ADVERTISEMENT
Thursday, February 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಪ್ತ ಗೆಳೆಯ ರಕ್ಷಕನಾಗಲಿಲ್ಲ… ಹೀಗಾಗಿ ಸಿಎಸ್‍ಕೆ ಮನೆಯಿಂದ ಹೊರಬಂದ ಸುರೇಶ್ ರೈನಾ

admin by admin
August 31, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಆಪ್ತ ಗೆಳೆಯ ರಕ್ಷಕನಾಗಲಿಲ್ಲ… ಹೀಗಾಗಿ ಸಿಎಸ್‍ಕೆ ಮನೆಯಿಂದ ಹೊರಬಂದ ಸುರೇಶ್ ರೈನಾ

ಚೆನ್ನೈ ಸೂಪರ್ ಕಿಂಗ್ಸ್… ಅಂದ ತಕ್ಷಣವೇ ನೆನಪಾಗೋದು ನಾಯಕ ಮಹೇಂದ್ರ ಸಿಂಗ್ ಧೋನಿ… ಆ ನಂತರ ಸುರೇಶ್ ರೈನಾ… ತಲೈವಾ.. ಚಿನ್ನ ತಲೈವಾ ಅಂತನೇ ಸಿಎಸ್‍ಕೆ ಅಭಿಮಾನಿಗಳ ಬಾಯಲ್ಲಿ ನಲಿದಾಡುತ್ತಿದ್ದ ಪದಗಳು. ಅಷ್ಟೊಂದು ಗೌರವ, ಹೆಮ್ಮೆ ಮತ್ತು ಪ್ರೀತಿಯನ್ನಿಟ್ಟುಕೊಂಡಿದ್ದರು.
ಹೌದು, ಐಪಿಎಲ್ ನಲ್ಲಿ ಅತ್ಯಂತ ಬಲಿಷ್ಠ ತಂಡ ಸಿಎಸ್‍ಕೆ.. ಅಷ್ಟೇ ಅಲ್ಲ, ಒಗ್ಗಟ್ಟಿನ ತಂಡ.. ಆಟಗಾರರ ನಡುವಿನ ಬಾಂಧವ್ಯ ಅಷ್ಟೊಂದು ಗಟ್ಟಿಯಾಗಿತ್ತು. ಆದ್ರೆ ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಲ್ಲವೂ ಅಂದುಕೊಂಡಂತೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಸಿಎಸ್‍ಕೆಯ ಇಡೀ ತಂಡವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಧೋನಿ ಪ್ರಭಾವ ಕೂಡ ಕಮ್ಮಿಯಾಗಿದೆಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ.
ಇದಕ್ಕೆ ಕಾರಣ… ಸುರೇಶ್ ರೈನಾ ಅವರ ಆ ಒಂದು ನಿರ್ಧಾರ… ಮೇಲ್ನೋಟಕ್ಕೆ ಸುರೇಶ್ ರೈನಾ ವೈಯಕ್ತಿಕ ಕಾರಣದಿಂದಾಗಿ ಐಪಿಎಲ್ ಟೂರ್ನಿಯಿಂದ ಹೊರನಡೆದಿದ್ದಾರೆ. ರೈನಾ ಅವರ ಸೋದರತ್ತೆಯ ಕುಟುಂಬದ ಮೇಲೆ ಅನಾಮಿಕರು ದಾಳಿ ನಡೆಸಿದ್ದಲ್ಲದೆ, ಅವರ ಮಾವನನ್ನು ಕೊಂದು ಹಾಕಿದ್ದಾರೆ. ರೈನಾ ಅತ್ತೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ರೈನಾ ಮಾನಸಿಕವಾಗಿ ಖಿನ್ನರಾಗಿ ಸಿಎಸ್‍ಕೆ ತಂಡದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಆದ್ರೆ ಸಿಎಸ್‍ಕೆ ತಂಡದಿಂದ ಮತ್ತೊಂದು ಸುದ್ದಿ ಹೊರಬರುತ್ತಿದೆ. ಮೊದಲೇ ಸಿಎಸ್‍ಕೆ ಪಾಳೆಯದಲ್ಲಿ ಕೋವಿಡ್ -19 ಆತಂಕ ಮನೆ ಮಾಡಿದೆ. ಈಗಾಗಲೇ ಸಿಎಸ್‍ಕೆಯ ಇಬ್ಬರು ಆಟಗಾರರು ಹಾಗೂ 11 ಸಿಬ್ಬಂದಿಗಳು ಸೇರಿದಂತೆ ಒಟ್ಟು 13 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಮತ್ತೊಂದೆಡೆ ಸುರೇಶ್ ರೈನಾ ಅವರು ಅನಿರೀಕ್ಷಿತವಾಗಿ ತಂಡದಿಂದ ಹೊರ ನಡೆದಿದ್ದಾರೆ.
