ಐಪಿಎಲ್ 2020- ಮನೀಷ್ ಪಾಂಡೆ ಬೊಂಬಾಟ್ ಆಟ.. ಎಸ್ ಆರ್ ಎಚ್ಗೆ ಭರ್ಜರಿ ಜಯ
ಐಪಿಎಲ್ ಟೂರ್ನಿಯ 40ನೇ ಪಂದ್ಯ.
ಸನ್ ರೈಸರ್ಸ್ ಹೈದ್ರಬಾದ್ ತಂಡ ಎಂಟು ವಿಕೆಟ್ ಗಳಿಂದ ರಾಜಸ್ತಾನ ರಾಯಲ್ಸ್ ತಂಡವನ್ನು ಪರಾಭವಗೊಳಿಸಿತು.
ಸನ್ ರೈಸರ್ಸ್ ಹೈದ್ರಬಾದ್ ತಂಡದ ಪರ ಮನೀಷ್ ಪಾಂಡೆ ಏಕಾಂಗಿ ಹೋರಾಟ ನಡೆಸಿ ಗೆಲುವಿನ ರೂವಾರಿಯಾದ್ರು.
ದುಬೈ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ರಾಜಸ್ತಾನ ರಾಯಲ್ಸ್ ತಂಡದ ಪರ ರಾಬಿನ್ ಉತ್ತಪ್ಪ ಆರಂಭದಲ್ಲೇ ಅಬ್ಬರಿಸಿದ್ರು.
ಆದ್ರೆ ರಾಬಿನ್ ಉತ್ತಪ್ಪ ಅವರ ಅಬ್ಬರ 19 ರನ್ ಗೆ ಸೀಮಿತವಾಯ್ತು.
ಹಾಗೇ ಸಂಜು ಸಾಮ್ಸನ್ ಅವರ ಹೋರಾಟ ಕೂಡ 36 ರನ್ ಗೆ ಕೊನೆಗೊಂಡಿತ್ತು.
ಮತ್ತೊಂದೆಡೆ ಬೆನ್ ಸ್ಟೋಕ್ಸ್ ಕೂಡ 30 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು.
ನಂತರ ಜೋಸ್ ಬಟ್ಲರ್ 19 ರನ್, ಸ್ಟೀವನ್ ಸ್ಮಿತ್ 9 ರನ್ ಹಾಗೂ ರಿಯಾನ್ ಪರಾಗ್ 20 ರನ್ ಗಳಿಸಿದ್ರು.
ರಾಹುಲ್ ಟೆವಾಟಿಯಾ ಅಜೇಯ 2 ರನ್ ಮತ್ತು ಜೋಫ್ರಾ ಆರ್ಚೆರ್ ಅಜೇಯ 19 ರನ್ ಸಿಡಿಸಿದ್ರು.
ಅಂತಿಮವಾಗಿ ರಾಜಸ್ತಾನ ರಾಯಲ್ಸ್ ತಂಡ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು.
ಸವಾಲನ್ನು ಬೆನ್ನಟ್ಟಿದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡ 16 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು.
ಡೇವಿಡ್ ವಾರ್ನರ್ 4 ರನ್ ಮತ್ತು ಜೋನಿ ಬೇರ್ ಸ್ಟೋ 10 ರನ್ ಗೆ ಸೀಮಿತವಾದ್ರು.
ನಂತರ ದರ್ಬಾರು ನಡೆಸಿದ್ದು ಮನೀಷ್ ಪಾಂಡೆ ಮತ್ತು ವಿಜಯ್ ಶಂಕರ್.
ಇವರಿಬ್ಬರು ಮೂರನೇ ವಿಕೆಟ್ ಗೆ ಅಜೇಯ 140 ರನ್ ಗಳ ಜೊತೆಯಾಟವನ್ನಾಡಿದ್ರು.
ಮನೀಷ್ ಪಾಂಡೆ 47 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎಂಟು ಸಿಕ್ಸರ್ ಗಳ ಸಹಾಯದಿಂದ ಅಜೇಯ 83 ರನ್ ದಾಖಲಿಸಿದ್ರು.
ಮತ್ತೊಂದೆಡೆ ವಿಜಯ ಶಂಕರ್ 51 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದ್ರು.
ಅಂತಿಮವಾಗಿ ಸನ್ ರೈಸರ್ಸ್ ಹೈದ್ರಬಾದ್ ತಂಡ 18.1 ಓವರ್ ಗಳಲ್ಲಿ ಎರಡು ವಿಕೆಟ್ ಗೆ 156 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು.
ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಮನೀಷ್ ಪಾಂಡೆ ಅವರಿಗೆ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದು ಬಂತು.