ಕೊಲ್ಕತ್ತಾ ನೈಟ್ ರೈಡರ್ಸ್ಗೆ ಪಾಯಿಂಟ್ ಟೇಬಲ್ನಲ್ಲಿ ಗಟ್ಟಿಯಾಗಿ ಉಳಿದುಕೊಳ್ಳುವ ಆಸೆ. ತನ್ನ ನೆಟ್ ರನ್ರೇಟ್ ಅನ್ನು ಬಳಿಸಿಕೊಂಡು ಪ್ಲೇ-ಆಫ್ ಫೈಟ್ನಲ್ಲಿ ಇರಬೇಕಾದರೆ ಪಂಜಾಬ್ ವಿರುದ್ಧದ ಪಂದ್ಯವನ್ನು ಗೆಲ್ಲಬೇಕು.
ಪಂಜಾಬ್ ಕಿಂಗ್ಸ್ಗೆ ಈ ಪಂದ್ಯ ಮಾಡು ಇಲ್ಲವೆ ಮಡಿ ಮ್ಯಾಚ್. ಈ ಪಂದ್ಯ ಪಂಜಾಬ್ ಗೆದ್ದರೆ ಪ್ಲೇ-ಆಫ್ ರೇಸ್ ಮತ್ತಷ್ಟು ಕಠಿಣವಾಗುತ್ತದೆ. ಹೀಗಾಗಿ ದುಬೈನಲ್ಲಿ ನಡೆಯುವ ಈ ಮ್ಯಾಚ್ ಬಹಳ ರೋಚಕತೆ ಹುಟ್ಟಿಸಿದೆ.
ಕೆಕೆಆರ್ ಯುಎಇಗೆ ಕಾಲಿಟ್ಟ ಮೇಲೆ ಸೋತಿದ್ದು ಒಂದೇ ಒಂದು ಮ್ಯಾಚ್. ಅದು ಕೂಡ ಸಿಎಸ್ಕೆ ವಿರುದ್ಧ ಕೊನೆಯ ಎಸೆತದಲ್ಲಿ ಪಂದ್ಯ ಸೋತಿತ್ತು. ಹೀಗಾಗಿ ಕೆಕೆಆರ್ ಆತ್ಮವಿಶ್ವಾಸ ಸಾಕಷ್ಟು ಹೆಚ್ಚಿದೆ.
ಬ್ಯಾಟಿಂಗ್ ಲೈನ್ ಅಪ್ನಿಂದ ಹಿಡಿದು ಬೌಲರ್ಗಳ ತನಕ ಎಲ್ಲವೂ ಅಚ್ಚುಕಟ್ಟಾಗಿದೆ. ಆಲ್ರೌಂಡರ್ಗಳು ಕೂಡ ಉತ್ತಮ ನಿರ್ವಹಣೆ ನೀಡಿದ್ದಾರೆ. ಹೀಗಾಗಿ ಕೆಕೆಆರ್ ಕಾಂಬಿನೇಷನ್ ಮತ್ತು ಬದಲಾವಣೆ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿಲ್ಲ.
ಇನ್ನೊಂದು ಕಡೆ ಪಂಜಾಬ್ ಕಿಂಗ್ಸ್ ಪಾಯಿಂಟ್ ಟೇಬಲ್ನಲ್ಲಿ 6ನೇ ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 8 ಅಂಕ ಪಡೆದಿರುವ ಪಂಜಾಬ್ ಉಳಿದಿರುವ ಮೂರೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕಿದೆ.
ಅಷ್ಟಾದ ಮೇಲೆ ರನ್ ರೇಟ್ ಮತ್ತು ಇತರ ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಪಂಜಾಬ್ ಭವಿಷ್ಯ ಅಡಗಿದೆ. ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ನಲ್ಲಿ ಕೊಂಚ ಗಲಿಬಿಲಿ ಇದೆ.
ಆರಂಭಿಕರನ್ನು ಬಿಟ್ಟರೆ ಮಧ್ಯಮ ಕ್ರಮಾಂಕ ರನ್ಗಳಿಸಿಲ್ಲ. ನಿಕೊಲಸ್ ಪೂರನ್ ಮತ್ತು ಕ್ರಿಸ್ಗೇಲ್ ಸಿಡಿಲ್ಲ. ಬೌಲಿಂಗ್ನಲ್ಲಿ ಶಮಿ, ಅರ್ಶದೀಪ್ ಮತ್ತು ಬಿಷ್ಣೋಯಿ ವಿಕೆಟ್ ಪಡೆದರೂ ಗೆಲುವು ಸಿಗುತ್ತಿಲ್ಲ. ಈ ಪಂದ್ಯದಲ್ಲಿ ಪಂಜಾಬ್ ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ಸಂಭಾವ್ಯ XI
ಕೊಲ್ಕತ್ತಾ ನೈಟ್ರೈಡರ್ಸ್
- ಶುಭ್ಮನ್ ಗಿಲ್, 2. ವೆಂಕಟೇಶ್ ಅಯ್ಯರ್, 3. ರಾಹುಲ್ ತ್ರಿಪಾಠಿ, 4. ನಿತೀಶ್ ರಾಣಾ, 5. ಇಯಾನ್ ಮೊರ್ಗಾನ್, 6. ದಿನೇಶ್ ಕಾರ್ತಿಕ್, 7. ಸುನೀಲ್ ನರೈನ್, 8. ಆಂಡ್ರೆ ರಸೆಲ್/ ಟಿಮ್ಸೌಥಿ, 9. ಲೊಕಿ ಫರ್ಗ್ಯೂಸನ್, 10. ಪ್ರಸಿಧ್ ಕೃಷ್ಣ, 11. ವರುಣ್ ಚಕ್ರವರ್ತಿ
ಪಂಜಾಬ್ ಕಿಂಗ್ಸ್
- ಕೆ.ಎಲ್.ರಾಹುಲ್, 2. ಮಾಯಾಂಕ್ ಅಗರ್ವಾಲ್, 3. ಕ್ರಿಸ್ಗೇಲ್, 4. ಏಡಿಯನ್ ಮಾರ್ಕ್ರಾಂ, 5. ನಿಕೊಲಸ್ ಪೂರನ್, 6. ದೀಪಕ್ ಹೂಡ/ ಶಾರೂಖ್ ಖಾನ್, 7.ಹಪ್ರೀತ್ ಬ್ರಾರ್, 8. ರವಿ ಬಿಷ್ಣೋಯಿ, 9 ನಾಥನ್ ಎಲ್ಲಿಸ್, 10. ಅರ್ಶದೀಪ್ ಸಿಂಗ್, 11. ಮೊಹಮ್ಮದ್ ಶಮಿ