RCB vs KKR ಮ್ಯಾಚ್ ಅಂದ್ರೆ ಸಿಕ್ಸರ್, ಬೌಂಡರಿಗಳ ಅಬ್ಬರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಅಂದರೆ ಅದು ಸಿಕ್ಸರ್, ಬೌಂಡರಿಗಳ ಅಬ್ಬರವೇ ಆಗಿರುತ್ತದೆ. ಇಲ್ಲಿ ಅಂಕಿ ಅಂಶಗಳಿಗೂ ಹೆಚ್ಚಿನ ಮಹತ್ವ ಇರುತ್ತದೆ. ಆರ್‍ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಎಷ್ಟು ರೋಚಕವಾಗಿರುತ್ತದೆ ಅನ್ನುವುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ
ಡೆತ್ ಓವರ್ ನಲ್ಲಿ ಕಾರ್ತಿಕ್ ಡೇಂಜರ್
2020ರಿಂದ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಬಲದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಕಾರ್ತಿಕ್ ಶಕ್ತಿ ಕಡಿಮೆ ಆಗಿಲ್ಲ. ಆದರೆ 13ನೇ ಓವರ್ ಗೂ ಮುನ್ನ ಕ್ರೀಸ್ ಗಿಳಿದಾಗ ಕಾರ್ತಿಕ್ ಸರಾಸರಿ ಜಸ್ಟ್ 12.50, ಸ್ಟ್ರೈಕ್ ರೇಟ್ 116. ಆದರೆ 13ನೇ ಓವರ್ ಬಳಿಕ ಅಂದರೆ ಡೆತ್ ಓವರ್ ಗಳಲ್ಲಿ ಕಾರ್ತಿಕ್ ಕ್ರೀಸ್ ಗಿಳಿದ್ರೆ ಸಖತ್ ಡೇಂಜರಸ್. ಡೆತ್ ಓವರ್ ಗಳಲ್ಲಿ ಕಾರ್ತಿಕ್ ಸರಾಸರಿ 104 ರಷ್ಟಿದ್ದರೆ ಸ್ಟ್ರೈಕ್ ರೇಟ್ 171.
200ನೇ ಪಂದ್ಯ ಆಡಲಿರುವ ಕಿಂಗ್ ಕೊಹ್ಲಿ
ಆರ್ ಸಿಬಿ ಪರ ಕಳೆದ 14 ವರ್ಷಗಳಿಂದ ಆಡುತ್ತಿರುವ ವಿರಾಟ್ ಕೊಹ್ಲಿ ಅಬುಧಾಬಿಯಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಲಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ಕೊಹ್ಲಿ 200ನೇ ಪಂದ್ಯ ಆಡುತ್ತಿದ್ದಾರೆ. ಎಂ.ಎಸ್.ಧೋನಿ, ದಿನೇಶ್ ಕಾರ್ತಿಕ್, ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಬಳಿಕ 200 ಐಪಿಎಲ್ ಪಂದ್ಯ ಆಡಿದ 5ನೇ ಆಟಗಾರನಾಗಿ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೊಹ್ಲಿ ರನ್ ಬೇಟೆಯಲ್ಲೂ ದಾಖಲೆ ನಿರೀಕ್ಷೆ
ಬ್ಯಾಟಿಂಗ್ ನಲ್ಲಿ ಕಿಂಗ್ ಕೊಹ್ಲಿಗೆ ಯಾರೂ ಸರಿಸಮಾನರಿಲ್ಲ. ಐಪಿಎಲ್ ನಲ್ಲೂ ಕೊಹ್ಲಿ ಮಿಂಚಿದ್ದಾರೆ. ಟಿ20 ಪಂದ್ಯಗಳಲ್ಲೂ ಕೊಹ್ಲಿ ರನ್ ಶಿಖರವೇರಿದ್ದಾರೆ. ಆದರೆ ಇನ್ನು 71 ರನ್ ಗಳಿಸಿದ್ರೆ ಕೊಹ್ಲಿ 10 ಸಾವಿರ ಟಿ20 ರನ್ ಗಳಿಸಿದ 5ನೇ ಆಟಗಾರನಾಗುತ್ತಾರೆ. ಈಗಾಗಲೇ ಕ್ರಿಸ್ ಗೇಲ್, ಕಿರಾನ್ ಪೆÇಲ್ಲಾರ್ಡ್, ಶೋಯೆಬ್ ಮಲಿಕ್ ಮತ್ತು ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ್ದಾರೆ.
ಸಿಕ್ಸರ್ ಕಿಂಗ್ ಗಳು..!
ಆಂಡ್ರೆ ರಸೆಲ್ ಮತ್ತು ಎಬಿಡಿ ವಿಲಿಯರ್ಸ್ ಸಿಕ್ಸರ್ ಸಿಡಿಸೋದರಲ್ಲಿ ಪಂಟರ್ ಗಳು. 2019ರಿಂದ ಈಚೆಗೆ ಕೆಕೆಆರ್ ಮತ್ತು ಆರ್ ಸಿಬಿ ತಂಡಗಳು ಎದುರಾದಾಗ ಎಬಿಡಿ ಮತ್ತು ರಸೆಲ್ ಸಿಡಿಸಿದ ಸಿಕ್ಸರ್ ಗಳ ಸಂಖ್ಯೆ ಹುಬ್ಬೇರುವಂತೆ ಮಾಡುತ್ತದೆ. ರಸೆಲ್ 2019ರಿಂದ ಈಚೆಗೆ ಆರ್ ಸಿಬಿ ವಿರುದ್ಧ 19 ಸಿಕ್ಸರ್ ಸಿಡಿಸಿದ್ದರೆ ಡಿವಿಲಿಯರ್ಸ್ ಕೆಕೆಆರ್ ವಿರುದ್ಧ 13 ಸಿಕ್ಸರ್ ಸಿಡಿಸಿದ್ದಾರೆ.









