International Whale Shark Day : ಶಾರ್ಕ್ ತಿಮಿಂಗಿಲಗಳ ಸಂರಕ್ಷಣೆ ಮತ್ತು ಜಾಗೃತಿ ದಿನ…
ಇಂದು ಅಂತರಾಷ್ಟ್ರೀಯ ವೇಲ್ ಶಾರ್ಕ್ ದಿನ. ಶಾರ್ಕ್ ತಿಮಿಂಗಿಲಗಳ ಪ್ರಾಮುಖ್ಯತೆ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಆಚರಿಸಲಾಗುತ್ತದೆ.
2008 ರಲ್ಲಿ ಇಸ್ಲಾ ಹಾಲ್‌ಬಾಕ್ಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ತಿಮಿಂಗಿಲ ಶಾರ್ಕ್ ಸಮ್ಮೇಳನದಲ್ಲಿ ಮೊದಲ ಸಲ ಆಚರಣೆ ಪ್ರಾರಂಭವಾಯಿತು. ಅಂತರರಾಷ್ಟ್ರೀಯ ತಿಮಿಂಗಿಲ ಶಾರ್ಕ್ ದಿನ ನಂತರದ ವರ್ಷಗಳಲ್ಲಿ ಜನಪ್ರಿಯವಾಗಿದೆ. ಅಂತರರಾಷ್ಟ್ರೀಯ ತಿಮಿಂಗಿಲ ಶಾರ್ಕ್ ದಿನದಂದು, ವೈಲ್ಡ್‌ಲೈಫ್ ಟ್ರಸ್ಟ್ ಆಫ್ ಇಂಡಿಯಾ (ಡಬ್ಲ್ಯುಟಿಐ) ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ‘ವೇಲ್ ಶಾರ್ಕ್ ಉಳಿಸಿ’ ಅಭಿಯಾನವನ್ನು ಪ್ರಾರಂಭಿಸುತ್ತಿದೆ.
ಶಾರ್ಕ್ ತಿಮಿಂಗಿಲಗಳ ಸಂರಕ್ಷಣೆ ಜಾಗೃತಿಗಾಗಿ ಮೀನುಗಾರರ ಜನರು, ಗ್ರಾಮ ಸಮುದಾಯಗಳು ಮತ್ತು ವಿದ್ಯಾರ್ಥಿಗಳನ್ನ ಒಂದುಗೂಡಿಸಿವ ಅಭಿಯಾನವನ್ನ ಇದು ಹೊಂದಿದೆ. ಸಂರಕ್ಷಣಾ ಪ್ರಯತ್ನಗಳನ್ನು ಹೆಚ್ಚಿಸಲು ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಶಾರ್ಕ್ ತಿಮಿಂಗಿಲಗಳು ಭೂಮಿಯ ಅತಿದೊಡ್ಡ ಶಾರ್ಕ್ ಜಾತಿಯ ಮೀನುಗಳಾಗಿವೆ. ಸಾಮಾನ್ಯವಾಗಿ ಆಳವಿಲ್ಲದ ಸಮುದ್ರದಲ್ಲಿ ಬಯಸುವ ಮತ್ತು ಅವುಗಳ ನಿಧಾನ ಮತ್ತು ಸೌಮ್ಯ ನಡವಳಿಕೆಗೆ ಹೆಸರುವಾಸಿಯಾಗಿವೆ. ಇದೇ ಕಾರಣಕ್ಕೆ ಮನುಷ್ಯರ ಬೇಟೆಗೂ ಸುಲಭ ತುತ್ತಾಗುತ್ತವೆ.
ಶಾರ್ಕ್ ತಿಮಿಂಗಿಲಗಳ ಮಾರುಕಟ್ಟೆ ಮೀನಿನ ಸಂಖ್ಯೆಯಲ್ಲಿ ಸರಿಸುಮಾರು 50% ಕುಸಿತಕ್ಕೆ ಕಾರಣವಾಯಿತು. ಇಂದು ಅಳಿವಿನಂಚಿನಲ್ಲಿರುವ ಮೀನುಗಳ ಪಟ್ಟಿಯಲ್ಲಿ ಸೇರಿದೆ. ‘ಸೇವ್ ದಿ ವೇಲ್ ಶಾರ್ಕ್’ ಅಭಿಯಾನ ಸುಂದರವಾದ ಪ್ರಾಣಿಯನ್ನು ಅದರ ಹಿಂದಿನ ವೈಭವಕ್ಕೆ ಮರುಸ್ಥಾಪಿಸುವ ಗುರಿಯನ್ನು ಹೊಂದಿದೆ.








