ಮನೀಶ್ ಪಾಂಡೆ ಟೀಂ ಇಂಡಿಯಾದಲ್ಲಿ ಹೆಚ್ಚಾಗಿ ಬೆಂಚ್ ಕಾಯಲು ಇದೇ ಕಾರಣ
ಚೆನ್ನೈ : ಕನ್ನಡಿಗ ಮನೀಶ್ ಪಾಂಡೆ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟು ವರ್ಷಗಳೇ ಕಳೆದಿದ್ದರೂ ಈವರೆಗೂ ಅವರು ತಂಡದ ಖಾಯಂ ಸದಸ್ಯರಾಗಿಲ್ಲ.
ಅಧ್ಬುತ ಪ್ರತಿಭೆ ಇದ್ದರೂ ಮನೀಶ್ ಯಾಕೆ ಟೀಂ ಇಂಡಿಯಾದಲ್ಲಿ ಕ್ಲಿಕ್ ಆಗುತ್ತಿಲ್ಲ ಎಂಬ ಪ್ರಶ್ನೆ ಸಾಕಷ್ಟು ಮಂದಿಯಲ್ಲಿ ಮೂಡಿದೆ.
ಈ ಮಧ್ಯೆ ಈ ಪ್ರಶ್ನೆಗೆ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಉತ್ತರ ನೀಡಿದ್ದು, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಕೊರತೆಯಿಂದಲೇ ಅವರು ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದಾರೆಂದು ತಿಳಿಸಿದ್ದಾರೆ.
ಕೆಕೆಆರ್ ನಡುವಿನ ಮೊದಲ ಪಂದ್ಯದಲ್ಲಿ ಮನೀಶ್ ಅಜೇಯ ಅರ್ಧಶತಕ ಸಿಡಿಸಿದರೂ ಕೆಕೆಆರ್ ವಿರುದ್ಧ ಗೆಲ್ಲಿಸಲು ವಿಫಲವಾಗಿ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದರು.
ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೂ 39 ಎಸೆತಗಳಲ್ಲಿ 38 ರನ್ ಗಳಿಸಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನೆಹ್ರಾ, ಮನೀಶ್ ಪಾಂಡೆ ಪರಿಸ್ಥಿತಿಗೆ ತಕ್ಕಂತೆ ಆಡುವುದನ್ನು ಮೈಗೂಡಿಸಿಕೊಂಡಿಲ್ಲ.
ಈ ಕಾರಣದಿಂದಲೇ ಅವರು ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಉಳಿಸಿಕೊಳ್ಳಲಿಲ್ಲ. ಇದೀಗ ರಾಷ್ಟ್ರೀಯ ತಂಡದಿಂದಲೂ ಹೊರಬಿದ್ದಿದ್ದಾರೆ.
“ಮನೀಶ್ ಪಾಂಡೆ ತುಂಬಾ ಹಿಂದೆಯೇ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಆದರೆ, ಇವರ ನಂತರ ಬಂದಂತಹ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಎಲ್ಲರಿಗೂ ಮನೀಶ್‍ರನ್ನು ಮೀರಿ ಮುಂದಕ್ಕೆ ಸಾಗುತ್ತಿದ್ದಾರೆ”
ಅವರ ಆಟದಲ್ಲಿನ ಭಿನ್ನತೆ. ಇವರೆಲ್ಲಾ ಒತ್ತಡವನ್ನು ಮನೀಶ್ ಗಿಂತ ಚೆನ್ನಾಗಿ ನಿಭಾಯಿಸುತ್ತಾರೆ ಮತ್ತು ಅಂತಾ ಸಂದರ್ಭಣದಲ್ಲಿ ಮನೀಶ್ ಗಿಂತ ತುಂಬಾ ಚೆನ್ನಾಗಿ ನಿರ್ವಹಿಸುತ್ತಾರೆ. ಇದೇ ಕಾರಣಕ್ಕೆ ಮನೀಶ್ ಪಾಂಡೆ ಹಿಂದಕ್ಕೆ ಉಳಿದಿದ್ದಾರೆ” ಎಂದಿದ್ದಾರೆ.