IPL 2022 Mega Auction – ಹರಾಜು ಪ್ರಕ್ರಿಯೆ ವೇಳೆ ಕುಸಿದು ಬಿದ್ದ ಹ್ಯೂ ಎಡ್ಮೀಡ್ಸ್
ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಹರಾಜು ಪ್ರಕ್ರಿಯೇ ವೇಳೆ ಹರಾಜುದಾರ ಹ್ಯೂ ಎಡ್ಮೀಡ್ಸ್ ಕುಸಿದು ಬಿದ್ದ ಘಟನೆ ನಡೆದಿದೆ.
ಶ್ರೀಲಂಕಾದ ವನಿಂದು ಹಸರಂಗಾ ಅವರನ್ನು ಹರಾಜು ಹಾಕುವ ವೇಳೆ ಹಗ್ ಎಡ್ಮೀಡ್ಸ್ ನೆಲಕ್ಕೆ ಕುಸಿದಿದ್ದರಿಂದ ಫ್ರಾಂಚೈಸಿ ಮಾಲೀಕರು ಆಘಾತಕ್ಕೊಳಗಾಗಿದ್ದಾರೆ. ಶ್ರೀಲಂಕಾದ ಸ್ಪಿನ್ನರ್‌ಗಾಗಿ ತೀವ್ರವಾದ ಬಿಡ್ಡಿಂಗ್ ಯುದ್ಧ ನಡೆಯುತ್ತಿತ್ತು. ಈ ವೇಳೆ ಫ್ರಾಂಚೈಸಿಗಳ ಹರಾಜು ಖಚಿತಪಡಿಸಿಕೊಳ್ಳುತ್ತಿದ್ದ ಎಡ್ಮೀಡ್ಸ್ ಕುಸಿದು ಬಿದ್ದರು.
ಎಡ್ಮೀಡ್ಸ್ ವೈದ್ಯಕೀಯ ಸಹಾಯ ನೀಡಲಾಗಿದೆ ಕ್ಷೇಮವಾಗಿದದ್ದಾರೆ ಎಂದು ತಿಳಿದುಬಂದಿದೆ. ಎಡ್ಮೀಡ್ಸ್ ಚೆನ್ನಾಗಿದ್ದಾರೆ ಆದರೆ IPL 2022 ಹರಾಜು ವೇಲೆ ಎತ್ತರದಿಂದ ಬಿದ್ದ ನಂತರ ಸ್ವಲ್ಪ ಅಸ್ವಸ್ಥರಾದರು, ಅವರಿಗೆ ವೈದ್ಯಕೀಯ ನೆರವು ನೀಡಲಾಯಿತು ಎಂದು ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ಸ್ಪಷ್ಟಪಡಿಸಿದೆ.
ಈಗ ಹ್ಯೂ ಎಡ್ಮಿಡ್ಸ್ ಬದಲಿಗೆ ಚಾರು ಶರ್ಮಾ ಹರಾಜು ನಡೆಸುತ್ತಿದ್ದಾರೆ. 2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಇಒ ಆಗಿದ್ದರು. ಚಾರು ಶರ್ಮಾ ಭಾರತೀಯ ಕಾಮೆಂಟೇಟರ್ ಆಗಿರುವುದರ ಜೊತೆಗೆ ಕ್ವಿಜ್ ಮಾಸ್ಟರ್ ಕೂಡ ಆಗಿದ್ದಾರೆ.