INTERSTING FACTS – ವೈದ್ಯರ ಬಿಳಿ ಕೋಟ್ ರಹಸ್ಯ, ಜಡ್ಜ್ ಪೆನ್ನಿನ ನಿಬ್ ಮುರಿಯುವುದ್ಯಾಕೆ, ಥಂಬ್ಸ್ ಅಪ್ ನ ಹಿಸ್ಟರಿ ಏನ್ ಗೊತ್ತಾ …!
ಹೆಲೋ ಫ್ರೆಂಡ್ಸ್…
ಈ ಜಗತ್ತಿನಲ್ಲಿ ಅನೇಕ ವಿಚಾರಗಳು ಒಂದೋ ಸಂಪ್ರದಾಯದ ರೀತಿಯಲ್ಲಿ ಜಾರಿಯಲ್ಲಿದೆ. ಇಲ್ಲ ಅನಿವಾರ್ಯತೆಯಿಂದ ಅವುಗಳನ್ನ ನಾವು ರೂಢಿಸಿಕೊಂಡು ಬಂದಿರುತ್ತೇವೆ. ಅದು ಕಾನೂನಿನ ಕ್ರಮಗಳಾಗಿರಬಹುದು ಪ್ರಕೃತಿಯ ನಿಯಮಗಳಾಗಿರಬಹುದು.
ವೈದ್ಯರು ಯಾಕೆ ಯಾವಾಗಲೂ ಬಿಳಿ ಬಣ್ಣದ ಕೋಟ್ ಅನ್ನೇ ಧರಿಸುತ್ತಾರೆ, ಕೋರ್ಟ್ ನಲ್ಲಿ ಜಡ್ಜ್ ಗಳು ಮರಣದಂಡನೆ ವಿಧಿಸಿದ ತಕ್ಷಣ ಯಾಕೆ ತಮ್ಮ ಪೆನ್ನಿನ ನಿಬ್ ಮುರಿಯುತ್ತಾರೆ, ಗ್ಯಾಸ್ ಸಿಲಿಂಡರ್ ಗಳು ಯಾಕೆ ಕೆಂಪು ಬಣ್ಣದಲ್ಲೇ ಇರುತ್ತೆ, ಜಪಾನ್ ನಲ್ಲಿ ಯಾಕೆ ಯುವತಿಯರು ಯುವಕರ ಶರ್ಟ್ ನ 2ನೇ ಬಟನ್ ಕೇಳ್ತಾರೆ. ಹೀಗೆ ಎಷ್ಟೋ ವಿಚಾರಗಳು ನಮಗೆ ಗೊತ್ತಿರೋದಿಲ್ಲ. ಜಗತ್ತಿನ ಇಂತಹದ್ದೇ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್ ಗಳ ಬಗ್ಗೆ ನಾವಿವತ್ತು ತಿಳಿಯೋಣ.
