IPL 2022 : ಐಪಿಎಲ್ ನಲ್ಲಿ ಅಕ್ಷರ್ ಪಟೇಲ್ ಅಪರೂಪದ ದಾಖಲೆ
ದೆಹಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಕ್ಷರ್ ಪಟೇಲ್ ಐಪಿಎಲ್ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.
ಅಕ್ಷರ್ ಐಪಿಎಲ್ನಲ್ಲಿ 100 ವಿಕೆಟ್ ಪಡೆದ ಎರಡನೇ ಎಡಗೈ ಸ್ಪಿನ್ನರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ಐಪಿಎಲ್-2022 ರ ಅಂಗವಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡುವ ಮೂಲಕ ಅಕ್ಷರ್ ಈ ಸಾಧನೆ ಮಾಡಿದರು.
ಈ ಹಿಂದೆ ಜಡೇಜಾ ಈ ದಾಖಲೆ ಮಾಡಿದ್ದರು. ಅದೇ ರೀತಿ ಐಪಿಎಲ್ ನಲ್ಲಿ 1000 ರನ್ ಜೊತೆಗೆ 100 ವಿಕೆಟ್ ಪಡೆದ ಆಟಗಾರರ ಪಟ್ಟಿಗೆ ಅಕ್ಷರ್ ಪಟೇಲ್ ಸೇರಿದ್ದಾರೆ.
ಅಕ್ಷರ್ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎನಿಸಿಕೊಂಡರು.
ಇದಕ್ಕೂ ಮುನ್ನ ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ ಮತ್ತು ಸುನಿಲ್ ನರೈನ್ ಈ ಸಾಧನೆ ಮಾಡಿದ್ದರು.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ.. ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 17 ರನ್ಗಳ ಜಯ ಸಾಧಿಸಿದೆ. ipl-2022-axar-patel-completes-100-ipl-wickets