ಅಂತರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ ಮತ್ತೆ ಮಾರ್ಚ್ 31ರ ವರೆಗೆ ವಿಸ್ತರಣೆ..!
ನವದೆಹಲಿ : ಭಾರತದ ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಮತ್ತೊಮ್ಮೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಸಂಚಾರದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ವಿಸ್ತರಿಸಲಾಗಿದೆ. ಹೌದು ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಸಂಚಾರ ನಿರ್ಬಂಧವನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಮೆರಿಕಾ ವಿರುದ್ಧ ಬೇಹುಗಾರಿಕೆಯ ಅಪಪ್ರಚಾರ : ಚೀನಾಗೆ ತಕ್ಕ ಪಾಠ ಕಲಿಸಿದ ವಿಶ್ವದ ದೊಡ್ಡಣ್ಣ..!
ಪರಿಷ್ಕೃತ ಸುತ್ತೋಲೆಯ ಅವಧಿಯನ್ನು ವಿಸ್ತರಿಸಲಾಗಿದ್ದು, ಅಂತರಾಷ್ಟ್ರೀಯ ವಾಣಿಜ್ಯಕ್ಕೆ ಸಂಬಂಧಿಸಿದಂತೆ ಭಾರತದಿಂದ ತೆರಳುವ ಮತ್ತು ಆಗಮಿಸುವ ಅಂತರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ವಿಮಾನ ಸೇವೆಯನ್ನು 2021ರ ಮಾರ್ಚ್ 31ವರೆಗೆ ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಫೆಬ್ರವರಿ 28ಕ್ಕೆ ನಿರ್ಬಂಧ ಕೊನೆಯಾಗಲಿದೆ. ಆದರೆ ಕೊರೊನಾ ಹಾವಳಿ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಮತ್ತೊಮ್ಮೆ ಈ ನಿರ್ಬಂಧ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಆದ್ರೆ ಕಾರ್ಗೋ ವಿಮಾನಗಳು ಹಾಗೂ ಅವಶ್ಯಕ ವಿಮಾನಗಳ ಕಾರ್ಯಾಚರಣೆ ಮಾತ್ರ ಮುಂದುವರೆಯಲಿದೆ.