ಐಪಿಎಲ್ 2020- ಸಿಎಸ್ ಕೆ ಕನಸು ಭಗ್ನ.. ರಾಯಲ್ಸ್ ಆಸೆ ಇನ್ನೂ ಜೀವಂತ..!
2020ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೊರಬಿದ್ದಿದೆ. ಸತತ ಗೆಲುವು ದಾಖಲಿಸಿಕೊಂಡು ಪ್ಲೇ ಆಫ್‍ಗೆ ಎಂಟ್ರಿಕೊಡುವ ತವಕದಲ್ಲಿತ್ತು ಸಿಎಸ್ ಕೆ ತಂಡ.
ಆದ್ರೆ ಸಿಎಸ್ ಕೆ ತಂಡ ಗೆಲುವಿನ ಆಸೆಯನ್ನು ರಾಜಸ್ತಾನ ರಾಯಲ್ಸ್ ಭಗ್ನಗೊಳಿಸಿತ್ತು.
ಟೂರ್ನಿಯ 37ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಏಳು ವಿಕೆಟ್ ಗಳಿಂದ ರಾಜಸ್ತಾನ ರಾಯಲ್ಸ್ ತಂಡಕ್ಕೆ ಶರಣಾಯ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್ ಕೆ ತಂಡ ಆರಂಭದಲ್ಲೇ ಮುಗ್ಗರಿಸಿತ್ತು.
57 ರನ್ ಗಳಿಸುವಷ್ಟರಲ್ಲಿ ಸಿಎಸ್ ಕೆ ತಂಡದ ನಾಲ್ಕು ಬ್ಯಾಟ್ಸ್ ಮೆನ್ ಗಳು ಪೆವಿಲಿಯನ್ ಸೇರಿಕೊಂಡಿದ್ದರು.
ಸ್ಯಾಮ್ ಕುರನ್ 22 ರನ್, ಫಾಫ್ ಡು ಪ್ಲೆಸಸ್ 10 ರನ್, ಶೇನ್ ವಾಟ್ಸನ್ 8 ರನ್ ಹಾಗೂ ಅಂಬಟಿ ರಾಯುಡು 13 ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ನಂತರ ಧೋನಿ ಮತ್ತು ರವೀಂದ್ರ ಜಡೇಜಾ ತಂಡಕ್ಕೆ ಕೊಂಚ ಮಟ್ಟಿನ ಆಧಾರವಾದ್ರು.
ರಾಜಸ್ತಾನ ರಾಯಲ್ಸ್ ತಂಡದ ನಿಖರ ಬೌಲಿಂಗ್ ದಾಳಿಯ ಮುಂದೆ ಸಿಎಸ್ ಕೆ ಆಟಗಾರರು ರನ್ ಗಳಿಸಲು ಒದ್ದಾಟ ನಡೆಸಿದ್ರು.
ಧೋನಿ ತಾಳ್ಮೆಯ ಆಟವನ್ನಾಡಿದ್ರು. ಆದ್ರೆ 28 ರನ್ ಗಳಿಸಿ ರನೌಟಾದ್ರು, ಮತ್ತೊಂದೆಡೆ ರವೀಂದ್ರ ಜಡೇಜಾ ಅಜೇಯ 35 ರನ್ ಸಿಡಿಸಿದ್ರು.
ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್ ಗೆ 125 ರನ್ ದಾಖಲಿಸಿತ್ತು.
ಗೆಲ್ಲಲು ಸುಲಭ ಸವಾಲನ್ನು ಬೆನ್ನಟ್ಟಿದ್ದ ರಾಜಸ್ತಾನ ರಾಯಲ್ಸ್ ಆರಂಭದಲ್ಲಿ ಆಘಾತ ಅನುಭವಿಸಿತ್ತು.
28 ರನ್ ಗಳಿಸುಷ್ಟರಲ್ಲಿ ಮೂರು ಬ್ಯಾಟ್ಸ್ ಮೆನ್ ಗಳು ಪೆವಿಲಿಯನ್ ದಾರಿ ಹಿಡಿದಿದ್ದರು.
ಬೆನ್ ಸ್ಟೋಕ್ಸ್ 19 ರನ್, ರಾಬಿನ್ ಉತ್ತಪ್ಪ 4 ರನ್ ಹಾಗೂ ಸಂಜು ಸಾಮ್ಸನ್ ಅವರು ಶೂನ್ಯ ಸುತ್ತಿದ್ರು.
ನಂತರ ಸಿಎಸ್‍ಕೆ ಬೌಲರ್ ಗಳಿಗೆ ದಿಟ್ಟ ಉತ್ತರವನ್ನು ನೀಡಿದ್ದು ನಾಯಕ ಸ್ಟೀವನ್ ಸ್ಮಿತ್ ಮತ್ತು ಜೋಸ್ ಬಟ್ಲರ್.
ಜೋಸ್ ಬಟ್ಲರ್ 48 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಮೂಲಕ ಅಜೇಯ 70 ರನ್ ದಾಖಲಿಸಿದ್ರು.
ಇನ್ನೊಂದೆಡೆ ಸ್ಟೀವನ್ ಸ್ಮಿತ್ ಅಜೇಯ 26 ರನ್ ಗಳಿಸಿದ್ರು.
ಅಂತಿಮವಾಗಿ 17.3 ಓವರ್ ಗಳಲ್ಲಿ ರಾಜಸ್ತಾನ ರಾಯಲ್ಸ್ ತಂಡ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಚೆಲ್ಲಿತ್ತು.
ಜೋಸ್ ಬಟ್ಲರ್ ಪಂದ್ಯ ಶ್ರೇಷ್ಠರಾಗಿ ಹೊರಹೊಮ್ಮಿದ್ರು.