ನೈಟ್ ರೈಡರ್ಸ್ ಬೌಲಿಂಗ್ ಗೆ ಡೆಲ್ಲಿ ತತ್ತರ : 127ಕ್ಕೆ ಆಲೌಟ್
ಯುಎಇ : ಶಾರ್ಜಾ ಅಂಗಳದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲರ್ ಗಳು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಮೇಲೆ ರೈಡ್ ಮಾಡಿದ್ದಾರೆ.
ರೈಡರ್ಸ್ ದಾಳಿಗೆ ತತ್ತರಿಸಿದ ಡೆಲ್ಲಿ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಲಿಲ್ಲ.
ಶಿಖರ್ ಧವನ್ 24, ಅಶ್ವಿನ್ 9, ಶ್ರೇಯಸ್ ಅಯ್ಯರ್1, ಶಿಮ್ರಾನ್ ಹೆಟ್ಮಾಯರ್ 4, ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಬ್ಯಾಕ್ ಟು ಬ್ಯಾಕ್ ವಿಕೆಟ್ ಬೀಳುತ್ತಿದ್ದ ಕಾರಣ ಸ್ಟೀವ್ ಸ್ಮಿತ್ ಮತ್ತು ಪಂತ್ ಕೂಡ ನಿಧಾನಗತಿ ಆಟಕ್ಕೆ ಮೊರೆ ಹೋದರು.
ಸ್ಟೀವ್ ಸ್ಮಿತ್ 34 ಎಸೆತಗಳಲ್ಲಿ 39 ಮತ್ತು ರಿಷಭ್ ಪಂತ್ 36 ಎಸೆತಗಳಲ್ಲಿ 39 ರನ್ ಗಳಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಲು ನೆರವಾದರು.
ಇನ್ನು ಕೊಲ್ಕತ್ತಾ ಪರ ನರೈನ್ 18ಕ್ಕೆ 2, ವೆಂಕಟೇಶ್ ಅಯ್ಯರ್ 29ಕ್ಕೆ2, ಲಾಕಿ ಫರ್ಗುಸನ್ 10ಕ್ಕೆ2 ಮತ್ತು ಟಿಮ್ ಸೌಥಿ 29ಕ್ಕೆ1 ರನ್ ನೀಡಿದ ವಿಕೆಟ್ ಪಡೆದರು.









