IPL 2022 | ಚೆನ್ನೈ ಸೂಪರ್ ಕಿಂಗ್ಸ್ ಗೆ ಗುಡ್ ನ್ಯೂಸ್..!!!
ಚೆನ್ನೈ ನಾಯಕತ್ವದಿಂದ ಧೋನಿ ಕೆಳಗಿಳಿದಿರುವುದರಿಂದ ಬೇಸರದಲ್ಲಿರುವ ಸಿಎಸ್ ಕೆ ಅಭಿಮಾನಿಗಳಿಗೆ ಮೊಯಿನ್ ಅಲಿ ಮೂಲಕ ಗುಡ್ ನ್ಯೂಸ್ ಸಿಕ್ಕಿದೆ.
ವಿಸಾ ಸಮಸ್ಯೆಯಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಮೋಯಿನ್ ಅಲಿ ಭಾರತಕ್ಕೆ ಬರೋದು ಕಷ್ಟವಾಗಿತ್ತು.
ಹೀಗಾಗಿ ಸಿಎಸ್ ಕೆ ಅಭಿಮಾನಿಗಳು ತುಸು ಬೇಸರದಲ್ಲಿದ್ದರು. ಇದೀಗ ಮೊಯಿನ್ ಅಲಿ ಭಾರತಕ್ಕೆ ಬಂದಿಳಿದಿದ್ದಾರೆ.
ಆದ್ರೆ ಮೊಯಿನ್ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಿಂದ ದೂರ ಉಳಿಯಲಿದ್ದಾರೆ.
ಸದ್ಯ ಮುಂಬೈಗೆ ಬಂದಿರುವ ಮೊಯಿನ್ ಕ್ವರಂಟೈನ್ ಆಗಲಿದ್ದಾರೆ.
ಸದ್ಯ ಧೋನಿ ನಾಯಕತ್ವದಿಂದ ಕೆಳಗಿಳಿದಿರುವುದರಿಂದ ಚೆನ್ನೈ ತಂಡ ಇದೇ ಅವರ ಕೊನೆಯ ಐಪಿಎಲ್ ಆಗುವುದು ಬಹುತೇಕ ಖಚಿತವಾಗಿದೆ.
ಹೀಗಾಗಿ ಅವರಿಗೆ ಗೆಲುವಿನ ಹುಡುಗೊರೆ ಕೊಡಬೇಕು ಎಂದು ಫ್ರಾಂಚೈಸಿ ಭಾವಿಸಿದೆ.
ಅದಕ್ಕಾಗಿ ಮೊಯಿನ್ ಅಲಿ ಪ್ರದರ್ಶನ ಪ್ರಮುಖ ಪಾತ್ರ ವಹಿಸಲಿದೆ.
ಮೊಯಿನ್ ಅಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ನಲ್ಲಿ ಪಂದ್ಯದ ಗತಿಯನ್ನ ಬದಲಿಸಬಲ್ಲರು.
ಅದೇ ರೀತಿ ಮಾರ್ಚ್ 26 ರಂದು (ಶನಿವಾರ) ವಾಂಖೆಡೆಯಲ್ಲಿ ಸಿಎಸ್‌ಕೆ ತನ್ನ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೆಣಸಲಿದೆ. IPL 2022 Good news for chennai super kings fans









