IPL 2022 | ಮೊದಲ ಪಂದ್ಯದಲ್ಲಿ ಗುದ್ದಾಡೋರು ಯಾರು..?
ಐಪಿಎಲ್-2022 ಮಾರ್ಚ್ 26 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರಾರಂಭವಾಗಲಿದೆ. ಇದಕ್ಕೆ ಸಂಬಂಧಿಸಿದ ವೇಳಾಪಟ್ಟಿಯನ್ನು ಬಿಸಿಸಿಐ ಶೀಘ್ರದಲ್ಲಿಯೇ ಪ್ರಕಟಿಸಲಿದೆ.
ಐಪಿಎಲ್ನ 15ನೇ ಸೀಸನ್ ಲೀಗ್ ಪಂದ್ಯಗಳು ಎಲ್ಲಾ ಮೂರು ಸ್ಥಳಗಳಲ್ಲಿ ನಡೆಯಲಿವೆ.
ಬಿಸಿಸಿಐ ಈಗಾಗಲೇ 10 ತಂಡಗಳೊಂದಿಗೆ ಐಪಿಎಲ್ ಹೊಸ ರೂಲ್ಸ್ ಗಳನ್ನು ಬಿಡುಗಡೆ ಮಾಡಿದೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ.
ಸಿಎಸ್ಕೆ ಗ್ರೂಪ್-ಬಿಯಲ್ಲಿದ್ದರೆ.. ಕೆಕೆಆರ್ ಗ್ರೂಪ್-ಎ ಯಲ್ಲಿದೆ.
ಆದರೆ, ಲೀಗ್ ಹಂತದಲ್ಲಿ ಉಭಯ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗಲಿವೆ.
IPL-2022 ಋತುವಿನಲ್ಲಿ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಗುಂಪು-ಎಯಲ್ಲಿ ಐದು ತಂಡಗಳು ಮತ್ತು ಗುಂಪು-ಬಿಯಲ್ಲಿ ಐದು ತಂಡಗಳಿವೆ.
ipl-2022-chennai-super-kings-take-kolkata-knight-riders-first match









