ಮೊದಲ ಎರಡು ಪಂದ್ಯಗಳಲ್ಲಿ ಸೋಲು, ಅದಾದ ಮೇಲೆ ಮುಂಬೈ ವಿರುದ್ಧ ಭರ್ಜರಿ ಗೆಲುವು, ಮತ್ತೆ ಕಪ್ ನಮ್ದೆ ಎನ್ನುತ್ತಿರುವ ರಾಯಲ್ ಚಾಲೆಂಜರ್ಸ್ ಈಗ ಮುಂದೆ ಈಗ ಬಿಗ್ ಟಾಸ್ಕ್ ಇದೆ.
ಮೊದಲ ಪಂದ್ಯದಲ್ಲಿ ಕಷ್ಟ ಪಟ್ಟು ಗೆದ್ದಮೇಲೆ, ಮುಂದಿನ ಎರಡು ಪಂದ್ಯ ಸೋತಿರುವ ರಾಜಸ್ಥಾನ ರಾಯಲ್ಸ್ ಸವಾಲು ಎದುರಿಸುತ್ತಿದೆ. ಪ್ಲೇ-ಆಫ್ ಲೆಕ್ಕಾಚಾರದಲ್ಲಿ ಎರಡೂ ತಂಡಗಳಿಗೆ ಈ ಪಂದ್ಯ ಪ್ರಮುಖವಾದರೂ, ರಾಯಲ್ಸ್ ಪಾಲಿಗೆ ಮಾಡು ಇಲ್ಲವೆ ಮಡಿ ಪಂದ್ಯ.
ರಾಯಲ್ ಚಾಲೆಂಜರ್ಸ್ ಗೆಲುವಿನ ಲಯಕ್ಕೆ ಮರಳಿದರೂ ರಾಜಸ್ಥಾನ ರಾಯಲ್ಸ್ನಷ್ಟೇ ಲಯ ತಪ್ಪಿದೆ. ನೈಟ್ ರೈಡರ್ಸ್ ವಿರುದ್ಧ 9 ವಿಕೆಟ್ ವಿಕೆಟ್ಗಳ ಸೋಲು ಮತ್ತು ಸಿಎಸ್ಕೆ ವಿರುದ್ಧ ಅನುಭವಿಸಿದ ಬೌಲಿಂಗ್ ಹಿನ್ನಡೆಯನ್ನು ಮರೆಯುವಂತಿಲ್ಲ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಬ್ಯಾಟಿಂಗ್ ಕೊಂಚ ಮಟ್ಟಿಗೆ ಕೈ ಕೊಟ್ಟಿತ್ತು. ಆದರೆ ಗ್ಲೆನ್ ಮ್ಯಾಕ್ಸ್ವೆಲ್. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ರನ್ ಬೇಟೆಯಲ್ಲಿ ಇರುವುದರಿಂದ ತಲೆನೋವು ಕಡಿಮೆ ಆಗಿದೆ. ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್ ಜೊತೆಗೆ ಚಹಲ್ ಕೂಡ ಆಟಕ್ಕೆ ಇಳಿದಿರುವುದು ನೆಮ್ಮದಿ ನೀಡಿದೆ.
ಇನ್ನು ರಾಯಲ್ಸ್ ಪ್ಲೇ-ಆಫ್ ಲೆಕ್ಕಾಚಾರ ಈ ಪಂದ್ಯದಲ್ಲಿ ಅಡಗಿದೆ. ಈ ಪಂದ್ಯವನ್ನು ಗೆದ್ದರೆ ಮಾತ್ರೆ ಅಂತಿಮ ನಾಲ್ಕರ ಘಟಕ್ಕೆ ಏರಲಿದೆ.
ಬ್ಯಾಟಿಂಗ್ನಲ್ಲಿ ಸ್ಯಾಮನ್ ಬಿಟ್ಟರೆ ಉಳಿದವರ ಕೊಡುಗೆ ಶೂನ್ಯ. ಬೌಲಿಂಗ್ನಲ್ಲೂ ಅಷ್ಟೇ ಹೇಳಿಕೊಳ್ಳುವ ಪ್ರದರ್ಶನವಿಲ್ಲ. ಜೊತೆಗೆ ಕಾರ್ತಿಕ್ ತ್ಯಾಗಿಯ ಗಾಯ ರಾಯಲ್ಸ್ ಚಿಂತೆಯನ್ನು ದುಪ್ಪಟ್ಟು ಮಾಡಿದೆ. ಆದರೂ ಲಿವಿಂಗ್ಸ್ಟೋವ್, ಲೆವಿಸ್ ಮತ್ತು ಸ್ಯಾಮ್ಸನ್ ಡೇಂಜರಸ್ ಆಟಗಾರರೇ.
ಸಂಭಾವ್ಯ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು
1. ವಿರಾಟ್ ಕೊಹ್ಲಿ, 2. ದೇವದತ್ ಪಡಿಕಲ್, 3. ಶ್ರೀಕರ್ ಭರತ್, 4. ಗ್ಲೆನ್ ಮ್ಯಾಕ್ಸ್ವೆಲ್, 5. ಎಬಿ ಡಿ ವಿಲಿಯಸ್, , 6. ಟಿಮ್ ಡೇವಿಡ್, 7. ಶಹಬಾಝ್ ಅಹ್ಮದ್, 8. ಕೈಲ್ ಜೇಮಿಸನ್, 9. ಹರ್ಷಲ್ ಪಟೇಲ್, 10. ಯುಜ್ವೆಂದ್ರ ಚಹಲ್, 11. ಮೊಹಮ್ಮದ್ ಸಿರಾಜ್
ರಾಜಸ್ಥಾನ ರಾಯಲ್ಸ್
1. ಎವಿನ್ ಲೆವಿಸ್, 2. ಯಶಸ್ವಿ ಜೈಸ್ವಾಲ್, 3 ಸಂಜು ಸ್ಯಾಮ್ಸನ್, 4. ಲಿಯಂ ಲಿವಿಂಗ್ಸ್ಟೋನ್, 5. ಮಹಿಪಾಲ್ ಲೊಮ್ರೊರ್, 6. ರಿಯಾನ್ ಪರಾಗ್, 7. ರಾಹುಲ್ ತೆವಾಟಿಯಾ, 8. ಕ್ರಿಸ್ ಮೊರಿಸ್, 9. ಚೇತನ್ ಸಕಾರಿಯಾ, 10. ಕಾರ್ತಿಕ್ ತ್ಯಾಗಿ, 11. ಮುಸ್ತಫಿಝುರ್ ರೆಹಮಾನ್









