ಐಪಿಎಲ್ 2021- ಆರ್ ಸಿಬಿಯ ಚಾಹಲ್ ಗೆ ಡಬಲ್ ಧಮಾಕ… !
ಯುಜುವೇಂದ್ರ ಚಾಹಲ್. ಭಾರತೀಯ ಕ್ರಿಕೆಟ್ ನ ಅದ್ಭುತ ಪ್ರತಿಭೆ. ಚಾಣಕ್ಯ ಸ್ಪಿನ್ ಬೌಲರ್ ಆಗಿರುವ ಚಾಹಲ್ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಮಿಂಚು ಹರಿಸಿದ್ದಾರೆ. ಎದುರಾಳಿ ಬ್ಯಾಟ್ಸ್ ಮೆನ್ ಗಳನ್ನು ತಬ್ಬಿಬ್ಬುಗೊಳಿಸುವ ಕಲೆ ಚಾಹಲ್ ಚೆನ್ನಾಗಿಯೇ ಗೊತ್ತು. ಹೀಗಾಗಿಯೇ ಚಾಹಲ್ ಚುಟುಕು ಕ್ರಿಕೆಟ್ ನಲ್ಲಿ ಯಶ ಸಾಧಿಸಿರೋದು.
ಅಂದ ಹಾಗೇ 14ನೇ ಐಪಿಎಲ್ ಟೂರ್ನಿಯ ಮೊದಲ ಪಂದ್ಯ ಚಾಹಲ್ಗೆ ಅವಿಸ್ಮರಣೀಯ ಪಂದ್ಯವಾಗಿತ್ತು. 2014ರಿಂದ ಆರ್ ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ಯುಜುವೇಂದ್ರ ಚಾಹಲ್ ಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ನೂರನೇ ಐಪಿಎಲ್ ಐಪಿಎಲ್ ಪಂದ್ಯವಾಗಿತ್ತು. 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಒಂದು ಪಂದ್ಯವನ್ನಾಡಿದ್ದ ಚಾಹಲ್ ಆರ್ ಸಿಬಿ ಪರ 99 ಪಂದ್ಯಗಳನ್ನು ಆಡಿದ್ದಾರೆ.
ಅಷ್ಟೇ ಅಲ್ಲ, ಯುಜುವೇಂದ್ರ ಚಾಹಲ್ ಅವರಿಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ 200ನೇ ಟಿ-ಟ್ವೆಂಟಿ ಪಂದ್ಯವಾಗಿತ್ತು. 19ರ ಹರೆಯದಲ್ಲಿ ಪ್ರಥಮ ದರ್ಜೆಯ ಪಂದ್ಯವನ್ನಾಡಿರುವ ಚಾಹಲ್ ಒಟ್ಟು 200 ಪಂದ್ಯಗಳಲ್ಲಿ 222 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಇನ್ನು ಕಳೆದ ಬಾರಿಯ ಐಪಿಎಲ್ ನಲ್ಲಿ ಯುಜುವೇಂದ್ರ ಚಾಹಲ್ ಅವರು 15 ಪಂದ್ಯಗಳಲ್ಲಿ 21 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಚುಟುಕು ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ವನ್ನು ನೀಡುತ್ತಿದ್ದ ಯುಜುವೇಂದ್ರ ಚಾಹಲ್ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಂಕಾಗಿದ್ದಾರೆ. ಆದ್ರೂ ಈ ಬಾರಿಯ ಐಪಿಎಲ್ ನಲ್ಲಿ ಚಾಹಲ್ ಆರ್ ಸಿಬಿ ತಂಡದ ಟ್ರಂಪ್ ಕಾರ್ಡ್ ಬೌಲರ್ .