CSK vs PBKS | ಚೆನ್ನೈ ಮತ್ತು ಪಂಜಾಬ್ ಹೆಡ್ ಟು ಹೆಡ್ ದಾಖಲೆ
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ 11ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ. ಬ್ರಬೋರ್ನ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಚೆನ್ನೈ ತಂಡ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ಇದೇ ಮೊದಲ ಬಾರಿಗೆ ಚೆನ್ನೈ ತಂಡವನ್ನು ಮುನ್ನಡೆಸುತ್ತಿರುವ ಜಡೇಜಾ ನಾಯಕತ್ವದ ಜೊತೆಗೆ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಮಂಕಾದಂತೆ ಕಾಣಿಸುತ್ತಿದೆ. ಇತ್ತ ಆರಂಭಕ ಆಟಗಾರ ರುತುರಾಜ್ ಬ್ಯಾಟಿಂಗ್ ವೈಫಲ್ಯದ ಜೊತೆಗೆ ವಿಕೆಟ್ ಟೇಕಿಂಗ್ ಬೌಲರ್ ನ ಕೊರತೆ ತಂಡದ ಮೇಲೆ ಪರಿಣಾಮ ಬೀರುತ್ತಿದೆ. ಆದ್ರೆ ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ರಾಯುಡು,ಧೋನಿ ಒಳ್ಳೆ ಟಚ್ ನಲ್ಲಿ ಕಾಣಿಸುತ್ತಿದ್ದಾರೆ.
ಇನ್ನು ಪಂಜಾಬ್ ತಂಡ ಬಲಿಷ್ಟವಾಗಿ ಕಾಣಿಸುತ್ತಿದೆ. ಮಯಾಂಕ್, ಶಿಖರ್ ಉತ್ತಮ ಆರಂಭ ನೀಡುತ್ತಿದ್ದಾರೆ. ಜೊತೆಗೆ ಮಿಡಲ್ ಆರ್ಡರ್ ಕೂಡ ಬಲಿಷ್ಠವಾಗಿದೆ. ಬೌಲಿಂಗ್ ನಲ್ಲಿ ರಬಾಡ, ಅರ್ಷದೀಪ್ ಮಿಂಚುತ್ತಿದ್ದಾರೆ.
ಹೀಗಾಗಿ ಇಂದಿನ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿ ಇರಲಿದೆ.
ಹೆಡ್ ಟು ಹೆಡ್ ದಾಖಲೆ ನೋಡೋದಾದ್ರೆ ;
ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಚೆನ್ನೈ ಮತ್ತು ಪಂಜಾಬ್ ತಂಡಗಳು 26 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದುಕೊಂಡಿದೆ. ಸಿಎಸ್ಕೆ 16 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಪಂಜಾರ್ 10 ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಕಳೆದ ಐದು ಪಂದ್ಯದಲ್ಲಿ ಚೆನ್ನೈ ತಂಡ ಮೂರು ಬಾರಿ ಗೆದ್ದಿದ್ದರೇ ಪಂಜಾಬ್ 2 ಬಾರಿ ಗೆಲುವಿನ ನಗೆ ಬೀರಿದೆ. ಕಳೆದ ವರ್ಷ ಐಪಿಎಲ್ ನಲ್ಲಿ ತಲಾ ಒಂದೊಂದು ಪಂದ್ಯವನ್ನ ಉಭಯ ತಂಡಗಳು ಗೆದ್ದಿವೆ.









