆ
ಚಂದ್ರನ ವ್ಯಾಸವು 3400 ಕಿಮೀ ಆಗಿದ್ದರೆ, ಆಸ್ಟ್ರೇಲಿಯಾದ ಪೂರ್ವದಿಂದ ಪಶ್ಚಿಮಕ್ಕೆ ಸುಮಾರು 4000 ಕಿಮೀ ವ್ಯಾಸವಿದೆ.
ಸ್ಪ್ಯಾನಿಷ್ ರಾಷ್ಟ್ರಗೀತೆಗೆ ಪದಗಳಿಲ್ಲ.
ಸ್ಪ್ಯಾನಿಷ್ ರಾಷ್ಟ್ರಗೀತೆ ‘ಮಾರ್ಚಾ ರಿಯಲ್’ ಯಾವುದೇ ಅಧಿಕೃತ ಸಾಹಿತ್ಯವನ್ನು ಹೊಂದಿಲ್ಲದ ವಿಶ್ವದ ಕೇವಲ ನಾಲ್ಕು ರಾಷ್ಟ್ರಗೀತೆಗಳಲ್ಲಿ ಒಂದಾಗಿದೆ. ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಕೊಸೊವೊ ಮತ್ತು ಸ್ಯಾನ್ ಮರಿನೋ
ಸಹ ರಾಷ್ಟ್ರ ಗೀತಿಗೆ ಅಧಿಕೃತ ಸಾಹಿತ್ಯ ಹೊಂದಿಲ್ಲ.
ಅತಿ ಹೆಚ್ಚು ಪಿರಮಿಡ್ ಗಳು ಇರುವ ದೇಶ ಈಜಿಪ್ಟ್ ಅಲ್ಲ…!
ಈಜಿಪ್ಟ್ ಗಿಂತಲೂ ಹೆಚ್ಚು ಪರಿಮಿಡ್ ಇರುವ ದೇಶ ಸುಡಾನ್.. ಅಷ್ಟೇ ಅಲ್ಲ ವಿಶ್ವದಲ್ಲೇ ಅತಿ ಹೆಚ್ಚು ಪಿರಮಿಡ್ ಗಳು ಇರುವುದು ಸುಡಾನ್ ದೇಶದಲ್ಲೇ.. ಈಜಿಪ್ಟ್ ನಲ್ಲಿರುವುದು 138 ಆದ್ರೆ ಸುಡಾನ್ ನಲ್ಲಿರುವುದು 255 ಪಿರಮಿಡ್ ಗಳು
ವಿಶ್ವದ ಮೊದಲ ಅನಿಮೇಟೆಡ್ ಸಿನಿಮಾ ಯಾವುದು..??
ವಿಶ್ವದ ಮೊದಲ ಅನಿಮೇಟೆಡ್ ಸಿನಿಮಾವನ್ನ ಅರ್ಜೆಂಟೀನಾದಲ್ಲಿ ನಿರ್ಮಿಸಲಾಗಿತ್ತು. 1937 ರಲ್ಲಿ ಮೊದಲ ಅನಿಮೇಟೆಡ್ ಸಿನಿಮಾ ಬಮದಿತ್ತು ಅಂತ ಅನೇಕರು ಅಂದುಕೊಂಡಿದ್ದಾರೆ.. ಆದರೆ ಅದಕ್ಕೂ 20 ವರ್ಷಗಳ ಮೊದಲು ಅರ್ಜೆಂಟೈನಾದಲ್ಲಿ ಅನಿಮೇಟೆಡ್ ಸಿನಿಮಾ ಬಂದಿತ್ತು. ಪೂರ್ಣ ಪ್ರಮಾಣದ ಅನಿಮೇಟೆಡ್ ಸಿನಿಮಾ ಅಪೋಸ್ಟಲ್ ಸುಮಾರು 58,000 ಡ್ರಾಯಿಂಗ್ಸ್ ಒಳಗೊಂಡಿತ್ತು. 70 ನಿಮಿಗಳ ಡ್ಯೂರೇಷನ್ ಹೊಂದಿತ್ತು ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ದಾಖಲಾಗಿದೆ. 1917 ನವೆಂಬರ್ 9 ರಂದು ರಿಲೀಸ್ ಆಗಿತ್ತು..
ಫಿಲಿಪೈನ್ಸ್ ನಲ್ಲಿ 7,641 ದ್ವೀಪಗಳಿವೆ
ಫಿಲಿಪೈನ್ಸ್ ದೇಶವು ಒಂದು ದ್ವೀಪಸಮೂಹವಾಗಿದೆ. ಇಲ್ಲಿ ಸರಿ ಸುಮಾರು 7,641 ದ್ವೀಪಗಳು ಇವೆ.. ಇದಕ್ಕಿಂತಲೂ ಇನ್ನೂ ಹೆಚ್ಚಿನ ದ್ವೀಪಗಳೂ ಇರಬಹುದು ಎನ್ನಲಾಗಿದೆ.
