ಐಪಿಎಲ್ 2020 – ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ದಾಳಿಗೆ ನಲುಗಿದ ರಾಜಸ್ತಾನ ರಾಯಲ್ಸ್
ರಾಜಸ್ತಾನ ರಾಯಲ್ಸ್‍ಗೆ ಮತ್ತೊಂದು ಸೋಲು.. ಡೆಲ್ಲಿ ಕ್ಯಾಪಿಟಲ್ಸ್‍ಗೆ ಇನ್ನೊಂದು ಗೆಲುವು..
ನಿಜಕ್ಕೂ ರೋಚಕ ಪಂದ್ಯ. ಕೊನೆಯ ಐದು ಓವರ್ ಅಂತು ರಾಜಸ್ತಾನ ರಾಯಲ್ಸ್ ತಂಡಕ್ಕೆ ಸೋಲಿಗೆ ಕಾರಣವಾಯ್ತು
ಹಾಗೇ ರಬಾಡ, ಅನ್ರಿಚ್, ತುಷಾರ್ ದೇಶಪಾಂಡೆ ಅವರ ಅದ್ಭುತ ಬೌಲಿಂಗ್ ನಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿತ್ತು.
ದುಬೈ ನಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಆರಂಭಿಕ ಪೃಥ್ವಿ ಶಾ ಡಕೌಟಾದ್ರು.
ಇನ್ನೊಂದೆಡೆ ಅಜ್ಯಂಕ್ಯಾ ರಹಾನೆ ಎರೆಉ ರನ್ ಗಳಿಸಿ ಶ್ರೇಯಸ್ ಗೋಪಾಲ್‍ಗೆ ವಿಕೆಟ್ ಒಪ್ಪಿಸಿದ್ರು. ನಂತರ ತಂಡಕ್ಕೆ ಆಧಾರವಾಗಿದ್ದು ಆರಂಭಿಕ ಶಿಖರ್ ಧವನ್ ಮತ್ತು ನಾಯಕ ಶ್ರೇಯಸ್ ಅಯ್ಯರ್.
ಇವರಿಬ್ಬರು ಮೂರನೇ ವಿಕೆಟ್ ಗೆ 85 ರನ್ ಪೇರಿಸಿದ್ರು. ಈ ಹಂತದಲ್ಲಿ 57 ರನ್ ಗಳಿಸಿದ್ದ ಶಿಖರ್ ಧವನ್ ಪೆವಿಲಿಯನ್ ಸೇರಿಕೊಂಡ್ರು.
ಇನ್ನೊಂದೆಡೆ 53 ರನ್ ದಾಖಲಿಸಿದ್ದ ಶ್ರೇಯಸ್ ಅಯ್ಯರ್ ಕಾರ್ತಿಕ್ ತ್ಯಾಗಿಗೆ ಬಲಿಯಾದ್ರು.
ಇನ್ನುಳಿದಂತೆ ಮಾರ್ಕೊಸ್ ಸ್ಟೋನಿಸ್ 18 ರನ್ ಮತ್ತು ಅಲೆಕ್ಸ್ ಕ್ಯಾರೆ 14 ರನ್ ಗಳಿಸಲಷ್ಟೇ ಶಕ್ತರಾದ್ರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್‍ಗೆ 161 ರನ್ ಗಳಿಸಿತು.
ಸವಾಲನ್ನು ಬೆನ್ನಟ್ಟಿದ್ದ ರಾಜಸ್ತಾನ ರಾಯಲ್ಸ್ ತಂಡ ಅಬ್ಬರದ ಆರಂಭವನ್ನು ಪಡೆದುಕೊಂಡಿತ್ತು.
ಜೋಸ್ ಬಟ್ಲರ್ 9 ಎಸೆತಗಳಲ್ಲಿ 22 ರನ್ ಗಳಿಸಿ ಪೆವಿಲಿಯನ್‍ಗೆ ಹಿಂತಿರುಗಿದ್ರು. ಮತ್ತೊಂದೆಡೆ ನಾಯಕ ಸ್ಟೀವನ್ ಸ್ಮಿತ್ 1 ರನ್ ಗೆ ಸೀಮಿತವಾದ್ರು.
ಬಳಿಕ ಆರಂಭಿಕ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ 46 ರನ್ ಪೇರಿಸಿದ್ರು. ಗೆಲುವಿನ ಲೆಕ್ಕಚಾರದಲ್ಲಿದ್ದ ರಾಜಸ್ತಾನ ರಾಯಲ್ಸ್‍ಗೆ ಕಂಟಕವಾಗಿದ್ದು ತುಷಾರ್ ದೇಶಪಾಂಡೆ.
ಉತ್ತಮ ಲಯದಲ್ಲಿದ್ದ ಬೆನ್ ಸ್ಟೋಕ್ಸ್ 41 ರನ್‍ಗೆ ತನ್ನ ಹೋರಾಟವನ್ನು ಮುಗಿಸಿದ್ರೆ, ಸಂಜು ಸಾಮ್ಸನ್ ಹೋರಾಟ 25 ರನ್ ಗೆ ಅಂತ್ಯಗೊಂಡಿತ್ತು.
ನಂತರ ರಾಬಿನ್ ಉತ್ತಪ್ಪ ತಂಡವನ್ನು ಗೆಲುವಿನ ದಡ ಸೇರಿಸುವ ಸೂಚನೆ ನೀಡಿದ್ರು. ಆದ್ರೆ ರಿಯಾನ್ ಪರಾಗ್ 1 ರನ್ ಗಳಿಸಿ ರನೌಟಾದ್ರು. 32 ರನ್ ಗಳಿಸಿದ್ದ ರಾಬಿನ್ ಉತ್ತಪ್ಪ ಅವರಿಗೆ ಅನ್ರಿಚ್ ಅವರು ಪೆವಿಲಿಯನ್ ದಾರಿ ತೋರಿಸಿದ್ರು.
ಕೊನೆಯ ಐದು ಓವರ್ ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿತ್ತು.
ಹೀಗಾಗಿ ರಾಹುಲ್ ಟೆವಾಟಿಯಾ ಮ್ಯಾಜಿಕ್ ನಡೆಯಲಿಲ್ಲ. ಟೆವಾಟಿಯಾ ಅಜೇಯ 14 ರನ್ ಗಳಿಸಿದ್ರು. ಕೊನೆಗೆ ರಾಜಸ್ತಾನ ರಾಯಲ್ಸ್ ತಂಡ ಎಂಟು ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ 13 ರನ್ ಗಳಿಂದ ಸೋಲು ಅನುಭವಿಸಿತ್ತು.
ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ ಆನ್ರಿಚ್ ನೊರ್ಟೆಜ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.