ವೈದ್ಯರು ಯಾವಾಗಲೂ ಬಿಳಿ ಬಣ್ಣದ ಕೋಟ್ ಗಳನ್ನ ಧರಿಸಿರುವುದನ್ನೇ ನಾವು ನೋಡ್ತೇವೆ. ಅದು ಇಡೀ ವಿಶ್ವದ ಎಲ್ಲಾ ಆಸ್ಪತ್ರೆಗಳು, ಲ್ಯಾಬ್ ಗಳಲ್ಲೂ ಕೂಡ. ಆದ್ರೆ ಯಾಕೆ ವೈದ್ಯರು ಬಿಳಿ ಕೋಟ್ ಗಳನ್ನೇ ಧರಿಸುತ್ತಾರೆ. ಇದಕ್ಕೆ ಒಂದು ಕಾರಣ ಮೆಡಿಕಲ್ ಕೆಮಿಕಲ್ಸ್ ಆಸ್ಪತ್ರೆ ಅಥವ ಲ್ಯಾಬ್ ಗಳಲ್ಲಿ ಇರುತ್ತೆ. ಇದು ಮಿಸ್ ಆಗಿ ವೈದ್ಯರ ಬಟ್ಟೆಗಳಿಗೆ ತಗುಲುವ ಸಾಧ್ಯತೆ ಹೆಚ್ಚಾಗಿರುತ್ತೆ. ಆದ್ರೆ ಕೇವಲ ಬಿಳಿ ಬಣ್ಣದ ಬಟ್ಟೆಗಳ ಮೇಲೆ ಮಾತ್ರವೇ ಕೆಮಿಕಲ್ ರಿಯಾಕ್ಷನ್ಸ್ ತಡವಾಗಿ ಆಗುತ್ತೆ. ಹೀಗಾಗಿಯೇ ವೈದ್ಯರ ಡ್ರೆಸ್ ಕೋಡ್ ಬಿಳಿಯನ್ನ ಆರಿಸಲಾಗಿದೆ. ಮತ್ತೊಂದು ಕಾರಣ ಬಿಳಿ ಬಣ್ಣ ಶಾಂತಿಯ ಪ್ರತೀಕವಾಗಿದೆ. ಇದು ವೈದ್ಯರ ಉದ್ದೇಶವನ್ನ ತಿಳಿಸುವ ಸಂಕೀತವಾಗಿದೆ.
ನಿಮಗೆಲ್ಲಾ ಗೊತ್ತೇ ಇರಬಹುದು ಟಿವಿಯಲ್ಲಿ, ಸೀರಿಯಲ್ ಗಳಲ್ಲಿ ನೋಡಿರಬಹುದು. ಯಾವುದೇ ನ್ಯಾಯಾಧೀಶರು ಯಾವುದಾದರೂ ಅಪರಾಧಿಗೆ ಮರಣ ದಂಡನೆ ವಿಧಿಸಿದ ಬಳಿಕ ತಮ್ಮ ಪೆನ್ನಿನ ನಿಬ್ ಮುರಿಯುತ್ತಾರೆ. ಆದ್ರೆ ಅವರು ಯಾತಕ್ಕಾಗಿ ಹೀಗೆ ಮಾಡುತ್ತಾರೆ ಅನ್ನೋ ವಿಚಾರ ಅನೇಕರಿಗೆ ತಿಳಿದಿರೋದಿಲ್ಲ. ಅಸಲಿಗೆ ಹೀಗೆ ಮಾಡೋದರ ಹಿಂದಿರುವ ಕಾರಣ ಏನೆಂದ್ರೆ, ಯಾವ ಪೆನ್ ನಿಂದ ಓರ್ವ ವ್ಯಕ್ತಿಗೆ ಸಾವಿನ ಶಿಕ್ಷೆಯನ್ನ ಬರೆಯಲಾಗಿರುತ್ತೋ, ಅಂತಹ ಕೆಲಸಕ್ಕೆ ಮತ್ತೆ ಆ ಪೆನ್ ಬಳಕೆಯಾಗಬಾರದೆಂಬ ಕಾರಣಕ್ಕೆ ಜಡ್ಜ್ ಗಳು ಶಿಕ್ಷೆ ಪ್ರಕಟಿಸಲು ಬಳಸಿದ ಪೆನ್ನಿನ ನಿಬ್ ಮುರಿಯುತ್ತಾರೆ.
