ರಾಯಲ್ಸ್ ತಂಡದ ಈ ಆಟಗಾರ ಚಾಂಪಿಯನ್… ಆದ್ರೂ ಟೀಮ್ ಇಂಡಿಯಾದಲ್ಲಿ ಯಾಕೆ ಆಡಿಲ್ಲ..?
ಸ್ಪಿನ್ ಡಾಕ್ಟರ್, ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ ಈ ಆಟಗಾರನ ಆಟವನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜಸ್ತಾನ ರಾಯಲ್ಸ್ ತಂಡದ ಮೆಂಟರ್ ಆಗಿರುವ ಶೇನ್ ವಾರ್ನ್, ಈ ಆಟಗಾರ ಇನ್ನೂ ಕೂಡ ಟೀಮ್ ಇಂಡಿಯಾದಲ್ಲಿ ಯಾಕೆ ಆಡಿಲ್ಲ ಅಂತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಹೌದು, ರಾಜಸ್ತಾನ ರಾಯಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಸಂಜು ಸಾಮ್ಸನ್ ಆಟವನ್ನು ನೋಡಿ ಶೇನ್ ವಾರ್ನ್ ಬೆರಗುಗೊಂಡಿದ್ದಾರೆ. ಸಂಜು ಸಾಮ್ಸನ್ ಅದ್ಭುತ ಆಟಗಾರ. ಆತ ಚಾಂಪಿಯನ್ ಆಟಗಾರ. ನಾನು ಆತನನ್ನು ತುಂಬಾ ವರ್ಷದಿಂದ ನೋಡುತ್ತಿದ್ದೇನೆ. ಆತ ಚಕಿತಗೊಳಿಸುವಂತ ಬ್ಯಾಟ್ಸ್ ಮೆನ್. ಆದ್ರೆ ಸಂಜು ಸಾಮ್ಸನ್ ಗೆ ಇನ್ನೂ ಯಾಕೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ ಎಂಬುದರ ಬಗ್ಗೆ ವಾರ್ನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಂಜು ಸಾಮ್ಸನ್ ಅವರ ಬ್ಯಾಟಿಂಗ್ ನಲ್ಲಿ ಕ್ಲಾಸ್ ಆಟವನ್ನು ನೋಡಬಹುದು. ಮಾಸ್ ಆಟವನ್ನು ನೋಡಬಹುದು. ಸಂಜು ಸಾಮ್ಸನ್ ಚಾಂಪಿಯನ್ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ಸಂಜು ಈ ಬಾರಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ರೆ, ರಾಜಸ್ತಾನ ರಾಯಲ್ಸ್ ತಂಡ ಐಪಿಎಲ್ ಪ್ರಶಸ್ತಿ ಗೆಲ್ಲಬಹುದು. ಅಲ್ಲದೆ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಸಂಜು ಭಾರತದ ತಂಡದ ಜೆರ್ಸಿಯನ್ನು ತೊಡಬಹುದು ಎಂದು ಶೇನ್ ವಾರ್ನ್ ಭವಿಷ್ಯ ನುಡಿದಿದ್ದಾರೆ.
ಇನ್ನೊಂದೆಡೆ ಕೆ.ಎಲ್. ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಹಾಗೇ ರಿಷಬ್ ಪಂತ್ ಕೂಡ ಪೈಪೋಟಿಯಲ್ಲಿದ್ದಾರೆ. ಐಪಿಎಲ್ ನಲ್ಲಿ ರಿಷಬ್ ಪಂತ್ ಕೂಡ ಉತ್ತಮ ನಿರ್ವಹಣೆಯನ್ನು ನೀಡುತ್ತಿದ್ದಾರೆ. ಇದ್ರಿಂದ ಸಂಜು ಸಾಮ್ಸನ್ ಗೆ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಸಿಗುತ್ತಾ ಅನ್ನೋದನ್ನು ಈಗಲೇ ಹೇಳೋಕೆ ಆಗಲ್ಲ.