ಐಪಿಎಲ್ 2020 ಧೋನಿಯ ಏಳು ಅಸ್ತ್ರಕ್ಕೆ ತಲೆಬಾಗಿದ ಎಸ್ ಆರ್ ಎಚ್
ಐಪಿಎಲ್ 2020ರ 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೇಮ್ ಪ್ಲಾನ್ ವರ್ಕೌಟ್ ಆಗಿದೆ.
ಸತತ ಸೋಲಿನಿಂದ ಕಂಗೆಟ್ಟಿದ್ದ ಸಿಎಸ್ ಕೆ ತಂಡ ಮತ್ತೆ ಗೆಲುವಿನ ಟ್ರ್ಯಾಕ್ ಗೆ ಮರಳಿದೆ.
ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು 20 ರನ್ ಗಳಿಂದ ಮಣಿಸಿದ ಸಿಎಸ್ ಕೆ ಮೂರನೇ ಜಯ ದಾಖಲಿಸಿದೆ.
ದುಬೈ ನಲ್ಲಿ ಟಾಸ್ ಗೆದ್ದ ಸಿಎಸ್ ಕೆ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕನಾಗಿ ಕಣಕ್ಕಿಳಿದ ಸ್ಯಾಮ್ ಕುರನ್ 31 ರನ್ ಗಳಿಸಿದ್ರೆ, ಫಾಫ್ ಡುಪ್ಲೇಸಸ್ ಡಕೌಟಾದ್ರು.
ಬಳಿಕ ಶೇನ್ ವಾಟ್ಸನ್ ಮತ್ತು ಅಂಬಟಿ ರಾಯುಡು ಮೂರನೇ ವಿಕೆಟ್‍ಗೆ 81 ರನ್ ಪೇರಿಸಿದ್ರು.
ಈ ಹಂತದಲ್ಲಿ ಅಂಬಟಿ ರಾಯುಡು 41 ರನ್ ಗಳಿಸಿ ಪೆವಿಲಿಯನ್ ಗೆ ಹಿಂತಿರುಗಿದ್ರು. ಹಾಗೇ ಶೇನ್ ವಾಟ್ಸನ್ ಕೂಡ 42 ರನ್ ಗಳಿಸಿ ನಟರಾಜನ್ ಗೆ ವಿಕೆಟ್ ಒಪ್ಪಿಸಿದ್ರು.
ನಂತರ ಮಹೇಂದ್ರ ಸಿಂಗ್ 21 ರನ್ ಗಳಿಸಿದ್ರೆ, ರವೀಂದ್ರ ಜಡೇಜಾ ಅಜೇಯ 25 ರನ್ ಸಿಡಿಸಿದ್ರು. ಡ್ವೇನ್ ಬ್ರೇವೋ ಡಕೌಟಾದ್ರು. ಅಂತಿಮವಾಗಿ ಸಿಎಸ್ ಕೆ ತಂಡ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.
ಸವಾಲನ್ನು ಬೆನ್ನಟ್ಟಿದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡ ಆಘಾತದ ಮೇಲೆ ಆಘಾತ ಅನುಭವಿಸಿತ್ತು. ಧೋನಿಯ ಗೇಮ್ ಪ್ಲಾನ್ ಗೆ ಎಸ್ ಆರ್ ಎಚ್ ತಬ್ಬಿಬ್ಬುಗೊಂಡಿತ್ತು.
ಏಳು ಬೌಲರ್ ಗಳ ಮೂಲಕ ಎಸ್ ಆರ್ ಎಚ್ ತಂಡದ ರನ್ ಗತಿಗೆ ಕಡಿವಾಣ ಹಾಕಲು ಯಶಸ್ವಿಯಾದ್ರು.
ನಾಯಕ ಡೇವಿಡ್ ವಾರ್ನರ್ 9 ರನ್ ಗೆ ಹೋರಾಟ ಮುಗಿಸಿದ್ರು,
ಮನೀಷ್ ಪಾಂಡೆ 4 ರನ್ ಗಳಿಸಿ ರನೌಟಾದ್ರು. ಇನ್ನೊಂದೆಡೆ ಜೋನಿ ಬೇರ್ ಸ್ಟೋ 23 ಅವರನ್ನು ರವೀಂದ್ರ ಜಡೇಜಾ ಬೌಲ್ಡಾದ್ರು.
ನಂತರ ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ ನಡೆಸಿದ್ರು. ಆದ್ರೆ ಪ್ರಿಯಮ್ ಗರ್ಗ್ (16) ವಿಜಯ್ ಶಂಕರ್ (12) ನಿರಾಸೆ ಮೂಡಿಸಿದ್ರು.
ಕೇನ್ ವಿಲಿಯಮ್ಸನ್ ಆಕರ್ಷಕ 57 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಇನ್ನುಳಿದಂತೆ ರಶೀದ್ ಖಾನ್ 14 ರನ್, ಶಹಬಾಝ್ ಖಾನ್ 5 ರನ್, ಸಂದೀಪ್ ಶರ್ಮಾ ಅಜೇಯ 1 ರನ್ ಗಳಿಸಿದ್ರು.
ಕೊನೆಗೆ ಎಸ್ ಆರ್ ಎಚ್ ತಂಡ 8 ವಿಕೆಟ್ ಕಳೆದುಕೊಂಡು 147 ರನ್ ಗಳಿಸಲಷ್ಟೇ ಶಕ್ತವಾಯ್ತು.
ಆಲ್ ರೌಂಡ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.








