ADVERTISEMENT
Monday, March 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಸಿಎಸ್ ಕೆ ಗೆಲುವಿನ ಆಸೆಯನ್ನು ಭಗ್ನಗೊಳಿಸಿದ್ದ ಜೋಫ್ರಾ ಆರ್ಚರ್ ನ ಆ ನಾಲ್ಕು ಸಿಕ್ಸರ್ ಗಳು…!

admin by admin
September 23, 2020
in IPL 2020, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಸಿಎಸ್ ಕೆ ಗೆಲುವಿನ ಆಸೆಯನ್ನು ಭಗ್ನಗೊಳಿಸಿದ್ದ ಜೋಫ್ರಾ ಆರ್ಚರ್ ನ ಆ ನಾಲ್ಕು ಸಿಕ್ಸರ್ ಗಳು…!

ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ 16 ರನ್ ಗಳಿಂದ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ ಸೋಲು ಅನುಭವಿಸಿದೆ. ಸಂಜು ಸಾಮ್ಸನ್, ಸ್ಟೀವನ್ ಸ್ಮಿತ್ ಮತ್ತು ಜೋಫ್ರಾ ಆರ್ಚರ್ ಅವರ ಸಿಕ್ಸರ್ ಭರಾಟೆಯ ಮುಂದೆ ಸಿಎಸ್‍ಕೆ ತಂಡದ ಲೆಕ್ಕಚಾರಗಳೆಲ್ಲಾ ಬುಡಮೇಲು ಆಗೋಯ್ತು.
ಟಾಸ್ ಗೆದ್ದು ಮೊದಲು ರಾಜಸ್ತಾನ ರಾಯಲ್ಸ್ ತಂಡವನ್ನು ಸಿಎಸ್‍ಕೆ ತಂಡ ಬ್ಯಾಟಿಂಗ್ ಗೆ ಆಹ್ವಾನ ನೀಡಿತ್ತು. ಆರಂಭದಲ್ಲೇ ರಾಯಲ್ಸ್ ತಂಡ ಆಘಾತ ಅನುಭವಿಸಿತ್ತು. ಯುವ ಆರಂಭಿಕ ಆಟಗಾರ ಜೈಸ್ವಾಲ್ ಅವರು 6 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು.
ನಂತರ ನಾಯಕ ಸ್ಟೀವನ್ ಸ್ಮಿತ್ ಜೊತೆ ಸೇರಿಕೊಂಡ ಸಂಜು ಸಾಮ್ಸನ್ ಅವರು ಎರಡನೇ ವಿಕೆಟ್‍ಗೆ 121ರನ್‍ಗಳನ್ನು ಕಲೆ ಹಾಕಿ ರಾಯಲ್ಸ್ ತಂಡದ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿಕೊಟ್ಟರು. ಆಕ್ರಮಣಕಾರಿ ಆಟವನ್ನಾಡಿದ್ದ ಸಂಜು ಸಾಮ್ಸನ್ ಅವರು 32 ಎಸೆತಗಳಲ್ಲಿ 9 ಸಿಕ್ಸರ್ ಮತ್ತು ಒಂದು ಬೌಂಡರಿಯ ನೆರವಿನಿಂದ ಆಕರ್ಷಕ 74 ರನ್ ಸಿಡಿಸಿ ತನ್ನ ಹೋರಾಟವನ್ನು ಮುಗಿಸಿದ್ರು.
ಇನ್ನೊಂದೆಡೆ ಸ್ಟೀವನ್ ಸ್ಮಿತ್ ಅವರು ನಾಯಕನ ಜವಾಬ್ದಾರಿಯನ್ನು ಅರಿತುಕೊಂಡು ಬ್ಯಾಟ್ ಬೀಸಿ ಅರ್ಧಶತಕ ಕೂಡ ದಾಖಲಿಸಿದ್ರು. ಸಾಮ್ಸನ್ ಅವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಸಿಎಸ್‍ಕೆ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಂಡಿತ್ತು. ಡೇವಿಡ್ ಮಿಲ್ಲರ್ ಶೂನ್ಯ ಸುತ್ತಿದ್ರೆ, ರಾಬಿನ್ ಉತ್ತಪ್ಪ ಐದು ರನ್ ಗೆ ಸೀಮಿತವಾದ್ರು. ಹಾಗೇ ರಾಹುಲ್ ಟೆವಾಟಿಯಾ 10 ರನ್, ರಿಯಾನ್ ಪರಾಗ್ 6 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿದ್ರು.
ಇನ್ನೊಂದೆಡೆ ಸಿಎಸ್‍ಕೆ ಬೌಲರ್ ಗಳಿಗೆ ಸವಾಲಾಗಿ ನಿಂತಿದ್ದ ಸ್ಟೀವನ್ ಸ್ಮಿತ್ 47 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ ಮನಮೋಹಕ 69 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡ್ರು.
