ಐಪಿಎಲ್ 2021- ರಾಜಸ್ತಾನ ರಾಯಲ್ಸ್ ತಂಡದ ವೇಳಾಪಟ್ಟಿ ಹೀಗಿದೆ..!
2021ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಸಂಜು ಸಾಮ್ಸನ್ ಅವರು ಸಾರಥ್ಯ ವಹಿಸಿದ್ದಾರೆ. ಕಳೆದ ಬಾರಿಯ ಐಪಿಎಲ್ ನ ಆರಂಭದಲ್ಲಿ ಆರ್ಭಟಿಸಿದ್ರೂ ನಂತರದ ಪಂದ್ಯಗಳಲ್ಲಿ ರಾಜಸ್ತಾನ ರಾಯಲ್ಸ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ.
ಈ ಬಾರಿಯ ತಂಡದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿರುವ ರಾಜಸ್ತಾನ ರಾಯಲ್ಸ್ ತಂಡ ಕ್ರಿಸ್ ಮೋರಿಸ್ ಅವರನ್ನು 16.25 ಕೋಟಿ ರೂಪಾಯಿಗೆ ಖರೀದಿ ಮಾಡಿ ಅಚ್ಚರಿ ಮೂಡಿಸಿದೆ.
ಇನ್ನು 14ನೇ ಆವೃತ್ತಿಯ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡಕ್ಕೆ ತವರು ನೆಲದ ಲಾಭವಿಲ್ಲ. ತಟಸ್ಥ ತಾಣದಲ್ಲಿ ಪಂದ್ಯಗಳನ್ನು ಆಡಬೇಕಿದೆ.
ಏಪ್ರಿಲ್ 12ರಿಂದ ಐಪಿಎಲ್ ಕದನಕ್ಕಿಳಿಯಲಿರುವ ರಾಜಸ್ತಾನ ರಾಯಲ್ಸ್ ತಂಡ ಮೇ 22ರಂದು ಕೊನೆಯ ಲೀಗ್ ಪಂದ್ಯವನ್ನಾಡಲಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿದ್ರೆ, ಕೊನೆಯ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ತಂಡದ ವಿರುದ್ಧ ಆಡಲಿದೆ.
ಏಪ್ರಿಲ್ 12- ಮುಂಬೈ- ರಾಜಸ್ತಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ – ರಾತ್ರಿ 7.30ಕ್ಕೆ
ಏಪ್ರಿಲ್ 15- ಮುಂಬೈ- ರಾಜಸ್ತಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ – ರಾತ್ರಿ 7.30ಕ್ಕೆ
ಏಪ್ರಿಲ್ 19- ಮುಂಬೈ- ರಾಜಸ್ತಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ -ರಾತ್ರಿ 7.30ಕ್ಕೆ
ಏಪ್ರಿಲ್ 22- ಮುಂಬೈ- ರಾಜಸ್ತಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಾತ್ರಿ 7.30ಕ್ಕೆ
ಏಪ್ರಿಲ್ 24- ಮುಂಬೈ- ರಾಜಸ್ತಾನ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್
ಏಪ್ರಿಲ್ 29- ದೆಹಲಿ – ರಾಜಸ್ತಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ – ಮಧ್ಯಾಹ್ನ 3.30ಕ್ಕೆ
ಮೇ 2 -ದೆಹಲಿ – ರಾಜಸ್ತಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ – ಮಧ್ಯಾಹ್ನ 3.30ಕ್ಕೆ
ಮೇ 5- ದೆಹಲಿ – ರಾಜಸ್ತಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ – ರಾತ್ರಿ 7.30ಕ್ಕೆ
ಮೇ 8- ದೆಹಲಿ- ರಾಜಸ್ತಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ – ರಾತ್ರಿ 7.30ಕ್ಕೆ
ಮೇ 11- ಕೊಲ್ಕತ್ತಾ – ರಾಜಸ್ತಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ – ರಾತ್ರಿ 7.30ಕ್ಕೆ
ಮೇ 13 – ಕೊಲ್ಕತ್ತಾ – ರಾಜಸ್ತಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ – ರಾತ್ರಿ 7.30ಕ್ಕೆ
ಮೇ 16- ಕೊಲ್ಕತ್ತಾ – ರಾಜಸ್ತಾನ ರಾಯಲ್ಸ್ ಮತ್ತು ರಾಯಲ್ Zಚಾಲೆಂಜರ್ಸ್ ಬೆಂಗಳೂರು – ಮಧ್ಯಾಹ್ನ 3.30ಕ್ಕೆ
ಮೇ 18- ಬೆಂಗಳೂರು – ರಾಜಸ್ತಾನ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ – ರಾತ್ರಿ 7.30ಕ್ಕೆ
ಮೇ 22- ಬೆಂಗಳೂರು – ರಾಜಸ್ತಾನ ರಾಯಲ್ಸ್ ಮತ್ತು ಕಿಂಗ್ಸ್ ಪಂಜಾಬ್ – ರಾತ್ರಿ 7.30ಕ್ಕೆ