RCB ಗೆ ABD ರಿಟರ್ನ್ಸ್..!!!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎವರ್ ಗ್ರೀನ್ ಹೀರೋ, ಆಪದ್ಭಾಂಧವ ಖ್ಯಾತಿಯ ಮಿಸ್ಟರ್ 360 ಎ ಬಿ ಡಿ ವಿಲಿಯರ್ಸ್ , ಮತ್ತೊಮ್ಮೆ ಆರ್ ಸಿಬಿ ಪಾಳಯ ಸೇರೋದು ಪಕ್ಕಾ ಆಗಿದೆ.
ಕಳೆದ ವರ್ಷ ಐಪಿಎಲ್ ಟೂರ್ನಿ ಮುಗಿದ ಬಳಿಕ ಎಬಿಡಿವಿಲಿಯರ್ಸ್, ಎಲ್ಲಾ ರೀತಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.
ಆದ್ರೆ ಇದೀಗ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಾಪಸ್ ಆಗಲು ನಿರ್ಧಾರ ಮಾಡಿದ್ದಾರಂತೆ.
ಹೌದು…! ಕಳೆದ ವರ್ಷದ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಗೆ ನಿವೃತ್ತಿ ಘೋಷಿಸಿದರು.
ಈ ವೇಳೆ ಆರ್ ಸಿಬಿಯ ಮುಂದಿನ ನಾಯಕ ಎಬಿಡಿ ವಿಲಿಯರ್ಸ್ ಅಂತಾಲೇ ಪ್ರಚಾರ ನಡೆದಿತ್ತು. ಬೆಂಗಳೂರು ತಂಡದ ಅಭಿಮಾನಿಗಳು ಕೂಡ ಇದನ್ನೇ ನಿರೀಕ್ಷಿಸಿದ್ದರು.
ಆದ್ರೆ ಕ್ರಿಕೆಟ್ ಜಗತ್ತಿನ ಏಲಿಯನ್ ಎಬಿಡಿ ವಿಲಿಯರ್ಸ್ ಮಾತ್ರ ಎಲ್ಲರಿಗೂ ಶಾಕ್ ನೀಡಿ ಐಪಿಎಲ್ ಗೆ ಗುಡ್ ಬೈ ಹೇಳಿದ್ದರು. ಇದು ಆರ್ ಸಿಬಿ ಅಭಿಮಾನಿಗಳ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿತ್ತು.
ಯಾಕಂದರೇ ಈಗಾಗಲೇ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದು, ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳಲಾಗುತ್ತಿರಲಿಲ್ಲ.
ಇದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಎಬಿಡಿ ನಿವೃತ್ತಿ ಘೋಷಿಸಿದ್ದು, ಆರ್ ಸಿಬಿಯನ್ಸ್ ಕಂಗಾಲಾಗುವಂತೆ ಮಾಡಿತ್ತು. ಇಲ್ಲಿಂದ ಶುರುವಾದ ಆರ್ ಸಿಬಿಯ ಮುಂದಿನ ನಾಯಕನ ಹುಡುಕಾಟ ಈಗಲೂ ಮುಂದುವರೆದಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಆರ್ ಸಿಬಿ ತಂಡದ ನಾಯಕ ಯಾರು ಅಂತಾ ಘೋಷಣೆ ಆಗುತ್ತೆ. ಅದಕ್ಕಾಗಿ ಎಲ್ಲರು ಎದುರು ನೋಡುತ್ತಿದ್ದಾರೆ.
ಇದಕ್ಕೂ ಮೊದಲು ಈಗ ಆರ್ ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ವೊಂದು ಸಿಕ್ಕಿದೆ.
ಅದು ಏನಂದರೇ ಆರ್ ಸಿಬಿ ಆಪದ್ಭಾಂಧವ ಎ ಬಿ ಡಿ ವಿಲಿಯರ್ಸ್ ಮತ್ತೆ ರೆಡ್ ಅಂಡ್ ಗೋಲ್ಡ್ ಕ್ಯಾಂಪ್ ಸೇರಲಿದ್ದಾರೆ. ಇದು ಆಟಗಾರನಾಗಿಲ್ಲ ಅಲ್ಲ ಬದಲಿಗೆ ಮೆಂಟರ್ ಆಗಿ…..!!!
2022ರ ಸೀಸನ್ ಗಾಗಿ ಡೆವಿಲಿಯರ್ಸ್ ಆರ್ ಸಿಬಿಯ ಮೆಂಟರ್ ಆಗಿ ತಂಡ ಸೇರಿಕೊಳ್ಳಲಿದ್ದಾರಂತೆ. ಈಗೊಂದು ಸುದ್ದಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೂಲಗಳಿಂದ ತಿಳಿದುಬಂದಿದೆ.
ಅಂದಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾರ್ಚ್ 12 ರಂದು ಕೆಲವು ಘೋಷಣೆಗಳನ್ನು ಮಾಡುವುದಾಗಿ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದೆ.
ಮಾರ್ಚ್ 12 ರಂದು ತಂಡದ ನಾಯಕ, ಲೋಗೋ, ಜರ್ಸಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಫ್ರಾಂಚೈಸಿ ಕ್ಲಾರಿಟಿ ಕೊಡಲಿದೆ. ಹೀಗಾಗಿ ಆರ್ ಸಿಬಿ ಅಭಿಮಾನಿಗಳು ಸೇರಿದಂತೆ ಐಪಿಎಲ್ ನ ವೀಕ್ಷಕರೆಲ್ಲರೂ ಮಾರ್ಚ್ 12ಕ್ಕಾಗಿ ಕಾಯುತ್ತಿದ್ದಾರೆ.
ipl-2022-ab-de-villiers-could-reunite-rcb









