ಸೋಲಿನ ಬಳಿಕ ಅಯ್ಯರ್ ನೀಡಿದ್ದು ಸಲಹೆಯೂ ಹೌದು.. ಎಚ್ಚರಿಕೆಯೂ ಹೌದು..!
ಕೆಕೆಆರ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ಎಲ್ಲಾ ವಿಭಾಗದಲ್ಲೂ ತಮಗಿಂತ ಚೆನ್ನಾಗಿ ಆಡಿದ್ದಾರೆ. ಹೀಗಾಗಿ ನಾವು ಸೋಲು ಅನುಭವಿಸಿದ್ದೇವೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಅಭಿಮತ.
ಐಪಿಎಲ್ ಟೂರ್ನಿಯ ಆರಂಭದಿಂದಲೇ ಡೆಲ್ಲಿ ಕ್ಯಾಪಿಟಲ್ಸ್ ಸಾಕಷ್ಟು ಭರವಸೆ ಮೂಡಿಸಿತ್ತು. ನಿಖರ ಬೌಲಿಂಗ್ ಮತ್ತು ಅತ್ಯುತ್ತಮ ಬ್ಯಾಟಿಂಗ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗಮನ ಸೆಳೆದಿತ್ತು.
ಆದ್ರೆ ಎರಡನೇ ಹಂತದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ಇದು ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚ್ ರಿಕಿ ಪಾಂಟಿಂಗ್ ಗೆ ಚಿಂತೆಯನ್ನುಂಟು ಮಾಡಿದೆ.
ಹಾಗಂತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಧೃತಿಗೆಟ್ಟಿಲ್ಲ. ಸದ್ಯ ಸಾಲು ಸಾಲು ಸೋಲಿನಿಂದ ಒತ್ತಡಕ್ಕೆ ಸಿಲುಕಿದ್ದಾರೆ. ಇದ್ರಿಂದ ಹೊರಬರಬೇಕಿದೆ. ಹೀಗೆ ಒತ್ತಡದಲ್ಲಿದ್ದ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ ಈಗ ಆತ್ಮವಿಶ್ವಾಸವನ್ನು ತುಂಬಿದ್ದಾರೆ.
ಕೆಕೆಆರ್ ವಿರುದ್ಧ 59 ರನ್ ಗಳಿಂದ ಸೋತ ಬಳಿಕ ಶ್ರೇಯಸ್ ಅಯ್ಯರ್ ಅವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ಆಟಗಾರರು ಟೂರ್ನಿಯಲ್ಲಿ ಬದುಕುಳಿಯಬೇಕು ಎಂಬ ಮನಸ್ಥಿತಿಯಿಂದ ಹೊರಬೇಕು. ಅಂತಹ ಮನಸ್ಥಿತಿಯಲ್ಲೂ ಆಡಬೇಡಿ. ನಿಮ್ಮ ನೈಜ ಆಟವನ್ನಾಡಬೇಕು. ಒತ್ತಡಕ್ಕೆ ಸಿಲುಕದೆ ಸ್ವತಂತ್ರವಾಗಿ ಆಡಬೇಕು ಎಂದು ಅಯ್ಯರ್ ಹೇಳಿದ್ದಾರೆ.
ಮೊದಲು ನಾವು ಮಾನಸಿಕವಾಗಿ ಗಟ್ಟಿಗೊಳ್ಳಬೇಕು. ನಾವು ಸ್ವತಂತ್ರ ಮನಸ್ಸಿನಿಂದ ಆಡಬೇಕು. ಒತ್ತಡಕ್ಕೆ ಸಿಲುಕಿ ಬದುಕಿಯಬೇಕು ಅನ್ನೋ ಮನಸ್ಥಿತಿಯಲ್ಲಿ ಆಡಬಾರು ಎಂದು ಡೆಲ್ಲಿ ಹುಡುಗರಿಗೆ ಅಯ್ಯರ್ ಸಲಹೆ ನೀಡಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಯ್ಯರ್ ಕೂಡ ಒತ್ತಡಕ್ಕೆ ಸಿಲುಕಿದ್ದಂತೆ ಕಾಣುತ್ತಿದ್ದಾರೆ. ಬೌಲರ್ ಗಳು ಮತ್ತು ಬ್ಯಾಟ್ ಮೆನ್ ಗಳು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡದೇ ಇದ್ದಾಗ ಅವರ ಮುಖದಲ್ಲಿ ಒತ್ತಡವಿರುವುದು ಸ್ಪಷ್ಟವಾಗುತ್ತಿದೆ.
ಒಟ್ಟಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೆ ಗೆಲುವಿನ ಟ್ರ್ಯಾಕ್ ಗೆ ಮರಳಬೇಕು. ಕಳೆದ ಬಾರಿ ಕೂಡ ಪ್ಲೇ ಆಫ್ ಗೆ ಎಂಟ್ರಿಯಾಗಿ ನಂತರ ಒತ್ತಡಕ್ಕೆ ಸಿಲುಕಿ ನಿರಾಸೆಗೊಂಡಿತ್ತು.