ಜೀವ ಉಳಿಸಿದ ಬೈಬಲ್ , ವಿಸ್ಕಿ ವಾರ್ , ಮನುಷ್ಯರ ಮಾಂಸದ ಬರ್ಗರ್ ಮಾಡ್ತಿದ್ದ ಸೀರಿಯಲ್ ಕಿಲ್ಲರ್ – Interesting facts
ಜೀವ ಉಳಿಸಿದ ಬೈಬಲ್ – ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಒಬ್ಬ ಆಂಗ್ಲ ಸೈನಿಕನಿಗೆ ಗುಂಡು ತಗುಲಿದ್ರೂ ಬೈಬಲ್ ನಿಂದಾಗಿ ಆತ ಜೀವಂತವಾಗಿ ಉಳಿದಿದ್ದರು ಹೌದು.. ಈ ಸೈನಿಕ ಸದಾ ತನ್ನ ಜೇಬಿನಲ್ಲಿ ಒಂದು ಪಾಕೆಟ್ ಬೈಬಲ್ ಅನ್ನ ಹಿಡಿದುಕೊಂಡು ಓಡಾಡುತ್ತಿದ್ದ.. ಯುದ್ಧದಲ್ಲಿ ಬುಲೆಟ್ ತಾಕಿದಾಗ ಅದು ಆತನ ಬದಲಾಗಿ ಆ ಬೈಬಲ್ ಗೆ ತಗುಲಿ ಅಲ್ಲಿಯೇ ಸಿಕ್ಕಕಿ ಹಾಕಿಕೊಂಡಿತ್ತು.. ಪರಿಣಾಮ ಸೈನಿಕನ ಜೀವ ಉಳಿದಿತ್ತು.
ಪ್ರೆಗ್ನೆನ್ಸಿ ಟೆಸ್ಟ್ – ಸುಮಾರು 3000 ವರ್ಷಗಳ ಹಿಂದೆ ಈಜಿಪ್ಟ್ ನಲ್ಲಿ ಮಹಿಳೆಯರ ಪ್ರೆಗ್ನೆನ್ಸಿ ಟೆಸ್ಟ್ ಗೆ ಆಗಿನ ಕಾಲದಲ್ಲೇ ಒಂದು ವಿಭಿನ್ನ ವಿಧಾನವನ್ನ ಅನುಸರಿಸಲಾಗ್ತಿತ್ತು.. ಗರ್ಭವತಿಯಾಗಿರಬಹುದು ಎಂಬ ಭರವಸೆ , ಅನುಮಾನವಿದ್ದ ಮಹಿಳೆಯರು ಗೋದಿ ಮತ್ತು ಭತ್ತದ ಧಾನ್ಯಗಳ ಮೇಲೆ ಶೌಚ ಮಾಡ್ತಿದ್ರಂತೆ.. ಬಳಿಕ ಅವುಗಳನ್ನ ಪ್ರತ್ಯೇಕವಾಗಿಡಲಾಗ್ತಿತ್ತು.. ಅವುಗಳು ಮೊಳಕೆ ಬಂದಲ್ಲಿ ಮಹಿಳೆಯರು ಗರ್ಭವತಿಯಾಗಿದ್ದಾರೆ ಎಂದು ಪರಿಗಣಿಸಲಾಗ್ತಿತ್ತಂತೆ.. ಅಷ್ಟೇ ಅಲ್ಲ ಆಧುನಿಕ ಜಗತ್ತಿನಲ್ಲಿ ಸಂಶೋಧಕರ ರೀಸರ್ಚ್ ನಿಂದ ಗರ್ಭವತಿ ಮಹಿಳೆಯರ ಯೂರೀನ್ ನಿಂದ ಗಿಡಗಳ ಬೆಳವಣಿಗೆ 70 % ವೇಗವಾಗಿ ಆಗುತ್ತದೆ ಎಂಬುದು ಗೊತ್ತಾಗಿದೆ..