ಆಗ ಸಿಎಸ್‍ಕೆ ತಂಡದ ಮೊತ್ತ 18.2 ಓವರ್ ಗಳಲ್ಲಿ 7 ವಿಕೆಟ್‍ಗೆ 178 ರನ್ ಆಗಿತ್ತು. ಈ ಹಂತದಲ್ಲಿ ಸಿಎಸ್‍ಕೆ ತಂಡವನ್ನು ಚಡಪಡಿಸುವಂತೆ ಮಾಡಿದ್ದು ಜೋಫ್ರಾ ಆರ್ಚರ್. ಲುಂಗಿ ಎನ್‍ಗಿಡಿ ಅವರನ್ನು ಗಲಿಬಿಲಿಗೊಳಿಸಿದ್ದ ಜೋಫ್ರಾ ಆರ್ಚರ್ ಅವರು ಸತತ ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿ ಪಂದ್ಯದ ಗತಿಯನ್ನೇ ಬದಲಾಯಿಸಿಬಿಟ್ಟರು. ಎಂಟು ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿದ್ದ ಜೋಫ್ರಾ ಆರ್ಚರ್ ಅವರು ಸಿಎಸ್‍ಕೆ ತಂಡದ ಕೈಯಿಂದ ಗೆಲುವನ್ನು ಕಸಿದುಕೊಂಡಿದ್ದರು. ಅಂತಿಮವಾಗಿ ರಾಜಸ್ತಾನ ರಾಯಲ್ಸ್ ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತ್ತು. ಸ್ಯಾಮ್ ಕುರನ್ ಅಜೇಯ 10 ರನ್ ಗಳಿಸಿದ್ರು.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಸಿಎಸ್‍ಕೆ ತಂಡ ಕೂಡ ದಿಟ್ಟ ಹೋರಾಟವನ್ನೇ ನೀಡಿತ್ತು. ಆರಂಭಿಕರಾದ ಮುರಳಿ ವಿಜಯ್ (21) ಮತ್ತು ಶೇನ್ ವಾಟ್ಸನ್ (33) ಉತ್ತಮ ಆರಂಭವನ್ನೇ ನೀಡಿದ್ರು. ಆದ್ರೆ ಶೇನ್ ವಾಟ್ಸನ್ ಅವರನ್ನು ರಾಹುಲ್ ಟೆವಾಟಿಯಾ ಬಲಿ ಪಡೆದುಕೊಂಡ್ರೆ, ಮುರಳಿ ವಿಜಯ್ ಟಾಮ್ ಕುರನ್‍ಗೆ ವಿಕೆಟ್ ಒಪ್ಪಿಸಿದ್ರು.
ಬಳಿಕ ಡು ಪ್ಲೇಸಸ್ ಅವರು ಆಕ್ರಮಣಕಾರಿ ಆಟವನ್ನಾಡಿ ರಾಯಲ್ಸ್ ಬೌಲರ್ ಗಳಿಗೆ ತಲೆನೋವಾಗಿ ಪರಿಣಮಿಸಿದ್ರು. ಇನ್ನೊಂದೆಡೆ ಸ್ಯಾಮ್ ಕುರನ್ 17 ರನ್ ಗೆ ಔಟಾದ್ರೆ, ಂiರುತುರಾಜ್ ಗಾಯಕ್ವಾಡ್ ಶೂನ್ಯ ಸುತ್ತಿದ್ರು. ಬಳಿಕ ಕೇದಾರ್ ಜಾಧವ್ ಡುಪ್ಲೇಸಸ್ ಸಾಥ್ ನೀಡಿದ್ರೂ 22 ರನ್‍ಗೆ ಸೀಮಿತವಾದ್ರು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಧೋನಿ ಕೊನೆಯ ತನಕ ಗೆಲುವಿಗಾಗಿ ಹೋರಾಟ ನಡೆಸಿದ್ರೂ ಪ್ರಯೋಜನವಾಗಲಿಲ್ಲ. ಡುಪ್ಲೇಸಸ್ ಅವರು 37 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಏಳು ಸಿಕ್ಸರ್ ಗಳ ನೆರವಿನಿಂದ 72 ರನ್ ಗಳಿಸಿದ್ರು.
ಕೊನೆಯ ಓವರ್ ನಲ್ಲಿ ಸಿಎಸ್‍ಕೆ ತಂಡಕ್ಕೆ ಗೆಲ್ಲಲು ಅಸಾಧ್ಯವಾದ 38 ರನ್‍ಗಳು ಬೇಕಿದ್ದವು. ಆದ್ರೂ ಧೋನಿ ಕ್ರೀಸ್ ನಲ್ಲಿ ಇರುವುದರಿಂದ ಸಿಎಸ್‍ಕೆ ಅಭಿಮಾನಿಗಳಿಗೆ ಗೆಲ್ಲುವ ದುರಾಸೆ ಇತ್ತು. ಮೊದಲ ಎರಡು ಎಸೆತಗಳಲ್ಲಿ ತಲಾ ಒಂದು ರನ್ ಗಳು ಬಂದವು. ಆದ್ರೆ ಮೂರು, ನಾಲ್ಕು, ಐದನೇ ಎಸೆತಗಳಲ್ಲಿ ಧೋನಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ್ರು. ಅಂತಿಮವಾಗಿ ಸಿಎಸ್‍ಕೆ ತಂಡ ಆರು ವಿಕೆಟ್‍ಗೆ 200 ರನ್ ಗಳಿಸಿ 16 ರನ್ ಗಳಿಂದ ಸೋಲು ಒಪ್ಪಿಕೊಂಡಿತ್ತು. ಧೋನಿ ಅಜೇಯ 29 ರನ್ ಗಳಿಸಿದ್ರು. ರಾಯಲ್ಸ್ ಪರ ರಾಹುಲ್ ಟೆವಾಟಿಯಾ 37ಕ್ಕೆ ಮೂರು ವಿಕೆಟ್‍ಗಳನ್ನು ಉರುಳಿಸಿದ್ರು. ಆಕ್ರಮಣಕಾರಿ ಆಟವನ್ನಾಡಿದ್ದ ಸಂಜು ಸಾಮ್ಸನ್ ಅವರು ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.

