ಡೆಲ್ಲಿ ಕ್ಯಾಪಿಟಲ್ಸ್ VS ಸನ್ರೈಸರ್ಸ್ ಹೈದ್ರಾಬಾದ್ : ಹೈವೋಲ್ಟೇಜ್ ಮ್ಯಾಚ್ ನಲ್ಲಿ ಗೆಲುವು ಯಾರಿಗೆ IPL 2021
ಅಂಕಪಟ್ಟಿಯಲ್ಲಿ ಡೆಲ್ಲಿ ಡೇರ್ ಕ್ಯಾಪಿಟಲ್ಸ್ ಉತ್ತಮ ಸ್ಥಾನದಲ್ಲಿದೆ. ಸನ್ ರೈಸರ್ಸ್ ಹೈದ್ರಾಬಾದ್ ಕೊನೆಯ ಸ್ಥಾನದಲ್ಲಿದೆ. ಡೆಲ್ಲಿ ಏನಂದು ಕೊಳ್ಳುತ್ತಿದೆಯೋ ಅದೆಲ್ಲವೂ ನಡೆಯುತ್ತಿದೆ. ಶಿಖರ್ ಧವನ್, ಪೃಥ್ವಿಷಾ ಪವರ್ ಪ್ಲೇನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ.
ಬೌಲರ್ಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆಡಿರುವ 8 ಪಂದ್ಯಗಳಲ್ಲಿ 6ನ್ನು ಗೆದ್ದು 12 ಪಾಯಿಂಟ್ ಟೇಬಲ್ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈಗ ಶ್ರೇಯಸ್ ಅಯ್ಯರ್ ಗಾಯದಿಂದ ಚೇತರಿಸಿಕೊಂಡು ತಂಡ ಸೇರಿದ್ದಾರೆ.
ಡೆಲ್ಲಿ ತಂಡ ಮತ್ತಷ್ಟು ಬಲಿಷ್ಠವಾಗಿ ಕಾಣುತ್ತದೆ. ಇನ್ನೊಂದು ಕಡೆಯಲ್ಲಿ ಸನ್ ರೈಸರ್ಸ್ಗೆ ಯಾವುದು ಕೂಡ ಕೈ ಹಿಡಿದಿಲ್ಲ. ನಾಯಕನಾಗಿದ್ದ ಡೇವಿಡ್ ವಾರ್ನರ್ರನ್ನು ತೆಗೆದಿದ್ದಲ್ಲದೆ, ಆಡುವ ಬಳಗದಿಂದಲೂ ದೂರ ಇಡಲಾಗಿತ್ತು.
7 ಪಂದ್ಯಗಳಲ್ಲಿ ಒಟ್ಟು 21 ಬೇರೆ ಬೇರೆ ಆಟಗಾರರನ್ನು ಪ್ರಯೋಗ ಮಾಡಲಾಯಿತು. ತಂಡದಲ್ಲಿದ್ದ ವೇಗದ ಬೌಲರ್ಗಳ ಪೈಕಿ ಒಬ್ಬರು ಕೂಡ ಏಳಕ್ಕೆ ಏಳು ಪಂದ್ಯದಲ್ಲಿ ಕಾಣಿಸಿಕೊಳ್ಳಲಿಲ್ಲ.
2ನೇ ಇನ್ನಿಂಗ್ಸ್ ಆಟಕ್ಕೆ ಎಸ್ಆರ್ಎಚ್ ಸಜ್ಜಾಗುತ್ತಿದ್ದರೂ, ಜಾನಿ ಬೈರ್ಸ್ಟೋವ್ ಸೇವೆ ಕಳೆದುಕೊಂಡಿದೆ. ಆದರೆ ನಟರಾಜ್ ಆಗಮನ ಸನ್ ರೈಸರ್ಸ್ ವಿಶ್ವಾಸ ಹೆಚ್ಚಿಸಿದೆ.
ಸನ್ರೈಸರ್ಸ್ ಉಳಿದಿರುವ 7 ಪಂದ್ಯಗಳಲ್ಲಿ ಕನಿಷ್ಟ 6 ಪಂದ್ಯಗಳನ್ನು ಗೆದ್ದರಷ್ಟೇ ಪ್ಲೇ-ಆಫ್ ಪ್ರವೇಶ ಮಾಡಬಹುದು. ಡೆಲ್ಲಿ ಈ ಪಂದ್ಯವನ್ನು ಗೆದ್ದರೆ ಮತ್ತೆ ಅಗ್ರಸ್ಥಾನಕ್ಕೆ ಏರಲಿದೆ. ಹೀಗಾಗಿ ದುಬೈನಲ್ಲಿ ನಡೆಯಲಿರುವ ಈ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ.
ಸಂಭಾವ್ಯ ತಂಡಗಳು
ಡೆಲ್ಲಿ ಕ್ಯಾಪಿಟಲ್ಸ್:
1. ಪೃಥ್ವಿಷಾ, 2. ಶಿಖರ್ ಧವನ್, 3. ಶ್ರೇಯಸ್ ಅಯ್ಯರ್, 4 ರಿಷಬ್ ಪಂತ್, 5. ಮಾರ್ಕಸ್ ಸ್ಟೋಯ್ನಿಸ್, 6. ಶಿಮ್ರಾನ್ ಹೆಟ್ಮಯರ್, 7. ಅಕ್ಷರ್ ಪಟೇಲ್, 8. ರವಿಚಂದ್ರನ್ ಅಶ್ವಿನ್, 9. ಕಗಿಸೋ ರಬಾಡಾ, 10. ಆನ್ರಿಚ್ ನೋರ್ಟ್ಜೆ, 11.ಆವೇಶ್ ಖಾನ್
ಸನ್ ರೈಸರ್ಸ್ ಹೈದ್ರಾಬಾದ್
1. ಡೇವಿಡ್ ವಾರ್ನರ್, 2. ವೃದ್ಧಿಮಾನ್ ಸಾಹಾ, 3.ಮನೀಷ್ ಪಾಂಡೆ, 4. ಕೇನ್ ವಿಲಿಯಮ್ಸನ್, 5.ಕೇದಾರ್ ಜಾಧವ್, 6. ಅಬ್ದುಲ್ ಸಮದ್, 7. ಮೊಹಮ್ಮದ್ ನಬಿ, 8. ರಶೀದ್ ಖಾನ್, 9. ಭುವನೇಶ್ವರ್ ಕುಮಾರ್, 10. ಟಿ. ನಟರಾಜನ್, 11. ಸಂದೀಪ್ ಶರ್ಮಾ








