INTRESTING NEWS : ನಿಮಗೆ ಇಷ್ಟವಾಗುವ ಸುದ್ದಿಗಳು
OMG..! ಇವರೆಂಥಾ ಶ್ವಾನ ಪ್ರೇಮಿ : ನಾಯಿ ಹೆಸರಿಗೆ 36 ಕೋಟಿ ರೂ. ಬರೆದಿಟ್ಟ ಮಾಲೀಕ..!
ನಾಯಿ ಹಾಗೂ ಮನುಷ್ಯರ ನಡುವಿನ ಪ್ರೀತಿ ಯಾರಿಂದಲೂ ವರ್ಣಿಸೋಕೆ ಸಾಧ್ಯವಾಗೋದಿಲ್ಲ. ಸಾಕಿದ ನಾಯಿಗಾಗಿ ಮಾಲೀಕರೂ ಏನ್ ಬೇಕಾದ್ರೂ ಮಾಡೋ ಅಂತಹ ಅನೇಕ ನಿದರ್ಶನಗಳು ನಮ್ಮ ಕಣ್ಮುಂದಿವೆ. ಆದ್ರೆ ಈ ವ್ಯಕ್ತಿಯ ನಾಯಿ ಪ್ರೇಮ ನಿಜಕ್ಕೂ ಅವೆಲ್ಲಕ್ಕೂ ಮೀರಿದ್ದೂ. ಅದ್ರಲ್ಲಿ ನೋ ಡೌಟ್.
ಹೌದು ಇಲ್ಲೊಬ್ಬ ಉದ್ಯಮಿ ತನ್ನ ಆಸ್ತಿಯಲ್ಲಿ 5 ಮಿಲಿಯನ್ ಡಾಲರ್ ಹಣವನ್ನ ಸಾಕು ನಾಯಿಯ ಆರೈಕೆಗಾಗಿಯೇ ಮೀಸಲಿಟ್ಟು ನಾಯಿ ಪ್ರಿಯರ ಹೃದಯ ಕದ್ದಿದ್ದಾನೆ.
ನಾಯಿಗಳನ್ನು ಕಂಡರೆ ಕಲ್ಲು ಹೊಡೆಯುವ ಅದೆಷ್ಟೋ ಜನರ ಮಧ್ಯೆ ನಾಯಿಯನ್ನು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುವವರೂ ಇದ್ದಾರೆ ಎಂಬುದನ್ನ ಈ ವ್ಯಕ್ತಿ ತೋರಿಸಿಕೊಟ್ಟಿದ್ದಾರೆ.
ಪರೀಕ್ಷೆ ಬರೆಯಲು ಹೊರಟಾಗಲೇ ಗರ್ಭಿಣಿಗೆ ಹೆರಿಗೆ ನೋವು: ಮಗುವಿಗೆ ಜನ್ಮ ನೀಡಿ ಪರೀಕ್ಷೆ ಬರೆದ ಮಹಿಳೆ..!
ಬಿಹಾರ: ಪರೀಕ್ಷೆ ಬರೆಯಲೆಂದು ತೆರಳುತ್ತಿದ್ದ ತುಂಬು ಗರ್ಭಿಣಿಗೆ ರಸ್ತೆ ಮಧ್ಯೆಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಮಗುವಿಗೆ ಜನ್ಮ ನೀಡಿ, ಬಳಿಕ ಮಹಿಳೆ ಪರೀಕ್ಷೆಗೆ ಹಾಜರಾಗಿರುವ ಘಟನೆಯೊಂದು ಬಿಹಾರದ ಮೋತಿಹರ ಜಿಲ್ಲೆಯಲ್ಲಿ ನಡೆದಿದೆ.
ಕಾಜಲ್ ಎಂಬ ಮಹಿಳೆ ತುಂಬು ಗರ್ಭಿಣಿಯಾಗಿದ್ದು, ದ್ವಿತೀಯ ಪಿಯು ಪರೀಕ್ಷೆ ಇದ್ದುದರಿಂದ ಪರೀಕ್ಷೆ ಬರೆಯಲು ಜಿಲ್ಲಾ ಕೇಂದ್ರಕ್ಕೆ ತೆರಳಲು ವಾಹನದಲ್ಲಿ ಹೋಗುತ್ತಿದ್ದಳು. ಮಾರ್ಗ ಮಧ್ಯೆಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ತಕ್ಷಣ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಆಕೆ ತಕ್ಷಣ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆಯನ್ನು ಬರೆದಿದ್ದು, ನಿಜಕ್ಕೂ ಶ್ಲಾಘನೀಯವೇ.
Whaaaat…! ಇಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರಾ..! : ಚೀನಾದ INTRESTING FACTS..!
ಜಗತ್ತೇ ಒಂದ್ ದಾರಿ ಆದ್ರೆ ಚೀನಾದು ಮತ್ತೊಂದು ದಾರಿ
ಹೆಲೋ ಫ್ರೆಂಡ್ಸ್…
ಇವತ್ತು ನಾವ್ ನಿಮಗೆ ಪರಿಚಯ ಮಾಡಿಸಲಿಕ್ಕೆ ಹೊಟಿರುವ ದೇಶ ಪ್ರಪಂಚದಲ್ಲೇ ವಿಭಿನ್ನ , ವಿಭಿನ್ನ ಸಂಸ್ಕೃತಿ ಹೊಂದಿರುವ ದೇಶ ಚೈನಾ.. ಎಸ್ ಚೈನಾ…
ಚೈನಾ ಈ ದೇಶದ ಬಗ್ಗೆ , ಹೇಳೋಕೆ ಸಾಕಷ್ಟು ಇದೆ. ಎಷ್ಟೋ ವಿಚಾರಗಳಲ್ಲಿ ಈ ದೇಶದಿಂದ ಕಲಿಯೋದು ಇದೆ. ಇನ್ನೂ ಎಷ್ಟೋ ವಿಚಾರಗಳಲ್ಲಿ ಈ ದೇಶಕ್ಕೆ ಇಡೀ ಜಗತ್ತಿನ ಎಲ್ಲಾ ದೇಶಗಳಿಂದಲೂ ಬುದ್ದಿ ಕಲಿಯೋ ಅನಿವಾರ್ಯತೆಯೂ ಇದೆ.
ಕೆಲ ದಶಕಗಳ ಹಿಂದೆ ಚೈನಾ ಆರ್ಥಿಕವಾಗಿರಬಹುದು ಅಭಿವೃದ್ಧಿ ವಿಚಾರದಲ್ಲಿಯೇ ಇರಬಹುದು ನಮ್ಮ ಭಾರತ ದೇಶಕ್ಕಿಂತ ತುಂಬಾ ಅಂದ್ರೆ ಬಹಳವೇ ಹಿಂದಿತ್ತು. ಆದ್ರೆ ಇಂದು ನಮ್ಮ ಭಾರತಕ್ಕಿಂತ ಅನೇಕ ಪಟ್ಟು ಮುನ್ನಡೆ ಸಾಧಿಸಿದೆ. ಪ್ರಪಂಚದಲ್ಲಿ ಚೀನಾದ ವಸ್ತುಗಳ ಮಾರಾಟವಾಗದೇ ಇರುವ ಜಾಗವೇ ಇಲ್ಲ.
ಸಂಪೂರ್ಣ ಸುದ್ದಿಗಾಗಿ ಲಿಂಕ್ ಕ್ಲಿಕ್ ಮಾಡಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








