E – ಮಾರ್ಕೆಟಿಂಗ್ ಕೊಂಡುಕೊಳ್ಳಲು ಮತ್ತು ಮಾರಲು ಸಹ ಒಂದೊಳ್ಳೆ ಪ್ಲಾಟ್ ಫಾರ್ಮ್ ಮತ್ತೆ ಬೆಸ್ಟ್ ಆಪ್ಷನ್ ಆಗಿ , ಆಧುನಿಕ ಲೈಫ್ ಸ್ಟೈಲ್ ನಲ್ಲಿ ಹೆಚ್ಚಿನ ಜನರು ಅಡಿಕ್ಟ್ ಆಗಿರುವ ಶಾಪಿಂಗ್ ವಿಧಾನವಾಗಿದೆ..
ಆದ್ರೆ ಎಷ್ಟೋ ಸಲ ಆನ್ ಲೈನ್ ಶಾಪಿಂಗ್ ನಲ್ಲಿ ಬುಕ್ ಮಾಡೋದೇ ಒಂದು ಬರೋದೇ ಒಂದು.. ಮೊಬೈಲ್ ಬುಕ್ ಮಾಡಿದ್ರೆ ಸೋಪ್ ಬರುವುದು ಈ ರೀತಿ ಎಲ್ಲಾ ಆಗಿದೆ..
ಇದೀಗ ಗಗ್ರಾಹಕರೊಬ್ಬರು 1 ಲಕ್ಷ ರೂಪಾಯಿ ಮೌಲ್ಯದ ಐಫೋನ್ ಬುಕ್ ಮಾಡಿದ್ರೆ ಅವರಿಗೆ ಚಾಕಲೇಟ್ ಬಂದಿದೆ..
ಹೌದು… ಲಂಡನ್ ನ ನಿವಾಸಿಯಾಗಿರುವ ಈ ವ್ಯಕ್ತಿ ಐಫೋನ್ 13 ಪ್ರೊ ಮ್ಯಾಕ್ಸ್ ಬುಕ್ ಮಾಡಿದ್ರು.. ಅವರಿಗೆ ಪೇಪರ್ ನಲ್ಲಿ ಸುತ್ತಿದ ಎರಡು ಚಾಕೊಲೇಟ್ ಗಳು ಬಂದಿದ್ದು, ಅದನ್ನು ನೋಡಿ ಗ್ರಾಹಕ ದಂಗಾಗಿದ್ದಾರೆ..
ಈ ಶಾಕಿಂಗ್ ವಿಚಾರವನ್ನ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ..
ಇಂಗ್ಲೆಂಡ್ನ ಲೀಡ್ಸ್ ನ ಡೇನಿಯಲ್ ಕ್ಯಾರೊಲ್ ಆನ್ಲೈನ್ ನಲ್ಲಿ 1 ಲಕ್ಷ ರೂ. ಮೌಲ್ಯದ ಐಫೋನ್ 13 ಪ್ರೊ ಮ್ಯಾಕ್ಸ್ ಅನ್ನು ಬುಕ್ ಮಾಡಿದ್ದರು. ಆದರೆ ಅವರು ಬುಕ್ ಮಾಡಿ ಎರಡು ವಾರಗಳಾದರೂ ಬಂದಿರಲಿಲ್ಲ. ಕೆಲ ದಿನಗಳ ವಿಳಂಬದ ನಂತರ ಬುಕ್ ಮಾಡಿದ್ದ ಬಾಕ್ಸ್ ಬಂದಿತು. ಆದರೆ ಅದನ್ನು ತೆಗೆದು ನೋಡಿದಾಗ ಹೌಹಾರಿದ್ದಾರೆ..
ಡೇನಿಯಲ್ಗೆ ಫೋನ್ ಬದಲಾಗಿ ರೋಲ್ನಲ್ಲಿ ಸುತ್ತಿದ ಎರಡು ಕ್ಯಾಡ್ಬರಿ ವೈಟ್ ಓರಿಯೊ ಚಾಕೊಲೇಟ್ ಬಂದಿತ್ತು. ಈ ಬಗ್ಗೆ ಡೇನಿಯಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡೇನಿಯಲ್, ನಾನು ಡಿಎಚ್ಎಲ್ ವೆಬ್ಸೈಟ್ ಮೂಲಕ ಡಿಸೆಂಬರ್ 2 ರಂದು ಫೋನ್ ಅನ್ನು ಆರ್ಡರ್ ಮಾಡಿದ್ದೆ. ಡಿಸೆಂಬರ್ 17 ರಂದು ನನಗೆ ಫೋನ್ ಡೆಲಿವರಿ ಮಾಡಬೇಕಿತ್ತು. ಆದರೆ ಅದು ಬರಲಿಲ್ಲ. ನಂತರ ನಾನೇ ಅಲ್ಲಿಗೆ ಹೋಗಿ ವಿಚಾರಿಸಿದಾಗ ನಿಮ್ಮ ಆರ್ಡರ್ ಶನಿವಾರ ಸಿಗುತ್ತೆ ಎಂದು ಮಾಹಿತಿಯನ್ನು ನೀಡಿದರು.
ನಾನೇ ಸೋಮವಾರ ಆ ಪಾರ್ಸೆಲ್ ಸಂಗ್ರಹಿಸಲು 24-ಮೈಲಿ ಹೋಗಬೇಕಾಯಿತು. ಆದರೂ ಹೋಗಿ ನನ್ನ ಆರ್ಡರ್ ಅನ್ನು ತೆಗೆದುಕೊಂಡು ಮನೆಗೆ ಬಂದೆ. ಆ ಬಾಕ್ಸ್ ತುಂಬಾ ಹಗುರವಾಗಿತ್ತು. ಆಗ ನಾನು ಅದನ್ನು ತೆಗೆದು ನೋಡಿದಾಗ ಶಾಕ್ ಆಯ್ತು. ಅದರಲ್ಲಿ ನಾನು ಆರ್ಡರ್ ಮಾಡಿದ ಫೋನ್ ಬದಲಿಗೆ ರೋಲ್ ನಲ್ಲಿ ಸುತ್ತಿ ಇಟ್ಟಿದ್ದ ಚಾಕೊಲೇಟ್ ಇತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಗಾದ ಮೋಸವನ್ನು ಡೇನಿಯಲ್ ಟ್ವಿಟ್ಟರ್ನಲ್ಲೂ ಹಂಚಿಕೊಂಡಿದ್ದ ಡೇನಿಯಲ್ ಗೆ ಡಿಎಚ್ಎಲ್ ವಕ್ತಾರರು ಪ್ರತಿಕ್ರಿಯಿಸಿದ್ದು, ಘಟನೆ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದ್ದು, ನಷ್ಟವಾದ ಆರ್ಡರ್ ಅನ್ನು ಮರುಕಳುಹಿಸುತ್ತೇವೆ. ಅಲ್ಲಿಯವರೆಗೂ ನಾವು ನಿಮ್ಮ ಸಂಪರ್ಕದಲ್ಲೇ ಇರುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.