International ವಿವಾಹವು ವಧು-ವರರು ಆಸೆಗಳನ್ನು ಪೂರೈಸುವ ಸಂದರ್ಭವಾಗಿದೆ. ಅದು ಶಾಪಿಂಗ್ ಆಗಿರಲಿ ಅಥವಾ ಸ್ಥಳವನ್ನು ಆರಿಸಿಕೊಳ್ಳಲಿ, ಎಲ್ಲದರಲ್ಲೂ ಅವರು ತಮ್ಮ ಆದ್ಯತೆಗಳನ್ನು ಹೊಂದಿದ್ದಾರೆ. ವಧು ತನಗಾಗಿ ಉಡುಗೊರೆ ಅಥವಾ ಹಣವನ್ನು ಬೇಡುವ ಯಾವುದೇ ವಿವಾಹವನ್ನು ನೀವು ನೋಡಿರಲು ಸಾಧ್ಯವಿಲ್ಲ್ ಆದರೆ ಇಂತಹ ವಧುವಿನ ಕಥೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಧು ತನ್ನ ಮದುವೆಯ ಅತಿಥಿಗಳ ಮುಂದೆ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ ಇಷ್ಟು ಹಣ ತರಲಾಗದವರು ಮದುವೆಗೆ ಬರಬೇಕಿಲ್ಲ ಎಂಬ ಷರತ್ತನ್ನೂ ನೀಡಲಾಗಿದೆ. ಈ ಪೋಸ್ಟ್ ಅನ್ನು ವಧುವಿನ ಸ್ನೇಹಿತ ಹಂಚಿಕೊಂಡಿದ್ದಾರೆ. ತನ್ನ ಸ್ನೇಹಿತೆಯನ ವರ್ತನೆಯಿಂದ ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದ ಪೋಸ್ಟ್ ಪ್ರಕಾರ, ಮದುವೆಯ ಆಹ್ವಾನಿತ ಅತಿಥಿಗಳು ಮದುವೆಗೆ ಹಾಜರಾಗಲು ಬಯಸಿದರೆ, ಅವರು ಭಾರತೀಯ ಕರೆನ್ಸಿ ಪ್ರಕಾರ 24 ಸಾವಿರ ರೂಪಾಯಿಗಳ 250 ಪೌಂಡ್ ನಗದು ತರಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಇದು ಅವರ ಕಡೆಯಿಂದ ಮದುವೆಯ ಉಡುಗೊರೆಯಾಗಲಿದೆ. ಈ ಉಡುಗೋರೆ ನೀಡಲು ಬಯಸದಿದ್ದರೆ ಮದುವೆಗೆ ಅವರು ಬರುವ ಅಗತ್ಯವಿಲ್ಲ. ಅವಳು ತನ್ನ ಸ್ನೇಹಿತನ ಬಳಿಯೂ ಅದನ್ನೇ ಹೇಲಿದ್ದಾಳೆ ಅದನ್ನು ಕೇಳಿದ ಆಕೆಗೆ ಸ್ನೇಹಿತರಿಗೆ ಆಘಾತವಾಗಿದೆ. ವಾಸ್ತವವಾಗಿ, ಅವಳು ತನ್ನ ಸ್ನೇಹಿತನಿಗೆ ಉಡುಗೊರೆಯನ್ನು ಸಹ ಆದೇಶಿಸಿದ್ದಾಳೆ ಎಂದು ತಿಳಿದು ಬಂದಿದೆ.
ಬೆಲ್ಜಿಯಂ ಮೂಲದ ವಧು ನವವಿವಾಹಿತರು ಹೊಸ ಮನೆ ಖರೀದಿಸಲು ಹಣವನ್ನು ಮದುವೆಗೆ ಉಡುಗೊರೆಯಾಗಿ ನೀಡುವುದು ಇಲ್ಲಿ ಸಾಮಾನ್ಯವಾಗಿದೆ. ಇದಾದ ನಂತರ ಹುಡುಗಿ ತನ್ನ ಸ್ನೇಹಿತೆಯ ಮದುವೆಗೆ ಹೋಗುವ ಇರಾದೆ ಬಿಟ್ಟಿದ್ದಳು. ವಧು ತನ್ನ ಮದುವೆಯಿಂದಲೂ ಲಾಭ ಪಡೆಯಲು ಬಯಸಿದ್ದಾಳೆ ಎಂದು ಜನರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಅದೇ ಸಮಯದಲ್ಲಿ, ಅನೇಕ ಜನರು ಈ ಪದ್ಧತಿಗೆ ಆಶ್ಚರ್ಯ ವ್ಯಕ್ತಪಡಿಸಿದರು.








