ಬೆಂಗಳೂರು : ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ 2020 ( IPL2020 ) ಮತ್ತಷ್ಟು ರೋಚಕವಾಗಲಿದೆ. ಇದೇ ಮೊದಲ ಬಾರಿಗೆ ಫುಟ್ಬಾಲ್ ಲೀಗ್ ಗಳಲ್ಲಿದ್ದ ಆಟಗಾರರ ವಿನಿಮಯ ಪದ್ದತಿಯನ್ನು ಕ್ರಿಕೆಟ್ ನಲ್ಲೂ ಪರಿಚಯಿಸಲಾಗಿದೆ. ಅಂದರೆ ಆವೃತ್ತಿಯೊಂದರ ಮಧ್ಯದಲ್ಲಿ ತಂಡಗಳಿಗೆ ಆಟಗಾರರನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ 8 ತಂಡಗಳು ತಲಾ 7 ಲೀಗ್ ಪಂದ್ಯಗಳನ್ನು ಆಡಿದ ಬಳಿಕ ಆಟಗಾರರ ಹಂಚಿಕೆಗೆ ಅವಕಾಶ ಲಭ್ಯವಾಗಲಿದೆ. ಇದರೊಂದಿಗೆ ಟೂರ್ನಿಯ ಮಧ್ಯಂತರದ ಬಳಿಕ ಆಟಗಾರರಿಗೆ ಹೊಸ ಫ್ರಾಂಚೈಸಿಯಲ್ಲಿ ಮಿಂಚುವ ಅವಕಾಶ ಸಿಗಲಿದೆ.

ಆಟಗಾರರ ಹಂಚಿಕೆಗೆ ನಿಯಮಗಳೇನು..?
8 ತಂಡಗಳು ತಲಾ 7 ಲೀಗ್ ಪಂದ್ಯಗಳನ್ನು ಆಡಿದ ಬಳಿಕ ಆಟಗಾರರ ಹಂಚಿಕೆಗೆ ಅವಕಾಶ
7 ಪಂದ್ಯಗಳ ಅಂತ್ಯಕ್ಕೆ 2ಕ್ಕಿಂತಲೂ ಕಡಿಮೆ ಪಂದ್ಯ ಆಡಿರುವ ಆಟಗಾರರು ಮಾತ್ರವೇ ವಿನಿಮಯಕ್ಕೆ ಅರ್ಹರು.
ಇದನ್ನೂ ಓದಿ : ಐಪಿಎಲ್ 2020 – 25ನೇ ಪಂದ್ಯದಲ್ಲಿ ಚೆನ್ನೈ ಮತ್ತು ಬೆಂಗಳೂರು ತಂಡಗಳ ಜಟಾಪಟಿ
ಆಟಗಾರರ ವಿನಿಮಯಕ್ಕೆ ಆರ್ ಸಿಬಿ ( RCB) ಸಿದ್ಧ
ಈ ಮಧ್ಯಂತರ ಆಟಗಾರರ ಹಂಚಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿದ್ಧ ಎಂದು ಹೇಳಿಕೊಂಡಿದೆ. ಪ್ರಮುಖವಾಗಿ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಆರ್ ಸಿಬಿ ಆಟಗಾರರ ವಿನಿಮಯಕ್ಕೆ ಎದುರು ನೋಡುತ್ತಿದೆ.
ಆಟಗಾರರ ವಿನಿಯಮಕ್ಕೆ ಆರ್ ಸಿಬಿಯಲ್ಲಿ ಜಾಶ್ ಫಿಲಿಪ್, ಕ್ರಿಸ್ ಮಾರಿಸ್, ಡೇಲ್ ಸ್ಟೇನ್, ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ, ಆಡಮ್ ಝಾಂಪ, ಗುರುಕೀರತ್ ಸಿಂಗ್ ಮಾನ್, ಮೊಯೀನ್ ಅಲಿ, ಮೊಹಮ್ಮದ್ ಸಿರಾಜ್, ಪಾರ್ಥಿವ್ ಪಟೇಲ್, ಪವನ್ ನೇಗಿ, ಉಮೇಶ್ ಯಾದವ್ ಅರ್ಹರಾಗಿದ್ದಾರೆ.
ಇದನ್ನೂ ಓದಿ : ಐಪಿಎಲ್ 2020 – 24ನೇ ಪಂದ್ಯದಲ್ಲಿ ಕೆಕೆಆರ್ – ಕಿಂಗ್ಸ್ ಇಲೆವೆನ್ ಹಣಾಹಣಿ..!
ಇನ್ನು ಕ್ರಿಸ್ ಗೇಲ್, ಇಮ್ರಾನ್ ತಾಹಿರ್ ಹಾಗೂ ಕ್ರಿಸ್ ಲಿನ್ ಅವರಂತಹ ದೈತ್ಯ ಪ್ರತಿಭೆಗಳು ಐಪಿಎಲ್ 2020 ಟೂರ್ನಿಯಲ್ಲಿ ಇನ್ನೂ ಒಂದು ಪಂದ್ಯವನ್ನು ಆಡಿಲ್ಲ. ಹೀಗಾಗಿ ಈ ಆಟಗಾರರಿಗೆ ಬೇರೆ ತಂಡದಲ್ಲಾದರೂ ಅವಕಾಶ ಸಿಗುವುದೇ ಕಾದು ನೋಡಬೇಕು.








