ಐಪಿಎಲ್ 2020: ಸಂಜು ಸಾಮ್ಸನ್ ಕ್ಯಾಚ್ ಮತ್ತು ಸಚಿನ್ ತೆಂಡುಲ್ಕರ್ ನೆನಪು…2020 ಮತ್ತು 1992 ಸೇಮ್ ಟು ಸೇಮ್ ಕ್ಯಾಚ್..!
ಕೆಕೆಆರ್ ವಿರುದ್ಧ ರಾಜಸ್ತಾನ ರಾಯಲ್ಸ್ ತಂಡದ ಸ್ಟಾರ್ ಬ್ಯಾಟ್ಸ್ ಮೆನ್ ಸಂಜು ಸಾಮನ್ಸ್ ಅವರ ಬ್ಯಾಟ್ ಹೆಚ್ಚು ಸದ್ದು ಮಾಡಲಿಲ್ಲ. ಆದ್ರೆ ಫೀಲ್ಡಿಂಗ್ ಮಾಡುವಾಗ ಅವರು ಹಿಡಿದ ಅದ್ಭುತ ಕ್ಯಾಚ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಸಂಜು ಸಾಮ್ಸನ್ ಅವರು ಸಚಿನ್ ತೆಂಡುಲ್ಕರ್ ಅವರ ಮನಸ್ಸನ್ನು ಗೆದ್ದುಕೊಂಡಿದ್ದಾರೆ.
ಹೌದು, ಕೆಕೆಆರ್ ವಿರುದ್ಧ ಪಂದ್ಯದ 18ನೇ ಓವರ್ ನಲ್ಲಿ ಟಾಮ್ ಕುರನ್ ಎಸೆತದಲ್ಲಿ ಪ್ಯಾಟ್ ಕಮಿನ್ಸ್ ಹೊಡೆದ ಚೆಂಡನ್ನು ಸಂಜು ಸಾಮ್ಸನ್ ಅವರು ಅದ್ಭುತವಾಗಿ ಹಿಡಿದಿದ್ರು. ಈ ಕ್ಯಾಚ್ ಹಿಡಿಯುವಾಗ ಸಂಜು ಸಾಮ್ಸನ್ ತನ್ನ ತಲೆ ಮತ್ತು ಬೆನ್ನಿಗೆ ಕೊಂಚ ಮಟ್ಟಿಗೆ ನೋವು ಕೂಡ ಮಾಡಿಕೊಂಡಿದ್ದರು.
ಅಂದ ಹಾಗೇ ಸಂಜು ಸಾಮ್ಸನ್ ಅವರು ಹಿಡಿದ ಕ್ಯಾಚ್ ಬಗ್ಗೆ ಸಚಿನ್ ತೆಂಡುಲ್ಕರ್ ಕೂಡ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. 1992ರಲ್ಲಿ ಸಚಿನ್ ತೆಂಡುಲ್ಕರ್ ಕೂಡ ಸಂಜು ಸಾಮ್ಸನ್ ಹಿಡಿದ ರೀತಿಯಲ್ಲೇ ಕ್ಯಾಚ್ ಹಿಡಿದಿದ್ದರು. ಕ್ರಿಕೆಟ್ ದೇವ್ರು ತನ್ನ ಟ್ವಿಟರ್ ಖಾತೆಯಲ್ಲಿ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ. ನನಗೆ ಗೊತ್ತಿದೆ ಎಷ್ಟು ನೋವಾ ಆಗಿದೆ ಎಂದು. ನನಗೂ ಇದೇ ರೀತಿಯ ಅನುಭವ ಆಗಿತ್ತು. 1992ರ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇದೇ ರೀತಿಯ ನೋವು ಅನುಭವಿಸಿದ್ದೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.