GT vs SRH | ಗುಜರಾತ್ ಗೆ ರಣ ರೋಚಕ ಜಯ.. ಸೋಲಿನಲ್ಲೂ ಮನಗೆದ್ದ ಮಲ್ಲಿಕ್
ಸ್ಪೀಡ್ ಗನ್ ಉಮ್ರಾನ್ ಮಲ್ಲಿಕ್ ಆಕ್ರಮಣಕಾರಿ ಬೌಲಿಂಗ್ ನಡುವೆಯೂ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ರಣ ರೋಚಕ ಗೆಲುವು ಸಾಧಿಸಿದೆ.
ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸಿದವು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದ್ರಾಬಾದ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ಗಳ ಅದ್ಭುತ ಮೊತ್ತ ಕಲೆಹಾಕಿತು.
ಈ ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 199 ರನ್ಗಳಿಸಿ, 5 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿತು.
ಇದರೊಂದಿಗೆ ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದೆ.
ಎಸ್ ಆರ್ ಹೆಚ್ ನೀಡಿದ ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಟೈಟನ್ಸ್ ಉತ್ತಮ ಆರಂಭ ಪಡೆಯಿತು.
ವೃದ್ಧಿಮಾನ್ ಸಾಹ 68 ರನ್ ಹಾಗೂ ಶುಭ್ಮನ್ ಗಿಲ್ 22 ರನ್ ಸಿಡಿಸಿ ಮೊದಲ ವಿಕೆಟ್ಗೆ 69 ರನ್ಗಳ ಅದ್ಭುತ ಆರಂಭ ನೀಡಿದರು.
ಆದರೆ ನಂತರ ಬಂದ ನಾಯಕ ಹಾರ್ದಿಕ್ ಪಾಂಡ್ಯ 10 ರನ್ ಹಾಗೂ ಡೇವಿಡ್ ಮಿಲ್ಲರ್ 17 ರನ್ ಗಳಿಸಿ ಬೇಗನೇ ಪೆವಿಲಿಯನ್ ಸೇರಿಕೊಂಡರು.
ಜವಾಬ್ದಾರಿಯ ಆಟವಾಡಿದ ವೃದ್ಧಿಮಾನ್ ಸಾಹ, ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮಿಂಚಿದರು.
ನಿರ್ಣಾಯಕ ಹಂತದಲ್ಲಿ ದಾಳಿಗೆ ಬಂದ ಉಮ್ರಾನ್ ಮಲ್ಲಿಕ್ ಟೈಟಾನ್ಸ್ ಗೆ ನಡುಕ ಹುಟ್ಟಿಸಿದರು.
ಗುಜರಾತ್ ಟೈಟನ್ಸ್ ಬ್ಯಾಟ್ಸ್ಮನ್ಗಳಿಗೆ ಸಂಪೂರ್ಣ ಕಡಿವಾಣ ಹಾಕಿದ ಉಮ್ರಾನ್, 4 ಓವರ್ಗಳಲ್ಲಿ 25 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆದು ಮಿಂಚಿದರು.
ಈ ಹಂತದಲ್ಲಿ ಜೊತೆಯಾದ ರಾಹುಲ್ ತೇವಾಟಿಯಾ, ರಶೀದ್ ಖಾನ್ ಅಜೇಯ 59 ರನ್ ಗಳ ಜೊತೆಯಾಟದಿಂದ ತಂಡಬವನ್ನು ಗೆಲುವಿನ ತಡ ಸೇರಿಸಿದರು.
ರಾಹುಲ್ ತೇವಾಟಿಯಾ 21 ಎಸೆತಗಳಲ್ಲಿ 40 ರನ್ ಸಿಡಿಸಿದ್ರೆ, ರಶೀದ್ ಖಾನ್ 11 ಎಸೆತಗಳಲ್ಲಿ 31 ರನ್ ಬಾರಿಸಿದರು.
ಪ್ರಮುಖವಾಗಿ ಕೊನೆ ಓವರ್ನಲ್ಲಿ ಗೆಲುವಿಗಾಗಿ 22 ರನ್ಗಳ ಅಗತ್ಯವಿತ್ತು.
ಈ ವೇಳೆ ಬೌಲಿಂಗ್ ದಾಳಿಗಿಳಿದ ಮಾರ್ಕೋ ಜಾನ್ಸನ್ ಅವರಿಗೆ, ತೇವಾಟಿಯಾ ಹಾಗೂ ರಶೀದ್ (6, 1, 6, 0, 6, 6) 25 ರನ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಇದಕ್ಕೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಸನ್ರೈಸರ್ಸ್ ಹೈದ್ರಾಬಾದ್, ನಾಯಕ ಕೇನ್ ವಿಲಿಯಂಸನ್ 5 ರನ್ ಹಾಗೂ ರಾಹುಲ್ ತ್ರಿಪಾಠಿ 16 ರನ್ ಗಳಿಸಿ ಬಹುಬೇಗನೆ ವಿಕೆಟ್ ಕಳೆದುಕೊಂಡರು,.
3ನೇ ವಿಕೆಟ್ಗೆ ಜೊತೆಯಾದ ಅಭಿಷೇಕ್ ಶರ್ಮ 65 ರನ್ ಹಾಗೂ ಐಡೆನ್ ಮಾರ್ಕ್ರಂ 56 ರನ್ ಸಿಡಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು.
ನಂತರ ಬಂದ ಪೂರನ್ 3 ರನ್, ವಾಷಿಂಗ್ಟನ್ ಸುಂದರ್ 3 ರನ್ ಸಿಡಿಸಿದರು.
ಕೊನೆ ಹಂತದಲ್ಲಿ ಬಂದ ಶಶಾಂಕ್ ಸಿಂಗ್ ಆರು ಎಸೆತಗಳಲ್ಲಿ ಅಜೇಯ 25* ರನ್ ಗಳಿಸಿ ತಂಡದ ಮೊತ್ತ 190ರ ಗಡಿ ದಾಟಿಸಿದರು. IPL 2022 GT vs SRH Highlights gujarat beat hyderabad