ಐಪಿಎಲ್ 2021- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಳಾಪಟ್ಟಿ
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾಗಿದ. ಏಪ್ರಿಲ್ 9ರಂದು ಚೆನ್ನೈ ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸವಾಲು ಹಾಕಲಿದೆ.
ಹಾಗೇ ನೋಡಿದ್ರೆ ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಪ್ರತಿ ಬಾರಿಯೂ ಈ ಬಾರಿ ಕಪ್ ನಮ್ದೆ ಅಂತ ಅಭಿಮಾನಿಗಳು ಅಭಿಯಾನವನ್ನೇ ಮಾಡುತ್ತಿರುತ್ತಾರೆ. ಆದ್ರೆ ಆರ್ ಸಿಬಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆಟವನ್ನಾಡಿಲ್ಲ. ಆದ್ರೂ ಆರ್ ಸಿಬಿ ಮೇಲಿನ ಅಭಿಮಾನ ಮಾತ್ರ ಕಮ್ಮಿ ಇಲ್ಲ.
ಈ ಬಾರಿ ಹೊಸ ಹುರುಪಿನೊಂದಿಗೆ ಆರ್ ಸಿಬಿ ಮತ್ತೆ ಕಣಕ್ಕಿಳಿಯುತ್ತಿದೆ. ಆರ್ ಸಿಬಿ ತಂಡದಲ್ಲಿ ಈ ಬಾರಿ ಗ್ಲೇನ್ ಮ್ಯಾಕ್ಸ್ ವೆಲ್, ಡಾನ್ ಕ್ರಿಶ್ಚಿಯಾನ್ ಮತ್ತು ಕೈಲ್ ಜೇಮಿನ್ಸನ್ ನಂತಹ ಸ್ಟಾರ್ ಆಟಗಾರರಿದ್ದಾರೆ. ಆದ್ರೆ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಅನ್ನೋದನ್ನು ನೋಡಬೇಕಿದೆ.
ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ತಂಡ ತನ್ನ ತವರು ನೆಲ ಬೆಂಗಳೂರಿನಲ್ಲಿ ಆಡುತ್ತಿಲ್ಲ. ಎಲ್ಲ ಪಂದ್ಯಗಳನ್ನಯ ತಟಸ್ಥ ತಾಣದಲ್ಲಿ ಆಡುತ್ತಿದೆ. ಹೀಗಾಗಿ ಅಭಿಮಾನಿಗಳಿಗೆ ಪಂದ್ಯವನ್ನು ಮೈದಾನದಲ್ಲಿ ನೋಡುವ ಭಾಗ್ಯವಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಳಾಪಟ್ಟಿ
ಏಪ್ರಿಲ್ 9, ಚೆನ್ನೈ- ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ – ರಾತ್ರಿ 7.30ಕ್ಕೆ
ಏಪ್ರಿಲ್ -14- ಚೆನ್ನೈ – ಆರ್ ಸಿಬಿ ಮತ್ತು ಸನ್ ರೈಸರ್ಸ್ ಬೆಂಗಳೂರು – ರಾತ್ರಿ 7.30ಕ್ಕೆ
ಏಪ್ರಿಲ್ 18- ಮುಂಬೈ – ಆರ್ ಸಿಬಿ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ – ಮಧ್ಯಾಹ್ನ 3.30ಕ್ಕೆ
ಏಪ್ರಿಲ್ 22- ಮುಂಬೈ – ಆರ್ ಸಿಬಿ ಮತ್ತು ರಾಜಸ್ತಾನ ರಾಯಲ್ಸ್ – ರಾತ್ರಿ 7.30ಕ್ಕೆ
ಏಪ್ರಿಲ್ 25- ಮುಂಬೈ – ಆರ್ ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ -ಮಧ್ಯಾಹ್ನ 3.30ಕ್ಕೆ
ಏಪ್ರಿಲ್ 27- ಅಹಮದಾಬಾದ್ – ಆರ್ ಸಿಬಿ ಮತ್ತು ದೆಹಲಿ ಕ್ಯಾಪಿಟಲ್ಸ್ – ರಾತ್ರಿ 7.30ಕ್ಕೆ
ಏಪ್ರಿಲ್ 30- ಅಹಮದಾಬಾದ್ – ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ – ರಾತ್ರಿ 7.30ಕ್ಕೆ
ಮೇ 3- ಅಹಮದಾಬಾದ್ – ಆರ್ ಸಿಬಿ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ – ರಾತ್ರಿ 7.30ಕ್ಕೆ
ಮೇ 6- ಅಹಮದಾಬಾದ್ – ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ – ರಾತ್ರಿ 7.30ಕ್ಕೆ
ಮೇ 9- ಕೊಲ್ಕತ್ತಾ – ಆರ್ ಸಿಬಿ ಮತ್ತು ಸನ್ ರೈಸರ್ಸ್ ಹೈದ್ರಬಾದ್ – ರಾತ್ರಿ 7.30ಕ್ಕೆ
ಮೇ 14- ಕೊಲ್ಕತ್ತಾ – ಆರ್ ಸಿಬಿ ಮತ್ತು ದೆಹಲಿ ಕ್ಯಾಪಿಟಲ್ಸ್ – ರಾತ್ರಿ 7.30ಕ್ಕೆ
ಮೇ 16- ಕೊಲ್ಕತ್ತಾ – ಆರ್ ಸಿಬಿ ಮತ್ತು ರಾಜಸ್ತಾನ ರಾಯಲ್ಸ್ – ಮಧ್ಯಾಹ್ನ 3.30ಕ್ಕೆ
ಮೇ 20- ಕೊಲ್ಕತ್ತಾ – ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ – ರಾತ್ರಿ 7.30ಕ್ಕೆ
ಮೇ 23- ಕೊಲ್ಕತ್ತಾ – ಆರ್ ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ – ರಾತ್ರಿ 7.30ಕ್ಕೆ