ಗುಜರಾತ್ vs ಬೆಂಗಳೂರು – ಟಾಸ್ ಗೆದ್ದ ಆರ್ ಸಿ ಬಿ ಬ್ಯಾಟಿಂಗ್ ಆಯ್ಕೆ…
ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ IPL ಪಂದ್ಯದಲ್ಲಿ ಟಾಸ್ ಗೆದ್ದ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರು ಪಂದ್ಯದಲ್ಲಿ ಆರ್ ಸಿ ಬಿ ಈ ಋತುವಿನ ಬಲಿಷ್ಠ ಟೀಮ್ ಜೊತೆ ಜಿದ್ದಿಗಿಳಿಯಲಿದೆ. ಎಂಟು ಪಂದ್ಯಗಳಲ್ಲಿ ಏಳನ್ನು ಗೆದ್ದು ಗುಜರಾತ್ ಅಗ್ರಸ್ಥಾನದಲ್ಲಿದೆ. ಉತ್ತಮ ಆರಂಭದ ನಂತರವೂ ಕಳೆದ ಕೆಲ ಪಂದ್ಯಗಳಲ್ಲಿ ಆರ್ ಸಿ ಬಿ ಹಳಿ ತಪ್ಪುತ್ತಿದೆ.
ಎರಡೂ ತಂಡಗಳಲ್ಲಿ ಪವರ್ ಹಿಟ್ಟರ್ ಬ್ಯಾಟ್ಸ್ ಮನ್ ಗಳು ಹಾಗೂ ವಿಕೆಟ್ ಟೇಕಿಂಗ್ ಬೌಲರ್ ಗಳು ಇರುವುದರಿಂದ ಪಂದ್ಯ ಕುತೂಹಲ ಮೂಡಿಸಿದೆ.
ಎರಡೂ ತಂಡಗಳಲ್ಲಿ ವಿಕೆಟ್ ಕೀಪರ್ ಬ್ಯಾಟ್ಸಮನ್ ಗಳು ಅದ್ಭುತ ಫಾರ್ಮನಲ್ಲಿದ್ದಾರೆ. ದಿನೇಶ್ ಕಾರ್ತೀಕ್ ಆರ್ ಸಿ ಬಿ ಗೆ ಪ್ರಮುಖ ಪಿಲ್ಲರ್ ನಂತೆ ನಿಂತಿದ್ದಾರೆ. ಮ್ಯಾಥ್ಯೂ ವೇಡ್ ಅವರ ಕಳಪೆ ಫಾರ್ಮ್ ನಿಂದಾಗಿ ತಂಡದಲ್ಲಿ ಆಯ್ಕೆಯಾಗಿರುವ ವೃದ್ಧಿಮಾನ್ ಸಹಾ ಸಿಕ್ಕಿರುವ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಶಾರ್ಟ್ ಬಾಲ್ ಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಉತ್ತಮ ಲಯದಲ್ಲಿರುವಂತೆ ಕಾಣುತ್ತಿದ್ದಾರೆ.
ಬ್ಯಾಟರ್
ಫಾಫ್ ಡು ಪ್ಲೆಸಿಸ್, ಡೇವಿಡ್ ಮಿಲ್ಲರ್ ಮತ್ತು ಅಭಿನವ್ ಮನೋಹರ್ ಬ್ಯಾಟ್ಸ್ಮನ್ಗಳಾಗಿ ಎರಡೂ ತಂಡಕ್ಕೆ ಲಾಭದಾಕವಾಗಿದ್ದಾರೆ. ಕಳೆದ ಕೆಲವು ಪಂದ್ಯಗಳಲ್ಲಿ ಸುದೀರ್ಘ ಇನ್ನಿಂಗ್ಸ್ ಆಡಲು ಸಾಧ್ಯವಾಗದಿದ್ದರೂ, ಗುಜರಾತ್ ವಿರುದ್ಧ ಮತ್ತೆ ಅವರ ಬ್ಯಾಟ್ ಅಬ್ಬರಿಸುವ ಸಾಧ್ಯತೆ ಇದೆ. ಡುಪ್ಲೆಸಿಸ್ ಗೆ ವೇಗದ ಬೌಲಿಂಗ್ ಇಷ್ಟ. ಗುಜರಾತ್ನ ವೇಗದ ಬೌಲಿಂಗ್ ಲೈನ್ ಅಪ್ ಮುಂದೆ ಹೇಗೆ ರನ್ ಗಳಿಸುತ್ತಾರೆ ಎನ್ನುವುದನ್ನ ಕಾದು ನೋಡಬೇಕು .
ಆಲ್ರೌಂಡರ್ಗಳಾಗಿ, ಹಾರ್ದಿಕ್ ಪಾಂಡ್ಯ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಚೆಂಡು ಮತ್ತು ಬ್ಯಾಟ್ನೊಂದಿಗೆ ಗಮನಾರ್ಹ ಕೊಡುಗೆ ನೀಡಬಲ್ಲರು. ಮ್ಯಾಕ್ಸ್ವೆಲ್ ಟ್ರಬಲ್ಶೂಟರ್ ಪಾತ್ರದಲ್ಲಿ ಮತ್ತೆ ಫಾರ್ಮ್ ಗೆ ಬರಬೇಕಿದೆ.








