ಐಪಿಎಲ್ 2020 – ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ತಾನ ರಾಯಲ್ಸ್ ಸವಾರಿ ಮಾಡುತ್ತಾ ?
ಐಪಿಎಲ್ ಟೂರ್ನಿಯ 30ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು ಕಾದಾಟ ನಡೆಸಲಿವೆ.
ಈಗಾಗಲೇ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎರಡನೇ ಸ್ಥಾನದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಟೂರ್ನಿಯ ಫೆವರೀಟ್ ತಂಡವಾಗಿದೆ. ಈಗಾಗಲೇ ಆಡಿರುವ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದುಕೊಂಡಿದೆ.
ಸಂಘಟಿತ ಆಟವನ್ನಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಾಕಷ್ಟು ಭರವಸೆ ಮೂಡಿಸುತ್ತಿದೆ. ಆದ್ರೆ ರಿಷಬ್ ಪಂತ್ ಗಾಯಗೊಂಡಿರುವುದು ತಂಡಕ್ಕೆ ಸ್ವಲ್ಪ ಮಟ್ಟಿನ ಹಿನ್ನೆಡೆಯಾಗುತ್ತಿದೆ.
ಇನ್ನುಳಿದಂತೆ ತಂಡದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಪೃಥ್ವಿ ಶಾ, ಧವನ್, ಅಯ್ಯರ್, ರಹಾನೆ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರಗಳು.
ಹಾಗೇ ಬೌಲಿಂಗ್ ನಲ್ಲಿ ರಬಾಡ ಆನ್ರಿಚ್, ಆರ್. ಅಶ್ವಿನ್, ಅಕ್ಸರ್ ಮತ್ತು ಹರ್ಷೆಲ್ ಪಟೇಲ್ ಉತ್ತಮ ನಿರ್ವಹಣೆ ಮಾಡುತ್ತಿದ್ದಾರೆ.
ಮತ್ತೊಂದೆಡೆ ಮಾರ್ಕಸ್ ಸ್ಟೋನಿಸ್ ಅವರ ಆಲ್‍ರೌಂಡ್ ಆಟ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವರದಾನವಾಗುತ್ತಿದೆ.
ಇನ್ನೊಂದೆಡೆ ರಾಜಸ್ತಾನ ರಾಯಲ್ಸ್ ತಂಡದಲ್ಲಿ ಘಟಾನುಘಟಿ ಆಟಗಾರರು ಇದ್ದಾರೆ.
ಆದ್ರೆ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಬೆನ್ ಸ್ಟೋಕ್ಸ್, ಸ್ಟೀವನ್ ಸ್ಮಿತ್, ಜೋಸ್ ಬಟ್ಲರ್, ಆರ್ಚೆರ್, ಸಂಜು ಸಾಮ್ಸನ್ಸ್ ನಂತಹ ಆಟಗಾರರು ಇದ್ದಾರೆ.
ಈ ನಡುವೆ ರಾಹುಲ್ ಟೆವಾಟಿಯಾ ಆಲ್ ರೌಂಡ್ ಆಟವನ್ನಾಡುತ್ತಿದ್ದಾರೆ.
ಹಾಗಂತ ಈ ಆಟಗಾರರು ಇಲ್ಲಿಯವರೆಗೆ ಕಾಗದದ ಮೇಲಿನ ಹುಲಿಗಳು. ನೈಜ ಆಟವನ್ನಾಡಿದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಒಟ್ಟಿನಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸೋತು ಪೆಟ್ಟು ತಿಂದ ಹುಲಿಯಂತಾಗಿರುವ ರಾಜಸ್ತಾನ ರಾಯಲ್ಸ್ ತಂಡಗಳ ಕಾದಾಟ ಅಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಭವನೀಯ ತಂಡ
ಶ್ರೇಯಸ್ ಅಯ್ಯರ್ (ನಾಯಕ), ಶಿಖರ್ ಧವನ್, ಪೃಥ್ವಿ ಶಾ, ಅಜ್ಯಂಕ್ಯಾ ರಹಾನೆ, ಮಾರ್ಕಸ್ ಸ್ಟೋನಿಸ್, ಅಲೆಕ್ಸ್ ಕಾರ್ರೆ, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡ, ಅನ್ರಿಚ್ ನೊಟ್ರ್ಜೆ
ರಾಜಸ್ತಾನ ರಾಯಲ್ಸ್ ಸಂಭವನೀಯ ತಂಡ
ಸ್ಟೀವನ್ ಸ್ಮಿತ್ (ನಾಯಕ), ಜೋಸ್ ಬಟ್ಲರ್, ರಾಬಿನ್ ಉತ್ತಪ್ಪ, ಸಂಜು ಸಾಮ್ಸನ್, ಬೆನ್ ಸ್ಟೋಕ್ಸ್, ರಿಯಾನ್ ಪರಾಗ್, ರಾಹುಲ್ ಟೆವಾಟಿಯಾ, ಜೋಫ್ರಾ ಆರ್ಚೆರ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