IPL 2022 | ಮೆಗಾ ಹರಾಜು ಪ್ರಕ್ರಿಯೆ ಹೇಗಿರಲಿದೆ..?
ಐಪಿಎಲ್ ಮೆಗಾ ಹರಾಜಿಗೆ ಸಮಯ ಹತ್ತಿರವಾಗುತ್ತಿದೆ. ಹರಾಜಿಗೆ ಇನ್ನು ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಬೆಂಗಳೂರಿನಲ್ಲಿ ನಾಳೆ ಮತ್ತು ನಾಡಿದ್ದು ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ಹಿನ್ನಲೆಯಲ್ಲಿ ಹರಾಜಿಗೆ ಸಂಬಂಧಿಸಿದ ಒಂದು ಮೆಗಾ ಅಪ್ ಡೇಟ್ ಬಹಿರಂಗವಾಗಿದೆ. ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಮೆಗಾ ಹರಾಜಿನ ಮೊದಲ ದಿನ 590 ಆಟಗಾರರ ಪೈಕಿ, 161 ಮಂದಿ ಆಟಗಾರರ ಹರಾಜು ಮಾತ್ರ ನಡೆಸಲು ತೀರ್ಮಾನಿಸಿದೆ.
ಅಲ್ಲದೇ ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್, ಶಿಖರ್ ಧವನ್, ಕಗಿಸೋ ರಬಾಡ ಸೇರಿದಂತೆ ಆರು ಮಂದಿ ಸ್ಟಾರ್ ಆಟಗಾರರು ಮೊದಲ ದಿನದ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ಹರಾಜಿನಲ್ಲಿ 10 ಮಂದಿ ಆಟಗಾರರನ್ನೊಳಗೊಂಡ ಮಾರ್ಕ್ಯೂ ಸೆಟ್ ನೊಂದಿಗೆ ಆರಂಭವಾಗಲಿದೆ. ಈ ಸೆಟ್ ನಲ್ಲಿ ಮೋಸ್ಟ್ ವಾಂಟೇಟ್ ಆಟಗಾರರು ಇರುತ್ತಾರೆ.
ಮಾರ್ಕ್ಯೂ ಸೆಟ್ : ಅಶ್ವಿನ್, ಟ್ರೆಂಟ್ ಬೋಲ್ಡ್, ಪಾಟ್ ಕಮಿನ್ಸ್, ಕ್ವಿಂಟನ್ ಡಿ ಕಾಕ್, ಶಿಖರ್ ಧವನ್, ಫಾಫ್ ಡು ಪ್ಲೆಸಿಸ್, ಶ್ರೇಯಸ್, ಕಗಿಸೋ ರಬಾಡ, ಮೊಹ್ಮದ್ ಶಮಿ, ಡೆವಿಡ್ ವಾರ್ನರ್ ಹೆಸರುಗಳು ಇದೆ ಎಂದು ಹೇಳಲಾಗುತ್ತಿದೆ.
ಮೆಗಾ ಹರಾಜು ವಿಧಾನ ಹೀಗಿದೆ..
10 ಮಂದಿಯ ಹೆಸರುಗಳಿರುವ ಮಾರ್ಕ್ಯೂ ಸೆಟ್ ನೊಂದಿಗೆ ಹರಾಜು ಶುರುವಾಗಲಿದೆ.
ಮಾರ್ಕ್ಯೂ ಸೆಟ್ ಅಲ್ಲದೇ ಆಟಗಾರರನ್ನು ಪ್ರತ್ಯೇಕ ಆಧಾರದಲ್ಲಿ ವಿವಿಧ ಸೆಟ್ ಗಳಲ್ಲಿ ವಿಭಜಿಸಲಾಗಿದೆ.
ಮಾರ್ಕ್ಯೂ ಸೆಟ್ ನೊಂದಿಗೆ 62 ಸೆಟ್ ಗಳು ಇವೆ.
ಬ್ಯಾಟರ್ಸ್, ಆಲ್ ರೌಂಡರ್ಸ್, ವಿಕೆಟ್ ಕೀಪರ್, ಫಾಸ್ಟ್ ಬೌಲರ್, ಸ್ಪಿನ್ ಬೌಲರ್ ಹೀಗೆ ಮಾರ್ಕ್ಯೂ ವಿಂಗಡಿಸಲಾಗಿದೆ.
ಅನ್ ಕ್ಯಾಪ್ಡ್ ಪ್ಲೇಯರ್ಸ್ ಆಕ್ಷನ್ ಸಿಕ್ವೇನ್ಸ್ ಅಂತಿಮ ಸೆಟ್ ನಲ್ಲಿ ಇರುತ್ತಾರೆ.









