ಎಬಿಡಿ 5000 ರನ್ ಗಳಿಸಿದ್ದು ದೊಡ್ಡ ಸಾಧನೆನಾ..?
ವಿಶ್ವ ಕ್ರಿಕೆಟ್ ನ ಸೂಪರ್ ಮ್ಯಾನ್. ಕ್ರಿಕೆಟ್ ದುನಿಯಾದ ಏಲಿಯನ್. ಮಿಸ್ಟರ್ 360 ಡಿಗ್ರಿ, ಒಂಡ್ ಅಂಡ್ ಓನ್ಲಿ ಎಬಿಡಿ ವಿಲಿಯರ್ಸ್ ಆಟಕ್ಕೆ ಎಲ್ಲರೂ ಸಲಾಂ ಎನ್ನಲೇಬೇಕು. ಎಬಿಡಿ ಕ್ರಿಕೆಟ್ ಜಗತ್ತು ಕಂಡುಕೇಳದ ಆಟಗಾರ. ಕ್ರಿಕೆಟ್ ಅಭಿಮಾನಿಗಳು ಕನಸ್ಸಲ್ಲೂ ಊಹಿಸದ ಆಟಗಾರ. ಆಧುನಿಕ ಕ್ರಿಕೆಟ್ ಹೊಸ ಭಾಷ್ಯ ಬರೆದ ತ್ರಿವಿಕ್ರಮ. ಕ್ರಿಕೆಟ್ ಗೆ ಹೊಸ ಟಚ್ ನೀಡಿದ ರಣಬೇಟೆಗಾರ.
ಈ ಹಿಂದೆ ಯಾರು ಕೇಳಿ ನೋಡಿರದ ಶೈಲಿಯಲ್ಲಿ ಬ್ಯಾಟ್ ಬೀಸುವ ಎಬಿಡಿಗೆ ಯಾರೂ ಸರಿಸಾಟಿಯೇ ಇಲ್ಲ. ಕ್ರೀಸ್ ನಲ್ಲಿ ಕಚ್ಚಿನಿಂತರೇ ಅಲ್ಲಿ ಬೌಂಡರಿ ಲೈನ್ ಗಳಲೇ ಚಿಕ್ಕದಾಗಿಬಿಡುತ್ತವೆ. ಚೆಂಡಿಗೆ ಅಷ್ಟದಿಕ್ಕುಗಳ ದರ್ಶನ ಮಾಡಿಸುವ ವಿಶ್ವದ ಏಕೈಕ ಬ್ಯಾಟ್ಸ್ ಮೆನ್ ಎಬಿಡಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಆಟಕ್ಕೆ ಪ್ರತಿಯೊಬ್ಬರು ಸಲಾಂ ಎನ್ನುತ್ತಾರೆ.
ಇಂತಹ ಅದ್ಭುತ ಆಟಗಾರ ಐಪಿಎಲ್ ನಲ್ಲಿ ಮತ್ತೊಂದು ದಾಖಲೆ ಮಾಡಿದ್ದಾರೆ. ಅದೇನೆಂದರೇ ಐಪಿಎಲ್ ನಲ್ಲಿ 5 ಸಾವಿರ ರನ್ ಗಳಿಸಿದ 6 ನೇ ಹಾಗೂ ವಿದೇಶಿಗರ ಪೈಕಿ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನ ಸಾಮಾನ್ಯವಾಗಿ ಆರ್ ಸಿಬಿಯನ್ಸ್ ಸಂಭ್ರಮಿಸುತ್ತಿದ್ದಾರೆ. ಆದ್ರೆ ಕೆಲ ಅತೃಪ್ತ ಕ್ರೀಡಾಭಿಮಾನಿಗಳು ಎಬಿಡಿ 5000 ರನ್ ಗಳಿಸಿದ್ದು ದೊಡ್ಡ ಸಾಧನೆನಾ..? ಅನ್ನೋ ರೀತಿಯಾಗಿ ಮಾತನಾಡುತ್ತಿದ್ದಾರೆ. ಇದಕ್ಕೆ ಎಬಿಡಿ ಅಭಿಮಾನಿಗಳು ಕೂಡ ಮುಟ್ಟಿನೋಡಿಕೊಳ್ಳುವಂತಹ ತಿರುಗೇಟು ನೀಡುತ್ತಿದ್ದಾರೆ.










