ಎರಡೂ ತಂಡಗಳು ಅತ್ಯದ್ಭುತ ಫಾರ್ಮ್ನಲ್ಲಿವೆ. ಆಡಿರುವ 12 ಪಂದ್ಯಗಳಲ್ಲಿ ತಲಾ 9 ಪಂದ್ಯಗಳನ್ನು ಗೆದ್ದಿವೆ. 18 ಪಾಯಿಂಟ್ ಪಡೆದು ಪ್ಲೇ-ಆಫ್ ಪ್ರವೇಶವನ್ನೂ ಖಚಿತ ಮಾಡಿಕೊಂಡಿವೆ.
ಆದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಬೇಕು ಅನ್ನುವ ಹಠಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬಿದ್ದಿವೆ. ಹೀಗಾಗಿ ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ದೊಡ್ಡ ಹೋರಾಟ ನಡೆಯಲಿದೆ.
ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್ ಆಡಲಿವೆ. ಕ್ವಾಲಿಫೈಯರ್ ಗೆದ್ದ ತಂಡ ನೇರವಾಗಿ ಫೈನಲ್ಗೆ ಎಂಟ್ರಿ ಕೊಟ್ಟರೆ ಸೋತ ತಂಡ ಎಲಿಮಿನೇಟರ್ ಆಡಿ ಫೈನಲ್ಗೆ ಏರಬಹುದು. ಹೀಗಾಗಿ ಅಗ್ರ ಎರಡು ಸ್ಥಾನಗಳ ಲೆಕ್ಕಾಚಾರ ಚೆನ್ನೈ ಮತ್ತು ಡೆಲ್ಲಿ ತಂಡಗಳಿಗಿದೆ.
ಚೆನ್ನೈ ಆಗಲಿ ಡೆಲ್ಲಿ ತಂಡಕ್ಕಾಗಲಿ ಹೆಚ್ಚು ಸಮಸ್ಯೆಗಳಿಲ್ಲ. ಚೆನ್ನೈ ತಂಡ ಬ್ಯಾಟಿಂಗ್ನಲ್ಲಿ ಸೂಪರ್ ಆಗಿ ಕಾಣುತ್ತಿದೆ. ಬೌಲಿಂಗ್ನಲ್ಲಿ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಮಾತ್ರ ಎಡವಿತ್ತು.
ಹೀಗಾಗಿ ಸಣ್ಣಪುಟ್ಟ ಬದಲಾವಣೆಗಳು ಆಗಬಹುದು. ಡ್ವೈನ್ ಬ್ರಾವೋ ಸ್ಯಾಮ್ ಕರ್ರನ್ ಜಾಗದಲ್ಲಿ ಕಾಣಿಸಿಕೊಳ್ಳಬಹುದು. ಕೆ.ಎಂ. ಆಸೀಫ್ ದೀಪಕ್ ಚಹರ್ಗೆ ಅವಕಾಶ ನೀಡಬಹುದು. ಉಳಿದಂತೆ ಹೆಚ್ಚು ಬದಲಾವಣೆ ಚೆನ್ನೈ ತಂಡದಲ್ಲಿ ಇರಲು ಸಾಧ್ಯವಿಲ್ಲ.
ಇನ್ನು ಡೆಲ್ಲಿ ತಂಡಕ್ಕೂ ಹೇಳಿಕೊಳ್ಳುವ ಸಮಸ್ಯೆ ಇಲ್ಲ. ಪೃಥ್ವಿ ಷಾ ಮತ್ತು ಶಿಖರ್ ಧವನ್ ಇತ್ತೀಚೆಗೆ ಹೇಳಿಕೊಳ್ಳುವ ಆಟ ಆಡಿಲ್ಲ. ಆದರೆ ಶ್ರೇಯಸ್, ರಿಷಭ್ ಉತ್ತಮ ಲಯದಲ್ಲಿದ್ದಾರೆ.
ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಪಿಟ್ನೆಸ್ ಕೂಡ ಪ್ರಶ್ನೆಯಲ್ಲಿದೆ. ಬೌಲಿಂಗ್ನಲ್ಲಿ ಅದ್ಭುತವಾಗಿರುವುದರಿಂದ ಡೆಲ್ಲಿ ಕೂಡ ಬಲಿಷ್ಠ ಅನ್ನುವುದರಲ್ಲಿ ಎರಡು ಮಾತಿಲ್ಲ.
ಸಂಭಾವ್ಯ XI
ಚೆನ್ನೈ ಸೂಪರ್ ಕಿಂಗ್ಸ್
- ಫಾಫ್ ಡು ಪ್ಲೆಸಿಸ್, 2. ರುತುರಾಜ್ ಗಾಯಕ್ವಾಡ್, 3 ಮೊಯಿನ್ ಆಲಿ, 4. ಅಂಬಟಿ ರಾಯುಡು, 5. ಸುರೇಶ್ ರೈನಾ, 6. ಎಂ.ಎಸ್.ಧೋನಿ, 7. ರವೀಂದ್ರ ಜಡೇಜಾ, 8. ಡ್ವೈನ್ ಬ್ರಾವೋ, 9. ಶಾರ್ದೂಲ್ ಠಾಕೂರ್, 10. ದೀಪಕ್ ಚಹರ್, 11. ಜೋಶ್ ಹ್ಯಾಜಲ್ವುಡ್/ ಸ್ಯಾಮ್ ಕರ್ರನ್/ ಇಮ್ರಾನ್ ತಾಹಿರ್
ಡೆಲ್ಲಿ ಕ್ಯಾಪಿಟಲ್ಸ್:
- ಪೃಥ್ವಿ ಷಾ, 2. ಶಿಖರ್ ಧವನ್, 3. ಶ್ರೇಯಸ್ ಅಯ್ಯರ್, 4. ರಿಷಭ್ ಪಂತ್, 5. ಲಲಿತ್ ಯಾದವ್, 6. ಶಿಮ್ರನ್ ಹೆಟ್ಮಯರ್, 7. ಅಕ್ಸರ್ ಪಟೇಲ್, 8. ಆರ್.ಅಶ್ವಿನ್, 9. ಕಗಿಸೊ ರಬಾಡಾ, 10. ಅನ್ರಿಚ್ ನೋರ್ಟ್ಜೆ, 11. ಆವೇಶ್ ಖಾನ್









