ಸಿಎಸ್ ಕೆ ಜರ್ಸಿ ಧರಿಸಲು ಮೊಯಿನ್ ಅಲಿ ಹಿಂದೇಟು..!
ಮುಂಬೈ : ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಇನ್ನ ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಈಗಾಗಲೇ ಎಲ್ಲ ತಂಡಗಳು ಮೈದಾನಕ್ಕಿಳಿದು ತಾಲೀಮು ನಡೆಸುತ್ತಿವೆ.
ಈ ನಡುವೆ ಕಳೆದ ಹರಾಜಿನಲ್ಲಿ ಏಳು ಕೋಟಿಗೆ ಸಿಎಸ್ ಕೆ ಮಾರಾಟವಾಗಿದ್ದ ಮೊಯಿನ್ ಅಲಿ, ಚೆನ್ನೈ ಜರ್ಸಿ ಹಾಕಿಕೊಳ್ಳಲು ಹಿಂದೇಟು ಹಾಕಿದ್ದಾರೆ.
ಹೌದು..! ಆಲ್ಕೋ ಹಾಲ್ ಬ್ರಾಂಡ್ ರಾಯಭಾರಿಗಳಾಗಿರುವ ಜರ್ಸಿ ಧರಿಸಲು ಮೊಯಿಲ್ ಅಲಿ ಇಷ್ಟಪಡುವುದಿಲ್ಲ. ಅಂತಹ ಜರ್ಸಿಗಳನ್ನು ಧರಿಸುವುದಿಲ್ಲ ಎಂದು ಈ ಮೊದಲೇ ಅವರು ತಿಳಿಸಿದ್ದರು.
ಇತ್ತೀಚಿನ ಸಿಎಸ್ಕೆ ಜರ್ಸಿಯಲ್ಲಿ ಎಸ್ಎನ್ಜೆ 10000 ಲೋಗೊ ಇದ್ದು, ಆಲ್ಕೋಹಾಲ್ ಲೋಗೋ ಜರ್ಸಿಯನ್ನು ಧರಿಸಲು ಸಾಧ್ಯವಿಲ್ಲ ಎಂದು ಅಲಿ ಸಿಎಸ್ಕೆ ಟೀಂ ಮ್ಯಾನಜ್ ಮೆಂಟ್ ಗೆ ತಿಳಿಸಿದ್ದಾರೆ.
ಜೊತೆಗೆ ಸರಳ ಜರ್ಸಿ ಧರಿಸಲು ಅವಕಾಶ ನೀಡುವಂತೆ ಸಿಎಸ್ಕೆ ಗೆ ಮನವಿ ಮಾಡಿದ್ದಾರೆ. ಅಲಿ ಮನವಿಗೆ ಸ್ಪಂದಿಸಿರುವ ಚೆನ್ನೈ ತಂಡ ಅಲಿ ಧರಿಸುವ ಜರ್ಸಿಯ ಮೇಲೆ ಲೋಗೋ ತೆಗೆಯಲಾಗುವುದು ಎಂದು ಸ್ಪಷ್ಟಪಡಿಸಿದೆ.
ಈ ಹಿಂದೆ ಮೊಯಿನ್ ಅಲಿ ಆರ್ಸಿಬಿ ಪರ ಆಡುವಾಗಲೂ ಸಹ ಆಲ್ಕೋಹಾಲ್ ಲೋಗೊ ಮುಕ್ತ ಜರ್ಸಿ ಧರಿಸಿದ್ದರು.
ಮೊಯಿನ್ ಅಲಿ ಐಪಿಎಲ್ ನಲ್ಲಿ ಇದುವರೆಗೆ 19 ಪಂದ್ಯಗಳನ್ನು ಆಡಿ 309 ರನ್ ಗಳಿಸಿ 10 ವಿಕೆಟ್ ಪಡೆದಿದ್ದಾರೆ. ಧೋನಿ ನೇತೃತ್ವದ ಸಿಎಸ್ಕೆ ಪರ ಆಡಲು ಎದುರು ನೋಡುತ್ತಿದ್ದೇನೆ ಎಂದು ಅಲಿ ಇತ್ತೀಚೆಗೆ ಹೇಳಿದ್ದಾರೆ.