ಥಂಬ್ಸ್ ಅಪ್ … ಯಾವಾಗಲೂ ಏನಾದ್ರೂ ಕೆಲಸಕ್ಕೆ ಯಾರಿಗಾದ್ರೂ ಓಕೆ, ಆಯ್ತು, ಎಸ್, ಇಲ್ಲ ಮೆಚ್ಚುಗೆ ವ್ತಯಕ್ತಪಡಿಸೋಕೆ, ಕೆಲಸ ಆಯಿತು ಅನ್ನೋದನ್ನ ತೋರಿಸೋಕೆ ನಾವು ನಮ್ಮ ಕಯ್ಯಲ್ಲಿ ಥಂಬ್ಸ್ ಅಪ್ ತೋರಿಸುತ್ತೇವೆ. ಇದರರ್ಥ, ಪರ್ಫೆಕ್ಟ್, ಆಲ್ ರೈಟ್, ಓಕೆ , ಆಲ್ ಫೈನ್ etc. ಆದ್ರೆ ಈ ಥಂಬ್ಸ್ ಅಪ್ ಕಾನ್ಸೆಪ್ಟ್ ಶುರುವಾಗಿದ್ದು, 2000 ವರ್ಷಗಳ ಹಿಂದೆ ಅಂದ್ರೆ ನಿಮಗೆಲ್ಲಾ ಆಶ್ಚರ್ಯ ಆಗಬಹುದು. ಹೌದು 2000 ವರ್ಷಗಳ ಹಿಂದೆ ಅಂದ್ರೆ ಪೂರ್ವ ರೋಮ್ ನಲ್ಲಿ ನಡೆಸಲಾಗ್ತಿದ್ದ ಗ್ಲೇಜಿಯೇಟರ್ಸ್ ನಡುವೆ ನಡೆಯುತ್ತಿದ್ದ ಯುದ್ಧದ ವೇಳೆ ಈ ಪ್ರಥಾ ಶುರುವಾಗಿತ್ತು. ಮೊದಲು ಗ್ಲೇಜಿಯೇಟರ್ಸ್ ಅಂದ್ರೇನು..? ಗ್ಲೇಜಿಯೇಟರ್ಸ್ ಜೈಲಿನ ಖೈದಿಗಳನ್ನ ಕರೆಯಲಾಗ್ತಿತ್ತು. ಜನರ ಮನರಂಜನೆಗಾಗಿ ಇವರ ನಡುವೆ ದೊಡ್ಡ ದೊಡ್ಡ ಮೈದಾನಗಳಲ್ಲಿ ಯುದ್ಧಗಳನ್ನ ಏರ್ಪಡಿಸಲಾಗುತ್ತಿತ್ತು. ಇದರಲ್ಲಿ ಓರ್ವ ಗ್ಲೇಜಿಯೇಟರ್ ಮತ್ತೊಬ್ಬ ಗ್ಲೇಜಿಯೇಟರ್ ನನ್ನ ಸೋಲಿಸುತ್ತಿದ್ದ. ಈ ವೇಳೆ ಸ್ಟೇಡಿಯಮ್ ನಲ್ಲಿರುವ ಜನರು ಥಂಬ್ಸ್ ಅಪ್ ತೋರಿಸಿದ್ರೆ ಇದರ ಅರ್ಥ ಸೋತ ಗ್ಲೇಜಿಯೇಟರ್ ನನ್ನ ಸಾಯಿಸಬೇಕು ಅಂತ. ಒಂದು ವೇಳೆ ಥಂಬ್ಸ್ ಡೌನ್ ತೋರಿಸಿದ್ರೆ ಆ ಗ್ಲೇಜಿಯೇಟರ್ ನನ್ನ ಬಿಟ್ಟು ಬಿಡಬೇಕೆಂದು ಅರ್ಥ.
ಸ್ವಿಡ್ಜರ್ ಲ್ಯಾಂಡ್ : ರಾತ್ರಿ 10 ಗಂಟೆಯಾದ ಬಳಿಕ ಈ ದೇಶದಲ್ಲಿ ಮಲ – ಮೂತ್ರ ವಿಸರ್ಜನೆ ಮಾಡುವಂತಿಲ್ಲ. ಇದಕ್ಕೆ ಕಾರಣ ಸಿಲ್ಲಿ ಅನ್ಸುದ್ರು ನಿಜ. ರಾತ್ರಿ 10 ಗಂಟೆಯಾದ್ಮೇಲೆ ಯಾವುದೇ ರೀತಿಯಾದ ಸದ್ದುನಿಂದ ಜನರ ನಿದ್ದೆ ಹಾಳಾಗಬಹುದು. ಫ್ಲಶ್ ಮಾಡಿದಾಗ ಸುತ್ತಮುತ್ತಲಿನ ಜನರ ನಿದ್ದೆಗೆಡಿಸಬಹುದು ಎಂಬ ಕಾರಣಕ್ಕೆ ಈ ನಿಯಮವಿದೆ. ಈ ನಿಯಮ ಮುರಿದ್ರೆ ಜೈಲು ಶಿಕ್ಷೆಯೂ ಆಗುತ್ತೆ.