ವಿಸ್ಕಿ ವಾರ್ – ಹ್ಯಾನ್ಸ್ ಐಲ್ಯಾಂಡ್ ಗಾಗಿ ಡೆನ್ಮಾರ್ಕ್ ಮತ್ತು ಕನಡಾ ನಡುವೆ ಕಿತ್ತಾಟ ದಶಕಗಳಿಂದಲೂ ಇದೆ.. ಆದ್ರೆ ಈ ದ್ವೀಪದಲ್ಲಿ ಯಾರೂ ಕೂಡ ವಾಸವಾಗಿಲ್ಲ.. ಸೈನಿಕರನ್ನೂ ಕೂಡ ನೇಮಕ ಮಾಡಲಾಗಿಲ್ಲ.. ದ್ರೂ ಕೂಡ ಆಗಾಗ ಎರೆಡೂ ದೇಶಗಳ ಸೈನಿಕರು ಬಂದು ಮತ್ತೊಂದು ದೇಶದ ಧ್ವಜ ತೆಗೆದು ತಮ್ಮ ಧ್ವಜವನ್ನ ಸ್ಥಾಪಿಸುತ್ತಾರೆ.. ಜೊತೆಗೆ ಕೆನಡಾ ಸೈನಿಕರು ಕೆನೆಡಿಯನ್ ವಿಸ್ಕಿ ಬಿಟ್ಟು ಹೋದರೆ , ಡೆನ್ಮಾರ್ಕ್ ನ ಸೈನಿಕರು ತಮ್ಮ ಡೇನಿಶ್ ವಿಸ್ಕಿಯನ್ನ ಬಿಟ್ಟು ಹೋಗ್ತಾರೆ..
ದಶಕಗಳ ಹಿಂದೆ ಯೂರೋಪಿಯನ್ ರಾಣಿಯರು ನೂರಾರು ಜನರ ಮುಂದೆಯೇ ಮಗುವಿಗೆ ಜನ್ಮ ನೀಡಬೇಕಾಗಿತ್ತು.. ಹೌದು.. ಹೆರಿಗೆ ನಮೋವು ಕಾಣಿಸಿಕೊಂಡ ತಕ್ಷಣವೇ ಅರಮನೆಯಲ್ಲಿ ಘೋಷಣೆ ಮೊಳಗಿಸಲಾಗ್ತಿತ್ತು.. ರಾಜನ ಇಡೀ ವಂಶಸ್ಥರು , ಅರಮನೆಯ ಅಧಿಕಾರಿಗಳು , ರಾಜ್ಯದ ಗಣ್ಯರು ಅಲ್ಲಿ ಉಪಸ್ಥಿತಿರಿರಬೇಕಿತ್ತು.. ರಾಣಿ ಅವರ ಮುಂದೆಯೇ ಮುಗುವಿಗೆ ಜನ್ಮ ನೀಡಬೇಕಾಗಿತ್ತು.. ಹೌದು ಮಗುವನ್ನ ಬದಲಾಯಿಸುವುದಕ್ಕೆ ಅವಕಾಶ ರಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗ್ತಿತ್ತು ಎನ್ನಲಾಗುತ್ತದೆ..
