ಐಪಿಎಲ್ 2020- ವಿನಯ್ ಕುಮಾರ್ ದಾಖಲೆಯನ್ನು ಅಳಿಸಿ ಹಾಕ್ತಾರಾ ರಬಾಡ
ಆರ್.ವಿನಯ್ ಕುಮಾರ್.. ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ಕರ್ನಾಟಕದ ವೇಗದ ಬೌಲರ್. ದೇಸಿ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾದಲ್ಲೂ ಸ್ಥಾನ ಪಡೆದುಕೊಂಡಿದ್ದ ಹೆಮ್ಮೆಯ ಕನ್ನಡಿಗ.
ಹಾಗೇ, ವಿನಯ್ ಕುಮಾರ್ ಐಪಿಎಲ್ ನಲ್ಲೂ ಅಮೋಘ ಪ್ರದರ್ಶನ ನೀಡಿದ್ದಾರೆ. ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ವಿನಯ್ ಆಡುವ ಅವಕಾಶ ಪಡೆದುಕೊಂಡಿಲ್ಲ. ಆದ್ರೂ ವಿನಯ್ ಕುಮಾರ್ ಹೆಸರು ಐಪಿಎಲ್ ನಲ್ಲಿ ಸುದ್ದಿಯಾಗಿದೆ.
ಹೌದು, ವಿನಯ್ ಕುಮಾರ್ ಐಪಿಎಲ್ ನಲ್ಲಿ ದಾಖಲೆಯ ಸಾಧನೆಯೊಂದನ್ನು ಮಾಡಿದ್ದರು. ಆದ್ರೆ ಆ ದಾಖಲೆಯ ಸಾಧನೆ ಈಗ ಅಳಿಸಿ ಹೋಗಿದೆ. ಹಾಗಿದ್ರೆ ವಿನಯ್ ಮಾಡಿರುವ ಸಾಧನೆ ಏನು ? ವಿನಯ್ ಮಾಡಿರುವ ಆ ಸಾಧನೆಯನ್ನು ಸರಿಗಟ್ಟಿದ್ದು ಯಾರು ? ಈ ಪ್ರಶ್ನೆಗೆ ಉತ್ತರ ಸಿಗೋದು ಕಾಗಿಸೊ ರಬಾಡ ಅವರ ಆ ಸಾಧನೆಯೊಮದು.
ಹೌದು, ಕಾಗಿಸೊ ರಬಡಾ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ರಹ್ಮಸ್ತ್ರವಾಗಿರುವ ರಬಾಡ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಇದೇ ವೇಳೆ ರಬಡಾ ಅವರು ಸತತ 19 ಇನಿಂಗ್ಸ್ ಗಳಲ್ಲಿ ವಿಕೆಟ್ ಪಡೆಯುವ ಮೂಲಕ ಐಪಿಎಲ್ ನಲ್ಲಿ ಹೊಸ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ರಬಾಡ ಅವರು ಆರ್. ವಿನಯ್ ಕುಮಾರ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.
ಆರ್. ವಿನಯ್ ಕುಮಾರ್ ಅವರು 2012-13ರ ಐಪಿಎಲ್ ನ ಸತತ 19 ಪಂದ್ಯಗಳಲ್ಲಿ ವಿಕೆಟ್ ಪಡೆದುಕೊಂಡಿದ್ದರು. ಇದೀಗ ಕಾಗಿಸೊ ರಬಾಡ ಅವರು 2019ರಿಂದ 2020ರವರೆಗೆ ಸತತ 19 ಪಂದ್ಯಗಳಲ್ಲಿ ವಿಕೆಟ್ ಪಡೆದುಕೊಂಡು ವಿನಯ್ ಸಾಧನೆಯ ಜೊತೆಗೆ ಸೇರಿಕೊಂಡಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದ ಲಸಿತ್ ಮಾಲಿಂಗ ಅವರು 2015ರಿಂದ 2017ರವರೆಗೆ ಸತತ 17 ಪಂದ್ಯಗಳಲ್ಲಿ ವಿಕೆಟ್ ಉರುಳಿಸಿದ್ದಾರೆ. 2016 -2017ರ ಸಾಲಿನಲ್ಲಿ ಆರ್ ಸಿಬಿಯ ಯುಜುವೇಂದ್ರ ಚಾಹಲ್ ಅವರು 15 ಪಂದ್ಯಗಳಲ್ಲಿ ವಿಕೆಟ್ ಪಡೆದುಕೊಂಡಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ರಬಾಡ ಅವರ ಮಾರಕವಾಗಿ ಪರಿಣಮಿಸುತ್ತಿದ್ದಾರೆ. ಆಡಿರುವ 12 ಐದು ಪಂದ್ಯಗಳಲ್ಲಿ 12 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. ಹಾಗೇ ಯುಜುವೇಂದ್ರ ಚಾಹಲ್ ಅವರು ಎಂಟು ವಿಕೆಟ್ ಕಬಳಿಸಿದ್ದಾರೆ.
ಒಟ್ಟಿನಲ್ಲಿ ಕಾಗಿಸೊ ರಬಡಾ ಮುಂದಿನ ಪಂದ್ಯದಲ್ಲೂ ವಿಕೆಟ್ ಉರುಳಿಸಿದ್ರೆ ಐಪಿಎಲ್ ನಲ್ಲಿ ವಿನಯ್ ಕುಮಾರ್ ದಾಖಲೆಯನ್ನು ಅಳಿಸಿ ಹಾಕಿ ಹೊಸ ದಾಖಲೆಯನ್ನು ಬರೆಯಲಿದ್ದಾರೆ.