ಜಪಾನ್ ನಲ್ಲಿ ಯಾರಾದ್ರೂ ಯುವತಿಯರು ಯುವಕರನ್ನ ಇಷ್ಟ ಪಟ್ಟರೆ ಅವರು ಅದನ್ನ ನೇರವಾಗಿ ತೆರಳಿ ಅವರ ಬಳಿ ಹೋಗಿ ಪ್ರೇಮ ನಿವೇದನೆಯನ್ನ ಮಾಡುವುದಿಲ್ಲ. ಅಥವ ಅವರ ಫೀಲಿಂಗ್ಸ್ ಹೇಳಿಕೊಳ್ಳೋದಿಲ್ಲ ಬದಲಾಗಿ ಆ ಯುವಕನ ಶರ್ಟ್ ನ 2 ನೇ ಬಟನ್ ಕೇಳ್ತಾರೆ. ಯಾಕಂದ್ರೆ ಶರ್ಟ್ ನ ಬಟನ್ ಹೃದಯಕ್ಕೆ ಬಹಳ ಸಮೀಪದಲ್ಲಿ ಇರುತ್ತೆ. ಹೀಗಾಗಿ ಬಟನ್ ಕೇಳುತ್ತಿರುವ ಯುವತಿ ಆ ಹುಡುಗನ ಹೃದಯ ಅಂದ್ರೆ ಪ್ರೀತಿ ಬಯಸುತ್ತಿದ್ದಾಳೆ ಎಂದರ್ಥ.
ಸಾಕಷ್ಟು ಜನರು ಮಾತನಾಡುವಾಗ ಮದ್ಯ ಮಧ್ಯದಲ್ಲಿ ಉಗುರು ಕಡಿಯೋದು, ಮೂಗು ಮುಚ್ಚಿ ಕೊಳ್ಳುವುದನ್ನ ನೀವೆಲ್ಲಾ ಗಮನಿಸಿರಬಹುದು. ಆದ್ರೆ ಅವರು ಯಾಕೆ ಹೀಗೆ ಮಾಡ್ತಾರೆ ಅನ್ನೋದನ್ನ ಎಂದಾದ್ರೂ ಯೋಚನೆ ಮಾಡಿದ್ದೀರಾ.. ಇದಕ್ಕೆ ಕಾರಣ ಆ ವ್ಯಕ್ತಿಗಳು ಆ ಕ್ಷಣದಲ್ಲಿ ಒಂದೋ ತುಂಬಾನೆ ನರ್ವಸ್ ಆಗಿರುತ್ತಾರೆ.. ಇಲ್ಲ ನಮ್ಮ ಮುಂದೆ ಇರುವವರು ನಮ್ಮ ಬಗ್ಗೆ ಏನ್ ಯೋಚನೆ ಮಾಡ್ತಿದ್ದಾರೆ ಅನ್ನೋದನ್ನ ಯೋಚನೆ ಮಾಡ್ತಿರುತ್ತಾರೆ.