ವೈಯಕ್ತಿಕ ಆಘಾತ ಒಂದು ಕಡೆಯಾದ್ರೆ, ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ಅವರಿಗೆ ದುಬೈನಲ್ಲಿ ಸರಿಯಾದ ಹೊಟೇಲ್ ರೂಮ್ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಸುರೇಶ್ ರೈನಾ ಇರುವ ಕೊಠಡಿಯಲ್ಲಿ ಬಾಲ್ಕನಿ ವ್ಯವಸ್ಥೆ ಇಲ್ಲ. ಸುರೇಶ್ ರೈನಾ ಧೋನಿಗೆ ನೀಡಿರುವ ಕೊಠಡಿಯಂತೆ ತನಗೂ ನೀಡಬೇಕು ಎಂದು ಕೇಳಿದ್ದರು. ಇದಕ್ಕೆ ಸಿಎಸ್‍ಕೆ ಮ್ಯಾನೇಜ್‍ಮೆಂಟ್ ಒಪ್ಪಿಲ್ಲ. ಧೋನಿ ಕೂಡ ಇಲ್ಲಿ ರೈನಾ ಪರ ಬ್ಯಾಟಿಂಗ್ ಮಾಡಲು ವಿಫಲರಾದ್ರು. ಹೀಗಾಗಿ ರೈನಾ ಸಿಟ್ಟು ಮಾಡಿಕೊಂಡು ಟೂರ್ನಿಯಿಂದ ಹೊರನಡೆದಿದ್ದಾರೆ ಅಂತನೂ ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಸ್‍ಕೆ ತಂಡದ ಮಾಲೀಕ ಎನ್. ಶ್ರೀನಿವಾಸನ್ ಅವರು ರೈನಾ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುರೇಶ್ ರೈನಾ ನಂಬಿಕೆಗೆ ಅರ್ಹನಾದವರಲ್ಲ ಎಂಬ ಧಾಟಿಯಲ್ಲಿ ಪ್ರೀಮಾ ದೊನ್ನಾ ಅಂತ ಹೇಳಿದ್ದಾರೆ. ಸಿಎಸ್‍ಕೆ ತಂಡ ಒಂದು ಕುಟುಂಬವಿದ್ದಂತೆ. ಎಲ್ಲಾ ಹಿರಿಯ ಆಟಗಾರರು ಸಹಬಾಳ್ವೆಯನ್ನು ಕಲಿತಿದ್ದಾರೆ. ಹಾಗಂತ ನಿಮಗೆ ಇಷ್ಟವಿಲ್ಲ.. ಅಸಮಾಧಾನವಿದೆ ಎಂಬುದಾದ್ರೆ ಹೋಗಿ.. ನಾನು ಯಾರನ್ನು ಒತ್ತಾಯ ಮಾಡುವುದಿಲ್ಲ. ಕೆಲವೊಂದು ಬಾರಿ ಯಶಸ್ಸು ತಲೆ ಸುತ್ತುವಂತೆ ಮಾಡುತ್ತೆ ಎಂದು ಶ್ರೀನಿವಾಸನ್ ರೈನಾ ವಿರುದ್ಧ ಕಿಡಿ ಕಾರಿದ್ದಾರೆ.
ಸುರೇಶ್ ರೈನಾ ತಂಡದಿಂದ ಹೊರನಡೆದಿರುವುದರಿಂದ ಯುವ ಆಟಗಾರ ರುತುರಾಜ್ ಗಾಯಕ್ವಡ್‍ನಂತಹ ಯುವ ಆಟಗಾರರಿಗೆ ಅವಕಾಶ ಸಿಗಬಹುದು. ರುತುರಾಜ್ ಅದ್ಭುತ ಆಟಗಾರ. ಬಹುಶಃ ಈ ಟೂರ್ನಿಯಲ್ಲಿ ಆತ ಸ್ಟಾರ್ ಆಟಗಾರನಾಗಬಹುದು. ಯಾರಿಗೂ ಗೊತ್ತು.. ನನಗೆ ಅದ್ಭುತವಾದ ನಾಯಕನಿದ್ದಾನೆ. ಧೋನಿ ಏನು ಬೇಕಾದ್ರೂ ಮಾಡಬಹುದು. ತಂಡದ ಆಟಗಾರರಿಗೆ ಆತ್ಮವಿಶ್ವಾಸವನ್ನು ತುಂಬುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ, ಸುರೇಶ್ ರೈನಾಗೆ ಸ್ವಲ್ಪ ಮೃದು ಧೋರಣೆ ವ್ಯಕ್ತಪಡಿಸಿರುವ ಶ್ರೀನಿವಾಸನ್, ಟೂರ್ನಿ ಇನ್ನೂ ಆರಂಭವಾಗಿಲ್ಲ. ರೈನಾ ಮತ್ತೆ ತಂಡವನ್ನು ಸೇರಿಕೊಳ್ಳಬಹುದು. ಸಿಎಸ್‍ಕೆ ತಂಡದಲ್ಲಿ ರೈನಾಗೆ ಬಾಗಿಲು ತೆರೆದಿರುತ್ತದೆ. ಒಂದು ವೇಳೆ ಬರಲಿಲ್ಲ ಅಂದ್ರೆ ಅವರಿಗೆ ನಷ್ಟವಾಗುವುದು. ಒಂದು ಐಪಿಎಲ್ ಟೂರ್ನಿಗೆ ರೈನಾ 11 ಕೋಟಿ ರೂಪಾಯಿ ಸಂಭಾವಣೆ ಪಡೆದುಕೊಳ್ಳುತ್ತಾರೆ. ಅವರು ಬಂದಿಲ್ಲ ಅಂದ್ರೆ ಅವರು ಹಣವನ್ನು ಕಳೆದುಕೊಳ್ಳಲಿದ್ದಾರೆ ಎಂದು ಶ್ರೀನಿವಾಸನ್ ಹೇಳಿದ್ದಾರೆ.