Related posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

March 30, 2026
ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

March 30, 2026
Tags: #mahendra singh dhini#Sanju Samsonchennai super kingsIPLIPL 2020Jofra Archerrajasthan royalsSteven Smithuae ipl 2020
ShareTweetSendShare
Join us on:

Related Posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

by Shwetha
March 30, 2026
0

ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

by Shwetha
March 30, 2026
0

ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಸಂಪೂರ್ಣವಾಗಿ ಚುನಾವಣಾ ಮೂಡ್‌ಗೆ ಜಾರಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ...

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

by Shwetha
March 30, 2026
0

ಮುಂಬರುವ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು...

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

by Shwetha
March 30, 2026
0

ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪಿಎಸ್ಐಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯುವಜನತೆಗೆ ಹಾಗೂ ಪೊಲೀಸ್ ಇಲಾಖೆಗೆ ಭರ್ಜರಿ ಸಿಹಿಸುದ್ದಿ...

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

by Shwetha
March 30, 2026
0

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರುವುದು ಸಾಮಾನ್ಯ. ಗ್ಯಾಸ್ ಖಾಲಿಯಾದರೆ ಊಟಕ್ಕೆ ಪರದಾಡಬೇಕು ಎಂಬ ಭಯದಿಂದ ಅನೇಕರು ಮೂರ್ನಾಲ್ಕು ಸಿಲಿಂಡರ್ ಗಳನ್ನು ಅಡ್ವಾನ್ಸ್ ಆಗಿ ಬುಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram