ಐಪಿಎಲ್ ಇತಿಹಾಸದಲ್ಲಿ ಚಹಲ್ ಹೊಸ ಚರಿತ್ರೆ
ರಾಜಸ್ಥಾನ್ ರಾಯಲ್ಸ್ ಬೌಲರ್ ಯಜ್ವೇಂದ್ರ ಚಹಾಲ್ ಐಪಿಎಲ್ 2022 ರಲ್ಲಿ ಸಂಚಲನ ಮೂಡಿಸಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಚಹಲ್ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್ ಪಡೆದಿದ್ದಾರೆ.
ಕೆಕೆಆರ್, 16ನೇ ಓವರ್‌ವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.
ಆದರೆ 17ನೇ ಓವರ್ ಬೌಲಿಂಗ್ ದಾಳಿಗಿಳಿದ ಯುಜು಼ವೇಂದ್ರ ಚಹಲ್(4-0-40-5) ಪಂದ್ಯದ ದಿಕ್ಕನ್ನೇ ಬದಲಿಸಿದರು.
17ನೇ ಓವರ್‌ನಲ್ಲಿ ಕೇವಲ 2 ರನ್ ನೀಡಿ ಹ್ಯಾಟ್ರಿಕ್ ವಿಕೆಟ್ ಸಹಿತ ನಾಲ್ಕು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಿಂಚಿದರು.
ಇನ್ನಿಂಗ್ಸ್‌ನ ಮೊದಲ ಬಾಲ್‌ನಲ್ಲಿ ವೆಂಕಟೇಶ್ ಅಯ್ಯರ್(6) ಹಾಗೂ 4ನೇ ಬಾಲ್‌ನಲ್ಲಿ ಶ್ರೇಯಸ್ ಅಯ್ಯರ್(85), 5ನೇ ಬಾಲ್‌ನಲ್ಲಿ ಶಿವಂ ಮಾವಿ(0) ಹಾಗೂ 6ನೇ ಬಾಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್(0) ವಿಕೆಟ್ ಕಬಳಿಸುವ ಮೂಲಕ 2022ರ ಐಪಿಎಲ್‌ನ ಮೊದಲ ಹ್ಯಾಟ್ರಿಕ್ ಪಡೆದರು.
ಇದು ಐಪಿಎಲ್ ಇತಿಹಾಸದಲ್ಲಿ 21 ನೇ ಹ್ಯಾಟ್ರಿಕ್ ಆಗಿದೆ. ಚಹಲ್ ರಾಜಸ್ಥಾನ್ ರಾಯಲ್ಸ್ ಪರ ಹ್ಯಾಟ್ರಿಕ್ ಗಳಿಸಿದ ಐದನೇ ಬೌಲರ್ ಆಗಿದ್ದಾರೆ.
ಇದಕ್ಕೂ ಮುನ್ನ ರಾಜಸ್ಥಾನದ ಅಜಿತ್ ಚಾಂಡಿಲಾ, ಪ್ರವೀಣ್ ತಾಂಬೆ, ಶೇನ್ ವ್ಯಾಟ್ಸನ್ ಮತ್ತು ಶ್ರೇಯಸ್ ಗೋಪಾಲ್ ಈ ಸಾಧನೆ ಮಾಡಿದ್ದರು.
ಚಹಲ್ ಐಪಿಎಲ್ ಇತಿಹಾಸದಲ್ಲಿ ಐದು ವಿಕೆಟ್ ಪಡೆದ 25ನೇ ಬೌಲರ್ ಕೂಡ ಆಗಿದ್ದಾರೆ.
ಆದರೆ, ಒಂದೇ ಪಂದ್ಯದಲ್ಲಿ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆಯನ್ನು ಚಹಲ್ ಬರೆದಿದ್ದಾರೆ. ipl-2022-chahal-record-taking-hat-trick-5-wicket-haul-single-match