ಒಟ್ಟಾರೆ ಭೂಮಿಯಲ್ಲಿ ಇರುವ ಚಿನ್ನದ ಪ್ರಮಾಣ
ಭೂಮಿಯ ಮೇಲೆ ಇರುವ ಒಟ್ಟಾರೆ ಚಿನ್ನವನ್ನ ಇಡೀ ಭೂಮಿಗೆ ಲೇಪಿಸುವಷ್ಟಿದೆ ಎನ್ನಲಾಗಿದೆ. 99 ಪ್ರತಿಶತದಷ್ಟು ಚಿನ್ನದ ಲೋಹವು ಭೂಮಿಯ ಮಧ್ಯಭಾಗದಲ್ಲಿ ಕಂಡುಬರುತ್ತದೆ ಎಂದು ಡಿಸ್ಕವರ್ ಮ್ಯಾಗಜೀನ್ ವರದಿ ಮಾಡಿದೆ. ಇದರಿಂದ ಇಡೀ ಭೂಮಿಯ ಸಂಪೂರ್ಣ ಮೇಲ್ಮೈಯನ್ನು 1.5 ಅಡಿ ಚಿನ್ನದಲ್ಲಿ ಲೇಪಿಸಬಹುದು ಎಂದು ವಿಶ್ಲೇಷಿಸಲಾಗಿದೆ. ಮನುಷ್ಯನು ಭೂಮಿಯ ನೀರಿನ ಒಂದು ಸಣ್ಣ ಭಾಗವನ್ನು ಮಾತ್ರ ಬಳಸಬಹುದು. ಭೂಮಿಯ ಮೇಲೆ ಸುಮಾರು 71 % ನೀರಿದ್ದರೂ ಸಹ ಅದ್ರಲ್ಲಿ ಕುಡಿಯಲು ಯೋಗ್ಯವಾಗಿರುವುದು ಕೇವಲ 0.007 ಪ್ರತಿಶತದಷ್ಟು ಮಾತ್ರ. ಏಕೆಂದರೆ ಭೂಮಿಯ ನೀರಿನಲ್ಲಿ ಕೇವಲ 2.5 ಪ್ರತಿಶತದಷ್ಟು ಶುದ್ಧ ನೀರಿದ್ದು, ಅದ್ರಲ್ಲಿ ಕೇವಲ 1 ಪ್ರತಿಶತದಷ್ಟು ಮಾತ್ರ ನಮಗೆ ಬಳಕೆಗೆ ಲಭ್ಯವಾಗಿದೆ. ಉಳಿದವು ಹಿಮನದಿಗಳ ರೂಪದಲ್ಲಿವೆ.
ಜಪಾನ್ : ವೆಂಡಿಂಗ್ ಮಷೀನ್
ಜಪಾನ್ ನಲ್ಲಿ ಪ್ರತಿ 40 ಜನರ ಪೈಕಿ ಒಂದು ವೆಂಡಿಂಗ್ ಮಷೀನ್ ಇದೆ ಎನ್ನಲಾಗಿದೆ. ಈ ವೆಂಡಿಂಗ್ ಮಷೀನ್ ಗಳ ಮೂಲಕ ವಿವಿಧ ರೀತಿಯ ಹಾಟ್ , ಕೋಲ್ಡ್ ಪಾನೀಯಗಳನ್ನ ಪಡೆಯಬಹುದು. ಐಸ್ ಕ್ರೀಮ್, ನೂಡಲ್ಸ್ ಗಳು ಸಹ ಲಭ್ಯವಿರುತ್ತವೆ..
ಕೆಚಪ್ ಅನ್ನು ಒಂದು ಕಾಲದಲ್ಲಿ ಔಷಧಿಯಾಗಿ ಮಾರಲಾಗುತ್ತಿತ್ತು.
ಕೆಚಪ್ ಅನ್ನು ಒಂದು ಕಾಲದಲ್ಲಿ ಔಷಧಿಯಾಗಿ ಮಾರಲಾಗುತ್ತಿತ್ತು.
1834 ರಲ್ಲಿ ಅಜೀರ್ಣದಿಂದ ಬಳಲುತ್ತಿದ್ದವರಿಗೆ ಜನರಿಗೆ ಶಿಫಾರಸು ಮಾಡಲಾಗಿತ್ತು.