ಜಾಯ್ ಮೆಥ್ಲಿ ಎಂಬ ಒಬ್ಬ ಸೀರಿಯಲ್ ಕಿಲ್ಲರ್ ಸುಮಾರು 13 ಅಮಾಯಕ ಜನರನ್ನ ಕಾರಣವಿಲ್ಲದೇ ಕೊಲೆ ಮಾಡಿದ್ದ.. ಅಷ್ಟೇ ಅಲ್ಲ ಕೊಲೆ ಮಾಡಿದವರ ಮಾಂಸವನ್ನ ತನ್ನ ಬರ್ಗರ್ ಶಾಪ್ ನಲ್ಲಿ ಪ್ರಾಣಿಗಳ ಮಾಂಸದ ಜೊತೆಗೆ ಮಿಶ್ರಣ ಮಾಡಿ ಬೇಯಿಸಿ ಬರ್ಗರ್ ನಲ್ಲಿಟ್ಟು ಜನರಿಗೆ ತಿನ್ನಲು ಕೊಡ್ತಿದ್ದ.. ನಂತರ ಈತನನ್ನ ಅರೆಸ್ಟ್ ಮಾಡಿ ಕೋರ್ಟ್ ಗೆ ಹಾಜರು ಪಡಿಸಿದಾಗ ತನಿಗೆ 50 ವರ್ಷ ಜೈಲು ಶಿಕ್ಷೆ ವಿಧಿಸಲಾಯ್ತು.. ಈತನ ಬಳಿ ಕೊಲೆಗೆ ಕಾರಣ ಕೇಳಿದ್ದಾಗ , ಈತ ತನಗೆ ಈ ರೀತಿ ಮಾಡೋದ್ರಿಂದ ಸಂತೋಷವಾಗುತ್ತೆ, ನೆಮ್ಮದಿ ಸಿಗುತ್ತೆ ಎಂದಿದ್ದನಂತೆ.. 2017 ರಲ್ಲಿ ಈತ ಜೈಲಿನಲ್ಲಿಯೇ ಮೃತಪಟ್ಟಿದ್ದ.
ಸ್ಪೈಡರ್ ಮ್ಯಾನ್ : ನೋ ವೇ ಹೋಮ್ ಸಿನಿಮಾದ ಟ್ರೇಲರ್ ಯೂಟ್ಯೂಬ್ ನಲ್ಲಿ ಇಲ್ಲಿಯವರೆಗೂ ಯಾರೂ ಮಾಡದ ಸಾಧನೆ ಮಾಡಿ ದಾಖಲೆ ಬರೆದಿದೆ.. ರಿಲೀಸ್ ಆದ ಕೇವಲ 24 ಗಂಟೆಯಲ್ಲೇ ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೇಲರ್ ಇದಾಗಿದೆ.. ಕೇವಲ 24 ಗಂಟೆಯಲ್ಲೇ ಈ ಟ್ರೇಲರ್ ಬರೋಬ್ಬರಿ 355.5 ಬಾರಿ ಜನರು ವೀಕ್ಷಣೆ ಮಾಡಿದ್ದಾರೆ..
ಅಮೆಜಾನ್ ಕಾಡು ಭಾರತದ ಒಟ್ಟಾರೆ ವಿಸ್ತೀರ್ಣದ ಸುಮಾರು 2 ರಷ್ಟು ದೊಡ್ಡದಾಗಿದೆ.. ಭಾರತದ ಒಟ್ಟಾರೆ ವಿಸ್ತೀರ್ಣ 32 ಲಕ್ಷದ 87 ಸಾವಿರ ಸ್ಕ್ವೇರ್ ಕಿಲೋಮೀಟರ್ ಇದ್ರೆ , ಅಮೇಜಾನ್ ಕಾಡಿನ ಒಟ್ಟಾರೆ ವಿಸಸ್ತೀರ್ಣ ಸುಮಾರು 55 ಲಕ್ಷ ಸ್ಕ್ವೇರ್ ಕಿ.ಮೀ.
ಪಾಪಸ್ ಕಳ್ಳಿಯನ್ನ ಬಹಳ ಅಪಾಯಕಾರಿ ಗಿಡವೆಂದು ಪರಿಗಣಿಸಲಾಗುತ್ತದೆ.. ಹೆಚಚ್ಚಾಗಿ ಇದು ರೇಗಿಸ್ತಾನದಲ್ಲಿ ಸಿಗುತ್ತದೆ.. ಆದ್ರೆ ನಾವೆಲ್ಲರೂ ಮುಟ್ಟುವುದಕ್ಕೂ ಹೆದರುವ ಇದೇ ಪಾಪಸ್ ಕಳ್ಳಿಯನ್ನ ಒಂಟೆ ಬಹಳ ಆರಾಮಾಗಿ ತಿನ್ನುತ್ತದೆ..