ನಿಂತು ನೀರು ಕುಡಿಯೋದ್ರಿಂದ ನಿಮ್ಮಶ್ವಾಸಕೋಶಕ್ಕೆ ಹಾನಿಯಾಗುತ್ತೆ ಅನ್ನೋ ವಿಚಾರ ನಿಮಗೆ ಗೊತ್ತಿದ್ಯಾ. ಹೌದು ನಿಂತು ನೀರು ಕುಡಿಯೋ ಪರಿಣಾಮ ಶ್ವಾಸಕೋಶ ಹಾಗೂ ಹೃದಯಕ್ಕೆ ತುಂಬಾನೆ ತೊಂದರೆಗಳಾಗಗಬಹುದು. ಹೀಗಾಗಿ ಕುಳಿತೇ ನೀರು ಕುಡಿಯೋದು ಉತ್ತಮ.
2000 ಹಹೊಸ ನೋಟಿನ ಮೇಲೆ ಮುಂಬಾಗದಲ್ಲಿ 2 ಕಡೆ ಹಿಂಭಾಗದಲ್ಲಿ ಒಂದು ಜಾಗದಲ್ಲಿ ಬಬಲ್ಸ್ ಇದೆ. ಆದ್ರೆ ಇದು ಯಾಕೆ ಇದೆ ಅನ್ನೋ ವಿಚಾರ ನಿಮಗೆ ಗೊತ್ತಿದ್ಯಾ. ಈ ಬಬಲ್ಸ್ ನ , ಈ ನೋಟು ಮೊದಲಬಾರಿಗೆ ಚಲಾವಣೆಗೆ ಬಂದ ದಿನಾಂಕದ ಸೂಚ್ಯಾಂಕವಾಗಿದೆ. ಈ ಬಬಲ್ಸ್ ನ ಸೀಕ್ವೆನ್ಸ್ 9,11,16 – ಅಂದ್ರೆ ನವೆಂಬರ್ 9 2016 ಎಂದರ್ಥ. ಅಂದ್ರೆ ಮೊದಲ ಬಾರಿಗೆ ಈ ಹೊಸ ನೋಡುಗಳು ಚಲಾವಣೆಯಾದ ದಿನಾಂಕ.
ಅಡುಗೆ ಮನೆಗಳಲ್ಲಿ ಇಡುವ ಗ್ಯಾಸ್ ಸಿಲಿಂಡರ್ ಗಳು ಯಾವಾಗಲೂ ಕೆಂಪು ಬಣ್ಣದಲ್ಲೇ ಇರುತ್ತೆ. ಆದ್ರೆ ಇದು ಕೆಂಪು ಬಣ್ಣದಲ್ಲೇ ಯಾಕೆ ಇರುತ್ತೆ ಅಂತ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ.. ಅದಕ್ಕೆ ಕಾರಣ ಕೆಂಪು ಬಣ್ಣ ಡೇಂಜರ್ ನ ಸಂಕೇತ. ಕೆಂಪು ಬಣ್ಣ ಎಲ್ಲೇ ಇದ್ರು ಬೇಗನೆ ಕಾಣಿಸುತ್ತೆ. ಅಪಾಯದ ಸಂಕೇತವನ್ನ ಸೂಚಿಸುತ್ತೆ. ಅಷ್ಟೇ ಅಲ್ದೇ LPG ಸಿಲೆಂಡರ್ ಗಳ ಗುರುತು ಕೂಡ ಹೌದು.
Whaaaat…! ಇಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರಾ..! : ಚೀನಾದ INTRESTING FACTS..!
1009 ಸೋಲು, 65ನೇ ವಯಸ್ಸಿನಲ್ಲಿ ಮಿಲೇನಿಯರ್ ಆದ KFC – ಸಂಸ್ಥಾಪಕ ಹಾರ್ನಾಲ್ಡ್ ಸ್ಯಾಂಡರ್ಸ್ ಸಾಹಸಗಾಥೆ..!
‘ಶಿವ’ನ ‘ಪೊಗರ್ದಸ್ತ್ ಎಂಟ್ರಿಗೆ ‘ಖರಾಬು’ ಎಂದ ಅಭಿಮಾನಿಗಳು ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel