ಐಪಿಎಲ್ ಸೀಸನ್ 14ರ ಅಂತಿಮ ಪಂದ್ಯ ಇದು. ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗುತ್ತಿವೆ. ಚೆನ್ನೈ ಮೂರು ಬಾರಿ ಕಪ್ ಗೆದ್ದರೆ, ಕೊಲ್ಕತ್ತಾ 2 ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಹೀಗಾಗಿ ಇದು ಚಾಂಪಿಯನ್ಗಳ ಫೈನಲ್.
ಟೀಮ್ ವಿಚಾರಕ್ಕೆ ಬಂದ್ರೆ ಚೆನ್ನೈ ಪಕ್ಕಾ ಸೌತ್ ರುಚಿಯ ಫ್ಲೇವರ್ ತಹರ ಇದೆ. ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ರನ್ ಬೇಟೆಯಾಡುವ ರಣ ಬೇಟೆಗಾರರು. ರಾಬಿನ್ ಅಕ್ರಮಣಕಅರಿ ಬ್ಯಾಟರ್. ಅಂಬಟಿ ರಾಯುಡು ಮತ್ತು ಮೊಯಿನ್ ಅಬ್ಬರಿಸಿದರೆ ಯಾರೂ ತಡೆಯಲು ಆಗುವುದಿಲ್ಲ. ಧೋನಿಯ ಅನುಭವಕ್ಕೆ ಸಾಟಿ ಇಲ್ಲ. ಜಡೇಜಾ ಐಪಿಎಲ್ನ ರಜನಿಕಾಂತ್. ಬ್ರಾವೋ ಕೆರಿಬಿಯನ್ ಸೂಪರ್ ಸ್ಟಾರ್. ಶಾರ್ದೂಲ್ ಮತ್ತು ದೀಪಕ್ ಚಹರ್ ಕಿಂಗ್ ಮೇಕರ್ಗಳು. ಜೋಶ್ ಹ್ಯಾಜಲ್ವುಡ್ ಸೂಪರ್ ಮ್ಯಾನ್.
ಇತ್ತ ಕೊಲ್ಕತ್ತಾ ನೈಟ್ ರೈಡರ್ಸ್ ಕೂಡ ಕಡಿಮೆ ಬಲ ಹೊಂದಿಲ್ಲ. ಬೆಂಗಾಲಿ ಸ್ವೀಟ್ ತರಹ ಜರ್ನಿ ಸುಗಮವಾಗಿದೆ. ಫೈನಲ್ ಎಂಟ್ರಿ ಸಾಧ್ಯವೇ ಇಲ್ಲ ಅನ್ನುವಂತಹ ಸ್ಥಿತಿಯಿಂದ ಕಪ್ ಗೆಲ್ಲುವನ ಕನಸು ಕಾಣುತ್ತಿದ್ದಾರೆ. ಯುವ ಆಟಗಾರರಾದ ಶುಭ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ ಮತ್ತು ನಿತೀಶ್ ರಾಣಾ ಆಟ ಕೆಕೆಆರ್ ತಂಡವನ್ನು ಫೈನಲ್ಗೇರಿಸಿದೆ. ಕ್ಯಾಪ್ಟನ್ ಮೊರ್ಗಾನ್, ದಿನೇಶ್ ಕಾರ್ತಿಕ್ ಮತ್ತು ಶಕೀಬ್ ಅನುಭವ ಗೆಲುವಿನ ಹಿಂದೆ ಕಾಣದೇ ಇದ್ದರೂ ಕಡೆಗಣಿಸುವಂತಿಲ್ಲ. ಸುನೀಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಮಿಸ್ಟರಿ ಬಿಡಿಸಲು ಇನ್ನೂ ಸಾಧ್ಯವಾಗಿಲ್ಲ. ಫರ್ಗ್ಯೂಸನ್ ವೇಗ ಮತ್ತು ಮಾವಿಯ ಮ್ಯಾಜಿಕ್ ಲೈನ್ ತಂಡದ ಶಕ್ತಿ ಹೆಚ್ಚಿಸಿದೆ. ಈ ನಡುವೆ ಆಂಡ್ರೆ ರಸೆಲ್ ಗಾಯದಿಂದ ಚೇತರಿಸಿಕೊಂಡರೆ ಕೆಕೆಆರ್ ತಂಡವನ್ನು ಕಟ್ಟಿಹಾಕುವುದು ಕಷ್ಟದ ಮಾತು.
ಸಂಭಾವ್ಯ XI
ಚೆನ್ನೈ ಸೂಪರ್ ಕಿಂಗ್ಸ್
1. ಫಾಫ್ ಡು ಪ್ಲೆಸಿಸ್, 2. ರುತುರಾಜ್ ಗಾಯಕ್ವಾಡ್, 3. ಮೊಯಿನ್ ಅಲಿ, 4. ರಾಬಿನ್ ಉತ್ತಪ್ಪ,ಮ 5. ಅಂಬಟಿ ರಾಯುಡು, 6. ರವೀಂದ್ರ ಜಡೇಜಾ, 7. ಎಂ.ಎಸ್. ಧೋನಿ, 8. ಡ್ವೈನ್ ಬ್ರಾವೋ, 9. ಶಾರ್ದೂಲ್ ಠಾಕೂರ್, 10.. ದೀಪಕ್ ಚಹರ್, 11. ಜೋಶ್ ಹ್ಯಾಜಲ್ವುಡ್
ಕೊಲ್ಕತ್ತಾ ನೈಟ್ ರೈಡರ್ಸ್
1. ವೆಂಕಟೇಶ್ ಅಯ್ಯರ್, 2. ಶುಭ್ಮನ್ ಗಿಲ್, 3. ನಿತಿಶ್ ರಾಣಾ, 4. ರಾಹುಲ್ ತ್ರಿಪಾಠಿ, 5. ಇಯಾನ್ ಮೊರ್ಗಾನ್, 6. ದಿನೇಶ್ ಕಾರ್ತಿಕ್, 7. ಶಕೀಬ್ ಅಲ್ ಹಸನ್/ ಆ್ಯಂಡ್ರೆ ರಸೆಲ್, 8. ಸುನೀಲ್ ನರೈನ್, 9. ವರುಣ್ ಚಕ್ರವರ್ತಿ, 10. ಶಿವಂ ಮಾವಿ, 11. ಲೊಕಿ ಫರ್ಗ್ಯೂಸನ್