Related posts

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

February 19, 2026
ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

February 19, 2026
Tags: # Narayanswami Srinivasan#csk Captain#csk Captain Mahendra Singh Dhoni#s - Minister Dr.K.SudhakarCoronaCOVID-19IPLIPL 2020Mahendra Singh DhoniSuresh Rainauae ipl 2020
ShareTweetSendShare
Join us on:

Related Posts

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

by Shwetha
February 19, 2026
0

ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮಾರ್ಚ್ 16ರಂದು ಮತದಾನ ನಡೆಯಲಿದೆ. ಒಟ್ಟು 10 ರಾಜ್ಯಗಳ 37 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ...

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

by Shwetha
February 19, 2026
0

ರಾಜ್ಯದ ರೈತ ಸಮುದಾಯಕ್ಕೆ ಇಲ್ಲಿದೆ ಒಂದು ಸಂತಸದ ಸುದ್ದಿ. ಜಮೀನುಗಳಿಗೆ ಹೋಗಲು ದಾರಿ ಇಲ್ಲದೆ ಪರದಾಡುತ್ತಿದ್ದ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಐತಿಹಾಸಿಕ ಮತ್ತು ಮಹತ್ವದ...

ಬಂಗಾರದ ಬೆಲೆ ಅರ್ಧಕ್ಕರ್ಧ ಇಳಿಕೆಯಾಗುವ ಸಾಧ್ಯತೆ ಹೂಡಿಕೆದಾರರಿಗೆ ತಜ್ಞರು ನೀಡಿದ ಮಹತ್ವದ ಸಲಹೆ ಏನು ಗೊತ್ತಾ?

ಬಂಗಾರದ ಬೆಲೆ ಅರ್ಧಕ್ಕರ್ಧ ಇಳಿಕೆಯಾಗುವ ಸಾಧ್ಯತೆ ಹೂಡಿಕೆದಾರರಿಗೆ ತಜ್ಞರು ನೀಡಿದ ಮಹತ್ವದ ಸಲಹೆ ಏನು ಗೊತ್ತಾ?

by Shwetha
February 19, 2026
0

ಬಂಗಾರ ಎಂದರೆ ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ. ಶುಭ ಸಮಾರಂಭಗಳಿಗೆ, ಮದುವೆ ಮುಂಜಿಗಳಿಗೆ ಚಿನ್ನದ ಆಭರಣ ಕೊಳ್ಳುವುದು ಒಂದು ಸಂಪ್ರದಾಯವಾದರೆ, ಕಷ್ಟಕಾಲಕ್ಕೆ ಆಗಲಿ ಎಂದು ಹಳದಿ ಲೋಹದ ಮೇಲೆ...

ಮಾ.5ರಂದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ… ಬಾಕಿ ಬಿಲ್ ಬಿಡುಗಡೆಗೆ ಆಗ್ರಹ

ಮಾ.5ರಂದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ… ಬಾಕಿ ಬಿಲ್ ಬಿಡುಗಡೆಗೆ ಆಗ್ರಹ

by Shwetha
February 19, 2026
0

ರಾಜ್ಯ ಗುತ್ತಿಗೆದಾರರ ಸಂಘವು ಬಾಕಿ ಬಿಲ್‌ಗಳ ಬಿಡುಗಡೆಗೆ ಆಗ್ರಹಿಸಿ ಮಾರ್ಚ್ 5ರಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಕುರಿತು ಸಂಘದ ಅಧ್ಯಕ್ಷ ಆರ್. ಮಂಜುನಾಥ್...

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆಯಬೇಕಿತ್ತು: ಪಾಕ್ ಹಾಕಿ ತಂಡದ ನಾಯಕ ಗಂಭೀರ ಆರೋಪ

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆಯಬೇಕಿತ್ತು: ಪಾಕ್ ಹಾಕಿ ತಂಡದ ನಾಯಕ ಗಂಭೀರ ಆರೋಪ

by Shwetha
February 19, 2026
0

ಆಸ್ಟ್ರೇಲಿಯಾ ಪ್ರವಾಸದಿಂದ ಹಿಂದಿರುಗಿದ ಬಳಿಕ ಪಾಕಿಸ್ತಾನ ಹಾಕಿ ತಂಡದ ನಾಯಕ ಶಕೀಲ್ ಅಹ್ಮದ್ ಪಾಕಿಸ್ತಾನ ಹಾಕಿ ಫೆಡರೇಶನ್ (PHF) ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ತಂಡದ ನಿರ್ವಹಣೆಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram