ಸಂಜು ಸಾಮ್ಸನ್ ನಾಯಕತ್ವದ ರಾಜಸ್ತಾನ ರಾಯಲ್ಸ್ ತಂಡದ ಫುಲ್ ಡಿಟೇಲ್ಸ್..!
ipl 2021- Rajasthan Royals full team deatails
ರಾಜಸ್ತಾನ ರಾಯಲ್ಸ್.. ಐಪಿಎಲ್ ಚೊಚ್ಚಲ ಪ್ರಶಸ್ತಿ ಗೆದ್ದ ಹಿರಿಮೆ ಈ ತಂಡಕ್ಕಿದೆ. 2008ರಲ್ಲಿ ಶೇನ್ ವಾರ್ನ್ ಸಾರಥ್ಯದ ರಾಜಸ್ತಾನ ರಾಯಲ್ಸ್ ತಂಡ ಯಾರೂ ಕೂಡ ನಿರೀಕ್ಷೆ ಮಾಡದ ರೀತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು.
ಆ ನಂತರದ 12 ಆವೃತ್ತಿಗಳ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಸಾಧನೆ ಅಷ್ಟಕ್ಕಷ್ಟೇ. ತಂಡದಲ್ಲಿ ಪ್ರತಿಭಾವಂತ ಆಟಗಾರರು ಇದ್ರೂ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ.
2013ರಲ್ಲಿ ಮೂರನೇ ಸ್ಥಾನ, 2015 ಮತ್ತು 2018ರಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿರುವುದು ಶ್ರೇಷ್ಠ ಸಾಧನೆಯಾಗಿದೆ.
ಇನ್ನುಳಿದಂತೆ 2009ರಲ್ಲಿ ಆರನೇ ಸ್ಥಾನ, 2010ರಲ್ಲಿ ಏಳನೇ ಸ್ಥಾನ, 2011ರಲ್ಲಿ ಆರನೇ ಸ್ಥಾನ, 2012ರಲ್ಲಿ ಏಳನೇ ಸ್ಥಾನ, 2014ರಲ್ಲಿ ಐದನೇ ಸ್ಥಾನ, 2019ರಲ್ಲಿ ಏಳನೇ ಸ್ಥಾನ ಹಾಗೂ 2020ರಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿದೆ.
ಇನ್ನು 2016 ಮತ್ತು 2017ರಲ್ಲಿ ರಾಜಸ್ತಾನ ರಾಯಲ್ಸ್ ಸ್ಪಾಟ್ ಫಿಕಿಂಗ್ಸ್ ಆರೋಪಕ್ಕೆ ಸಿಲುಕಿ ಎರಡು ವರ್ಷ ನಿಷೇಧಕ್ಕೂ ಗುರಿಯಾಗಿದೆ.
ಇನ್ನೊಂದೆಡೆ ರಾಜಸ್ತಾನ ರಾಯಲ್ಸ್ ತಂಡ ಐಪಿಎಲ್ ನಲ್ಲಿ ಒಟ್ಟು 164 ಪಂದ್ಯಗಳನ್ನು ಆಡಿದೆ. ಇದ್ರಲ್ಲಿ 81 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, 78 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಐದು ಪಂದ್ಯಗಳ ಫಲಿತಾಂಶ ಬಂದಿಲ್ಲ.
ರಾಜಸ್ತಾನ ರಾಯಲ್ಸ್ ತಂಡಕ್ಕೆ ಸ್ಪಿನ್ ಡಾಕ್ಟರ್ ಶೇನ್ ವಾರ್ನ್ ಮೆಂಟರ್ ಆಗಿದ್ದಾರೆ. ಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಡೈರೆಕ್ಟರ್ ಆಗಿದ್ದು, ಸಂಜು ಸಾಮ್ಸನ್ ಅವರು ನೂತನ ಸಾರಥಿಯಾಗಿದ್ದಾರೆ.
ತಂಡದ ಸ್ಟಾರ್ ಬ್ಯಾಟ್ಸ್ ಮೆನ್ ಆಗಿರುವ ಸಂಜು ಸಾಮ್ಸನ್ ಅವರ ನಾಯಕತ್ವದಲ್ಲಿ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತೆ ಎಂಬ ಭರವಸೆಯನ್ನಿಟ್ಟುಕೊಂಡಿದೆ ರಾಜಸ್ತಾನ ರಾಯಲ್ಸ್.
ರಾಜಸ್ತಾನ ರಾಯಲ್ಸ್
ಸಂಜು ಸ್ಯಾಮ್ಸನ್ (ನಾಯಕ), ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚೆರ್, ಜೋಸ್ ಬಟ್ಲರ್, ರಿಯಾನ್ ಪರಾಗ್, ಶ್ರೇಯಸ್ ಗೋಪಾಲ್, ರಾಹುಲ್ ಟೆವಾಟಿಯಾ, ಮಹಿಪಾಲ್ ಲೊಮ್ರೋರ್, ಕಾರ್ತಿಕ್ ತ್ಯಾಗಿ, ಆಂಡ್ರ್ಯೂ ಟೇ, ಜೈದೇವ್ ಉನಾದ್ಕಟ್, ಮಯಾಂಕ್ ಮಾರ್ಕಂಡೆ, ಯಶಸ್ಸಿ ಜೈಸ್ವಾಲ್, ಅನುಜ್ ರಾವತ್, ಡೇವಿಡ್ ಮಿಲ್ಲರ್, ಮನನ್ ವೊಹ್ರಾ, (ಖರೀದಿ ಮಾಡಿದ ಆಟಗಾರರು ) ಕ್ರಿಸ್ ಮೋರಿಸ್, ಶಿವಮ್ ದುಬೆ, ಮಷ್ತಾಫಿಝುರ್ ರಹಮಾನ್, ಚೇತನ್ ಸಕಾರಿಯಾ, ಕೆ.ಸಿ. ಕಾರಿಯಪ್ಪ, ಲಿಯಾಮ್ ಲಿವಿಂಗ್ ಸ್ಟೋನ್, ಕುಲದೀಪ್ ಯಾದವ್, ಆಕಾಶ್ ಸಿಂಗ್








