ಏಳು ಸಿಕ್ಸರ್ ನ ಕಥೆ.. ವಿಲನ್ ಆಗಿದ್ದ ರಾಹುಲ್ ಟೆವಾಟಿಯಾ ಹೀರೋ ಆಗಿದ್ದು ಹೀಗೆ..!
ಒಂದು ಹಂತದಲ್ಲಿ ಆತ ವಿಲನ್ ಆಗಿದ್ದ… ಆದ್ರೆ ಸಡನ್ ಆಗಿ ಎಲ್ಲವೂ ಚೇಂಜ್ ಆಗೋಯ್ತು…ವಿಲನ್ ಆಗಿದ್ದವನೇ ಹೀರೋ ಆಗಿಬಿಟ್ಟ… ನಾಣ್ಯದ ಎರಡು ಮುಖಗಳಿದ್ದಂಗೆ ಯಾವಾಗ ಏನೂ ಬೇಕಾದ್ರೂ ಆಗಬಹುದು..!
ಹೌದು, ರಾಜಸ್ತಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ರೋಚಕತೆ, ಅಬ್ಬರ, ಕುತೂಹಲ.. ಅಬ್ಬಾ ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು.
ಒಂದು ಹಂತದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲ್ಲುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದ್ರೆ ರಾಹುಲ್ ಟೆವಾಟಿಯಾ ಅನ್ನೋ ಎಡಗೈ ಬ್ಯಾಟ್ಸ್ ಮೆನ್ ಎಲ್ಲವನ್ನೂ ಉಲ್ಟಪಲ್ಟಾ ಮಾಡಿಬಿಟ್ರು. ಯಾಕಂದ್ರೆ ರಾಹುಲ್ ಟೆವಾಟಿಯಾ ಆರಂಭದಲ್ಲಿ ರನ್ ಗಳಿಸಲು ಒದ್ದಾಟ ನಡೆಸುತ್ತಿದ್ದರು. 19 ಎಸೆತಗಳಲ್ಲಿ 9 ರನ್ ಗಳಿಸಿ ಕ್ರಿಸ್ ನಲ್ಲಿ ಪರದಾಡುತ್ತಿದ್ದರು.
ಆದ್ರೆ ಶೆಲ್ಡನ್ ಕಾಟ್ರೆಲ್ ಅವರ ಒಂದು ಓವರ್ ನಲ್ಲಿ ಐದು ಸಿಕ್ಸರ್ ಹಾಗೂ ಮಹಮ್ಮದ್ ಸಮಿ ಅವರಿಗೆ ಎರಡು ಸಿಕ್ಸರ್ ಸೇರಿದಂತೆ ಒಟ್ಟು ಏಳು ಸಿಕ್ಸರ್ ಗಳನ್ನು ಸಿಡಿಸಿ ಕಿಂಗ್ಸ್ ಕೈಯಿಂದ ಪಂದ್ಯವನ್ನು ರಾಯಲ್ಸ್ ಕೈಸೇರುವಂತೆ ಮಾಡಿದ್ದರು ರಾಹುಲ್ ಟೆವಾಟಿಯಾ.
ಇನ್ನು ಕೊನೆಯ 12 ಎಸೆತಗಳಲ್ಲಿ ರಾಹುಲ್ ಟೆವಾಟಿಯಾ 45 ರನ್ ಗಳಿಸಿದ್ದರು. ಇದ್ರಲ್ಲಿ ಏಳು ಸಿಕ್ಸರ್ ಗಳಿದ್ದವು. 10 ನಿಮಿಷಗಳ ನಾಟಕೀಯ ತಿರುವು, ಎರಡು ಓವರ್ ಗಳಲ್ಲಿ ದಾಖಲಾದ 9 ಸಿಕ್ಸರ್ ಹಾಗು ಒಂದು ಬೌಂಡರಿಯಿಂದ ರಾಜಸ್ತಾನ ರಾಯಲ್ಸ್ ತಂಡ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ಬೆನ್ನಟ್ಟಿ ಜಯ ಸಾಧಿಸಿದ ಹಿರಿಮೆಗೆ ಪಾತ್ರವಾಯ್ತು.
ಪಂದ್ಯ ಬಳಿಕ ತನ್ನ ಬ್ಯಾಟಿಂಗ್ ಬಗ್ಗೆ ಮಾತನಾಡಿದ ರಾಹುಲ್ ಟೆವಾಟಿಯಾ, ಮೊದಲ 20 ಎಸೆತಗಳಿಗೆ ನಾನು ಕೆಟ್ಟದಾಗಿ ಆಡಿದ್ದೆ. ಆ ರೀತಿ ನಾನು ಯಾವತ್ತೂ ಆಡಿರಲಿಲ್ಲ. ನಾನು ನೆಟ್ಸ್ ನಲ್ಲಿ ಬಲವಾದ ಹೊಡೆತಗಳನ್ನು ಹೊಡೆಯುತ್ತಿದ್ದೆ. ಹೀಗಾಗಿ ನನಗೆ ನನ್ನ ಮೇಲೆ ನಂಬಿಕೆ ಇತ್ತು. ಆರಂಭದಲ್ಲಿ ಚೆನ್ನಾಗಿ ಆಡಿಲ್ಲ. ಡಗೌಟ್ ನಲ್ಲಿ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರು. ಯಾಕಂದ್ರೆ ನಾನು ಹೊಡೆಯುತ್ತೇನೆ ಅನ್ನೋ ನಂಬಿಕೆಯಲ್ಲಿದ್ದರು. ನನಗೆ ಕೋಚ್ ಲೆಗ್ ಸ್ಪಿನ್ನರ್ ಗೆ ಸಿಕ್ಸರ್ ಬಾರಿಸುವಂತೆ ಹೇಳಿದ್ದರು. ಆದ್ರೆ ನಾನು ವೇಗದ ಬೌಲರ್‍ಗೆ ಹೊಡೆದೆ ಎಂದು ರಾಹುಲ್ ಟೆವಾಟಿಯಾ ಹೇಳಿದ್ದಾರೆ.